Site icon Vistara News

Ram Mandir : ರಾಮನ ಕುರಿತ 12 ಅತ್ಯುತ್ತಮ ಹಾಡು, ಭಜನೆಗಳ ವಿಡಿಯೊ ಇಲ್ಲಿದೆ

Ram Songs

ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ. ಶತಕೋಟಿ ಭಾರತೀಯರು ಈ ಅಪೂರ್ವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಜನರು ರಾಮನ ಭಕ್ತಿಯಲ್ಲಿ ಮಿಂದೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮನ ಕುರಿತು ಭಜನೆಗಳು ಹಾಗೂ ಹಾಡುಗಳು ಎಲ್ಲೆಡೆ ಕೇಳಿ ಬರುತ್ತಿವೆ. ನಿಮಗೂ ರಾಮನ ಕಥೆಯನ್ನು ಹೇಳುವ ಭಜನೆಯನ್ನು ಆಲಿಸುವ ಮನಸ್ಸಾಗಿದ್ದರೆ ಇಲ್ಲಿದೆ ನೋಡಿ 10 ಭಜನೆಗಳ ಪಟ್ಟಿ.

ಇನ್ನಷ್ಟು ಬೇಕು ಎನ್ನ ಹೃದಯಕ್ಕೆ ರಾಮ

ಗಜಾನನ ಶರ್ಮಾ ಅವರು ರಚಿಸಿರುವ ಈ ಹಾಡು ಕನ್ನಡಿಗರ ಪಾಲಿಗೆ ಅತ್ಯಂತ ಜನಪ್ರಿಯ ಹಾಡು. ಸಾಕೇತ್ ಶರ್ಮಾ ಇದಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಈ ಹಾಡನ್ನು ಸುಪ್ರಭಾ ಕೆ. ವಿ ಹಾಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿದ್ದರು.

ಪೂಜಿಸಲಿಂದೇ ಹೂಗಳ ತಂದೆ

ಇದು ರಾಜ್​ಕುಮಾರ್​ ನಟನೆಯ ಎರಡು ಕನಸು ಸಿನಿಮಾದ ಹಾಡು. ಚಿ. ಉದಯ ಶಂಕರ್​ ಇದನ್ನು ರಚಿಸಿದ್ದು ರಾಜನ್​-ನಾಗೇಂದ್ರ ಸಂಗೀತ ನೀಡಿದ್ದಾರೆ. ಎಸ್​. ಜಾನಕಿ ಹಾಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಾಡನ್ನು ಮೆಚ್ಚಿದ್ದರು. ಈ ಮೇಲಿನ ವಿಡಿಯೊವನ್ನು ಶಿವಶ್ರೀ ಸ್ಕಂದಪ್ರಸಾದ್ ಅವರು ಹಾಡಿದ್ದಾರೆ.

ರಘುಪತಿ ರಾಘವ್​ ರಾಜಾರಾಮ್​

ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧದ ಹೋರಾಟದಲ್ಲಿ ಕೋಮು ಸೌಹಾರ್ದತೆಯನ್ನು ನಿರ್ಮಿಸಲು ರಾಮ ಭಜನೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ಅವರು ಹಾಡುತ್ತಿರುವ ರಘುಪತಿ ರಾಘವ್​ ರಾಜಾರಾಮ್​ ದಶಕಗಳಿಂದ ಜನಪ್ರಿಯ ಹಾಡು. ಮೂಲತಃ ಲಕ್ಷ್ಮಣಾಚಾರ್ಯರು ಸಂಯೋಜಿಸಿದ ಶ್ರೀ ನಾಮ ರಾಮಾಯಣಂ ಸ್ತೋತ್ರದ ಆಯ್ದ ಭಾಗ ಇದು. ಇದನ್ನು ಮಹಾತ್ಮ ಗಾಂಧಿ ಜನಪ್ರಿಯಗೊಳಿಸಿದರು. ಅವರು ಈಶ್ವರ್ ಅಲ್ಲಾ ತೇರೋ ನಾಮ್. ಸಬ್ಕೊ ಸನ್ಮತಿ ದೇ ಭಗವಾನ್ ಎಂದು ಸೇರಿಕೊಂಡಿದ್ದಾರೆ.

ರವೀಂದ್ರ ಜೈನ್ ಅವರ ಮಂಗಲ್​​ ಭವನ್​ ಅಮಂಗಲ್ ಹರಿ

ಶ್ರೀ ರಾಮ್ ಭಜನೆಯ ವಿಷಯಕ್ಕೆ ಬಂದಾಗ ಇದು ಅತ್ಯುನ್ನತ ಶ್ರೇಷ್ಠ ಪದ್ಯಗಳಲ್ಲಿ ಒಂದು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡ ಭಜನೆಗಳ ಪಟ್ಟಿಯಲ್ಲಿ ಇದು ಅಗ್ರಸ್ಥಾನ ಪಡೆದಿದೆ. ಜೈ ಜೈ ಶ್ರೀ ರಾಮ್ ಆಲ್ಬಂಗಾಗಿ ರವೀಂದ್ರ ಜೈನ್ ಬರೆದು ಸಂಯೋಜಿಸಿರುವ ಈ ಭಾವಪೂರ್ಣ ಭಜನೆಯಲ್ಲಿ ಗಾಯಕರಾದ ಸತೀಶ್ ಡೆಹ್ರಾ, ದೀಪ್ ಮಾಲಾ ಮತ್ತು ರಚನಾ ಕೂಡ ಇದ್ದಾರೆ.

ಹಮ್ ಕಥಾ ಸುನ್​ತೆ

ಮೂಲತಃ ಈ ಹಾಡು ದೂರದರ್ಶನದ ಪ್ರಸಿದ್ಧ ದೂರದರ್ಶನ ಸರಣಿಯಾದ ರಾಮಾಯಣದ ಒಂದು ಭಾಗವಾಗಿದೆ. ಇದನ್ನು ಮೊದಲು ಜನವರಿ 1987ರಲ್ಲಿ ಪ್ರಸಾರ ಮಾಡಲಾಯಿತು. ಈ ಜನಪ್ರಿಯ ಧಾರಾವಾಹಿಯಲ್ಲಿ ಅರುಣ್ ಗೋವಿಲ್ ರಾಮನಾಗಿ, ದೀಪಿಕಾ ಚಿಖಾಲಿಯಾ ಸೀತೆಯಾಗಿ ಮತ್ತು ದಾರಾ ಸಿಂಗ್ ಹನುಮಾನ್ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ರಮಾನಂದ ಸಾಗರ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಭಜನೆಯು ಲವ-ಕುಶರು ಭಗವಾನ್ ಶ್ರೀ ರಾಮನ ಸ್ತುತಿಸುತ್ತಿರುವ ಸಂದರ್ಭವಾಗಿದೆ. ಈ ಹಾಡನ್ನು ರವೀಂದ್ರ ಜೈನ್ ಸಂಯೋಜಿಸಿ ಬರೆದಿದ್ದಾರೆ ಮತ್ತು ಕವಿತಾ ಕೃಷ್ಣಮೂರ್ತಿ, ಹೇಮಲತಾ ಮತ್ತು ರವೀಂದ್ರ ಜೈನ್ ಹಾಡಿದ್ದಾರೆ.

ಹೇ ರಾಮ್ ಹೇ ರಾಮ್ – ಶ್ರೀ ರಾಮ್ ಧುನ್

ಜಗಜಿತ್ ಸಿಂಗ್ ಅವರ ಭಾವಪೂರ್ಣ ಭಜನೆ ಹೇ ರಾಮ್ ಹೇ ರಾಮ್, ಶ್ರೀ ರಾಮ್ ಭಜನಾ ಪಟ್ಟಿಯಲ್ಲಿ ಇರಲೇಬೇಕು. ಇದನ್ನು ಸುದರ್ಶನ್ ಫಕೀರ್ ಬರೆದಿದ್ದಾರೆ ಮತ್ತು ದಿವಂಗತ ಘಝಲ್ ಮಾಂತ್ರಿಕ ಜಗಜಿತ್ ಸಿಂಗ್ ಸಂಯೋಜಿಸಿ ಹಾಡಿದ್ದಾರೆ.

ಜೈ ರಾಮ್ ರಾಮ ರಮಣಂ ಶರಣಂ

ಈ ಶ್ರೀ ರಾಮ್ ಭಜನೆಯನ್ನು ದಂತಕಥೆ ಲತಾ ಮಂಗೇಶ್ಕರ್ ಅನೇಕ ವರ್ಷಗಳ ಹಿಂದೆ ಹಾಡಿದ್ದಾರೆ. ಮೂಲ ವೀಡಿಯೊವನ್ನು ಪ್ರಸಾರ ಭಾರತಿಯ ಆರ್ಕೈವ್​ನಲ್ಲಿ ಲಭ್ಯವಿದೆ.

ರಾಮ್ ಕಾ ಧಾಮ್ ಗೀತೆ

ಕೈಲಾಶ್ ಖೇರ್ ಅವರ ರಾಮ್ ಕಾ ಧಾಮ್ ಗೀತೆ ಇತ್ತೀಚೆಗೆ ಬಿಡುಗಡೆಯಾದ ಭಜನೆಗಳಲ್ಲಿ ಒಂದಾಗಿದೆ. ಇದು ಅಯೋಧ್ಯೆ ಧಾಮದ ಭವ್ಯವಾದ ರಾಮ ಮಂದಿರದ ಕುರಿತ ಹಾಡಾಗಿದೆ. ಮಿಲಿಂದ್ ಪನ್ವಾರ್ ಬರೆದಿರುವ ಈ ಆಕರ್ಷಕ ಹಾಡನ್ನು ಅನು ಮಲಿಕ್ ಸಂಯೋಜಿಸಿದ್ದಾರೆ. ಅಮನ್ ಪಂತ್ ಸಂಗೀತ ಸಂಯೋಜಿಸಿದ್ದಾರೆ.

ರಾಮ್ ಸಿಯಾ ರಾಮ್

ಇದು ಕಳೆದ ವರ್ಷದ ಹೆಚ್ಚು ಪ್ಲೇ ಮಾಡಿದ ಹಾಡುಗಳಲ್ಲಿ ಒಂದಾಗಿದೆ. ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಇತರರು ನಟಿಸಿರುವ ಓಂ ರಾವತ್​ ನಿರ್ದೇಶನದ ಆದಿಪುರುಷ್ ಚಿತ್ರದ ಹಾಡಿದು. ಈ ಹಾಡು ಮನೋಜ್ ಮುಂತಾಶಿರ್ ಶುಕ್ಲಾ ಅವರ ಹೃದಯಸ್ಪರ್ಶಿ ಸಾಹಿತ್ಯಕ್ಕಾಗಿ ಹೃದಯಗಳನ್ನು ಗೆದ್ದಿದೆ. ಸಂಗೀತ ಸಂಯೋಜಕರಾದ ಸಚೇತ್ ಟಂಡನ್, ಪರಂಪರಾ ಟಂಡನ್ ಅವರು ಮನಮೋಹಕವಾಗಿ ಹಾಡಿದ್ದಾರೆ.

ಜೈ ರಘುನಂದನ್ ಜೈ ಶ್ರೀರಾಮ್

ರಾಜೇಂದ್ರ ಕುಮಾರ್, ರಾಜ್ ಕುಮಾರ್, ಆಶಾ ಪರೇಖ್, ಶುಭಾ ಖೋಟೆ, ಆಘಾ, ಮಿನು ಮುಮ್ತಾಜ್, ಕನ್ಹಯ್ಯ ಲಾಲ್ ಮತ್ತು ಇತರರು ನಟಿಸಿದ 1961ರ ಜನಪ್ರಿಯ ಚಿತ್ರ ಘರಾನಾದ ಭಾಗವಾಗಿದ್ದ ಕ್ಲಾಸಿಕ್ ಭಜನ್ ಇದು. ರವಿ ಸಂಯೋಜಿಸಿದ ಈ ಶ್ರೀ ರಾಮ್ ಭಜನೆಯನ್ನು ಅಪ್ರತಿಮ ದಂತಕತೆಗಳಾದ ಮೊಹಮ್ಮದ್ ರಫಿ ಮತ್ತು ಆಶಾ ಭೋಂಸ್ಲೆ ಹಾಡಿದ್ದಾರೆ.

ಶ್ರೀ ರಾಮ್ ಚಂದ್ರ ಕೃಪಾಲು ಭಜಮಾನ್

ಈ ಶ್ರೀ ರಾಮ್ ಭಜನೆಯನ್ನು ಕೇದಾರ್ ಪಂಡಿತ್ ಸಂಯೋಜಿಸಿದ್ದಾರೆ. ಅನುರಾಧಾ ಪೊದ್ವಾಲ್​​ ಹಾಡಿದ್ದಾರೆ. ಇದು 1988 ರ ತುಳಸಿ ಭಜನಾಮೃತ್ ಆಲ್ಬಂನ ಭಾಗವಾಗಿತ್ತು. ಈ ಸುಂದರವಾದ ಪ್ರಾರ್ಥನಾ ಗೀತೆಯನ್ನು ಸಂತ ತುಳಸೀದಾಸರು ಭಗವಾನ್ ಶ್ರೀ ರಾಮ ಮತ್ತು ಅವರ ವಿಶಿಷ್ಟ ಗುಣಲಕ್ಷಣಗಳನ್ನು ವೈಭವೀಕರಿಸುವ ಮೂಲಕ ಬರೆದಿದ್ದಾರೆ.

ಪಾಲ್ ಪಾಲ್ ಹೈ ಭರಿ

ಜಾವೇದ್ ಅಖ್ತರ್ ಬರೆದ ಮತ್ತು ಎ.ಆರ್.ರೆಹಮಾನ್ ಸಂಯೋಜಿಸಿದ ಈ ಶ್ರೀ ರಾಮ್ ಭಜನ್ ಶಾರುಖ್ ಖಾನ್, ಗಾಯತ್ರಿ ಜೋಶಿ ಅಭಿನಯದ ಸ್ವದೇಸ್ ಚಿತ್ರದ ಭಾಗವಾಗಿತ್ತು. ಈ ಭಾವಪೂರ್ಣ ಭಜನೆಯನ್ನು ಮಧುಶ್ರೀ, ವಿಜಯ್ ಪ್ರಕಾಶ್ ಮತ್ತು ನಿರ್ದೇಶಕ ಅಶುತೋಷ್ ಗೋವಾರಿಕರ್ ಹಾಡಿದ್ದಾರೆ.

ರಾಮ್ ಆಯೆಂಗೆ

ಈ ಶ್ರೀ ರಾಮ್ ಭಜನೆಯ್ನು ಗೀತರಚನೆಕಾರ-ಬರಹಗಾರ ಮನೋಜ್ ಮುಂಡಾಶಿರ್ ರಚಿಸಿದ್ದಾರೆ. ಪಾಯಲ್ ದೇವ್ ಸಂಯೋಜಿಸಿದ ಮತ್ತು ಸುಮಧುರ ಗಾಯಕ ವಿಶಾಲ್ ಮಿಶ್ರಾ ಹಾಡಿರುವ ಈ ಸಿಂಗಲ್ ನಲ್ಲಿ ದೀಪಿಕಾ ಚಿಖ್ಲಿಯಾ ಮತ್ತು ಸಮೀರ್ ದೇಶಪಾಂಡೆ ನಟಿಸಿದ್ದಾರೆ.

Exit mobile version