Site icon Vistara News

Ram Temples: ಅಯೋಧ್ಯೆ ಜತೆಗೆ ದೇಶಾದ್ಯಂತ ಇವೆ 7 ಭವ್ಯ ರಾಮಮಂದಿರಗಳು; ಭೇಟಿ ಕೊಡಿ

Ram Tirath Temple

Amid Ayodhya Ram Mandir fete, here are 7 grand Ram Temples across India

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಗೆ ಕೇವಲ ನಾಲ್ಕೇ ದಿನ ಉಳಿದಿವೆ. ರಾಮನ ನಗರಿಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ದೇಶದ ಕೋಟ್ಯಂತರ ಭಕ್ತರು ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದಾರೆ. ಆದರೆ, ಅಯೋಧ್ಯೆಯ ರಾಮಮಂದಿರದ ಜತೆಗೆ ಭಾರತದ ಹಲವೆಡೆ ಶ್ರೀರಾಮನ ಭವ್ಯ (Ram Temples) ದೇವಾಲಯಗಳಿವೆ. ಅಂತಹ ಏಳು ಭವ್ಯ ದೇವಾಲಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎರಿ-ಕಥಾ ರಾಮರ್‌ ದೇವಾಲಯ, ತಮಿಳುನಾಡು

ತಮಿಳುನಾಡಿನ ಮಧುರಾಂತಕಂನಲ್ಲಿರುವ ಎರಿ-ಕಥಾ ರಾಮರ್‌ ದೇವಾಲಯವು ದೇಶದ ಪ್ರಮುಖ ರಾಮಮಂದಿರಗಳಲ್ಲಿ ಒಂದಾಗಿದೆ. ರಾಮನು ರಾವಣನನ್ನು ಸೋಲಿಸಿ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ತೆರಳುವಾಗ ಮಧುರಾಂತಕಂನಲ್ಲಿ ಪುಷ್ಪಕ ವಿಮಾನ ನಿಲ್ಲಿಸಿದ್ದರು. ಇದರ ಸ್ಮರಣಾರ್ಥ ಎರಿ-ಕಥಾ ರಾಮರ್‌ ದೇವಾಲಯ ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ.


ಕೋದಂಡರಾಮ ದೇವಾಲಯ, ಆಂಧ್ರಪ್ರದೇಶ


ಆಂಧ್ರಪ್ರದೇಶದ ಕಡಪ ಜಿಲ್ಲೆ ವೊಂಟಿಮಿಟ್ಟದಲ್ಲಿ ಕೋದಂಡರಾಮ ದೇವಾಲಯ ಇದೆ. ವೊಂಟುಡು ಹಾಗೂ ಮಿತ್ತುಡು ಎಂಬ ದರೋಡೆಕೋರರು ರಾಮನ ಭಕ್ತರಾದ ಬಳಿಕ ಈ ದೇವಾಲಯ ನಿರ್ಮಿಸಿದರು ಎಂದು ತಿಳಿದುಬಂದಿದೆ.

ರಾಮ ತೀರಥ್‌ ದೇವಾಲಯ, ಪಂಜಾಬ್‌

ಪಂಜಾಬ್‌ನ ಅಮೃತಸರದಲ್ಲಿ ರಾಮ ತೀರಥ್‌ ದೇವಾಲಯವಿದೆ. ಸೀತೆಯ ಮಕ್ಕಳಾದ ಲವ-ಕುಶ ಜನ್ಮದೊಂದಿಗೆ ಈ ಜಾಗವು ನಂಟು ಹೊಂದಿದೆ. ಇಲ್ಲಿಗೆ ಬಂದರೆ ಎಲ್ಲ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಲಂಕಾ ದಿಗ್ವಿಜಯದ ನಂತರ ಮಹರ್ಷಿ ವಾಲ್ಮೀಕಿ ಅವರು ಸೀತೆಗೆ ಆಶ್ರಯ ನೀಡಿದ ತಾಣವೂ ಇದಾಗಿದೆ.

ಕೋದಂಡರಾಮ ದೇವಾಲಯ, ಕರ್ನಾಟಕ

ಚಿಕ್ಕಮಗಳೂರಿನ ಹಿರೆಮಗಳೂರಿನಲ್ಲಿ ಕೋದಂಡರಾಮ ದೇವಾಲಯವಿದೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ಭಾರ್ಗವಪುರಿಯಲ್ಲಿ ತಪಸ್ಸು ಮಾಡಿದ ಪರಶುರಾಮ ಅವರಿಗಾಗಿ ಚಾಲುಕ್ಯರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಇದಕ್ಕೆ 1,200 ವರ್ಷಗಳ ಇತಿಹಾಸವಿದೆ.

ತ್ರಿಪ್ರಯಾರ್‌ ಶ್ರೀರಾಮ ದೇಗುಲ, ಕೇರಳ

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ತ್ರಿಪ್ರಯಾರ್‌ನಲ್ಲಿ ಶ್ರೀ ರಾಮಸ್ವಾಮಿ ದೇವಾಲಯ ಇದೆ. ನಾಲಂಬಲಂಗಳಲ್ಲಿ ರಾಜ ದಶರಥನ ಮಕ್ಕಳಿಗೆ ನಿರ್ಮಿಸಿದ ನಾಲ್ಕು ದೇಗುಲಗಳಲ್ಲಿ ಇದು ಮೊದಲನೆಯದು.

ರಾಮರಾಜ ದೇವಾಲಯ, ಮಧ್ಯಪ್ರದೇಶ

ಮಧ್ಯಪ್ರದೇಶದ ಓರ್ಚಾದಲ್ಲಿ ರಾಮರಾಜ ದೇವಾಲಯವಿದೆ. ಇದು ಅರಮನೆಯಲ್ಲಿ ರಾಮನು ರಾಜನಾಗಿ ಕುಳಿತಿರುವ ರೀತಿಯಲ್ಲಿ ನಿರ್ಮಿಸಿದ ಏಕೈಕ ದೇವಾಲಯವಾಗಿದೆ. ನಿತ್ಯವೂ ರಾಮನಿಗೆ ಪೂಜೆ ನಡೆಯುತ್ತದೆ. ಪದ್ಮಾಸನ ಹಾಕಿ ಕುಳಿತಿರುವ ರಾಮನ ಕೈಯಲ್ಲಿ ಖಡ್ಗವೂ ಇದೆ.

ಶ್ರೀ ವಿಜಯರಾಘವ ಪೆರುಮಾಳ್‌ ದೇವಾಲಯ, ತಮಿಳುನಾಡು

ತಮಿಳುನಾಡಿನ ಕಾಂಚಿಪುರಂ ಜಿಲ್ಲೆ ತಿರುಪ್ಪುಕುಳಿಯಲ್ಲಿ ಶ್ರೀ ವಿಜಯರಾಘವ ಪೆರುಮಾಳ್‌ ದೇವಾಲಯವಿದೆ. ಇದು ವಿಷ್ಣುವಿಗೆ ಸಮರ್ಪಿಸಿದ 108 ದೇಶಂಗಳಲ್ಲಿ ಒಂದಾಗಿದೆ. ಇಲ್ಲಿ ರಾಮನು ಜಟಾಯು ಪಕ್ಷಿಗೆ ಅಂತಿಮ ವಿಧಿವಿಧಾನ ನೆರವೇರಿಸಿದ ಎಂಬ ನಂಬಿಕೆ ಇದೆ. ಗರ್ಭಗುಡಿಯಲ್ಲಿ ವಿಜಯರಾಘವ ಪೆರುಮಾಳ್‌ನ ತೊಡೆಯ ಮೇಲೆ ಜಟಾಯು ಕುಳಿತಿರುವಂತೆ ಚಿತ್ರಿಸಲಾಗಿದೆ.

ಇದನ್ನೂ ಓದಿ: Ram Mandir: ಮಂದಿರ ಉದ್ಘಾಟನೆ ದಿನ ‘ರಾಷ್ಟ್ರೀಯ ರಜೆ’ ಘೋಷಿಸಲು ರಾಷ್ಟ್ರಪತಿಗೆ ಮನವಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version