ಅಯೋಧ್ಯೆ: ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಕ್ಷಣಕ್ಷಣದ ಮಾಹಿತಿ (Ayodhya Ram Mandir Live) ಇಲ್ಲಿದೆ…
ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಹೆರಿಗೆ; ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಜನನ!
ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದು ಹೆರಿಗೆಗೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಭಾರಿ ಬೇಡಿಕೆ ಉಂಟಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಐತಿಹಾಸಿಕ ದಿನದಂದು (ಜ.22) ಮಕ್ಕಳನ್ನು ಪಡೆಯಲು ಅನೇಕ ಪೋಷಕರು ಬಯಸಿದ್ದರು. ಇದೀಗ ರಾಜಧಾನಿಯಲ್ಲಿ ಸೋಮವಾರ ಸಂಜೆವರೆಗೆ 60ಕ್ಕೂ ಹೆಚ್ಚು ಮಕ್ಕಳು ಜನ್ಮ ಪಡೆದಿರುವುದು ಕಂಡುಬಂದಿದೆ.
Ram Mandir: ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಹೆರಿಗೆ; ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಜನನ!
Karnataka Weather : ಬೀಸಲಿದೆ ಬಿಸಿಗಾಳಿ; ರಾಜ್ಯಾದ್ಯಂತ ಏರಲಿದೆ ಕನಿಷ್ಠ ತಾಪಮಾನ
ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್), ಎಚ್ಎಲ್ಎ ಏರ್ಪೋರ್ಟ್ ಸುತ್ತಮುತ್ತ ಬೆಳಗಿನ ಜಾವ ಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 17 ಡಿ.ಸೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
Karnataka Weather : ಬೀಸಲಿದೆ ಬಿಸಿಗಾಳಿ; ರಾಜ್ಯಾದ್ಯಂತ ಏರಲಿದೆ ಕನಿಷ್ಠ ತಾಪಮಾನ
ರಾಮ ಮಂದಿರದಿಂದ ತೆರಳಿ ಶಿವ ಮಂದಿರದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.
ರಾಮ ಅಗ್ನಿಯಲ್ಲ, ರಾಮ ಶಕ್ತಿ: ಮೋದಿ
ರಾಮ ಅಗ್ನಿಯಲ್ಲ, ರಾಮ ಶಕ್ತಿ, ಬೆಳಕು. ಅವನು ಎಲ್ಲರಿಗೂ ಬೇಕಾದವನು. ವಿರೋಧಿಸುವವರೂ ಒಂದಲ್ಲ ಒಂದು ದಿನ ಆತನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.
ನರೇಂದ್ರ ಮೋದಿ ಅವರನ್ನು ತಪಸ್ವಿ ಅಂದ ಭಾಗವತ್
“ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ತುಂಬ ವರ್ಷಗಳಿಂದ ಗಮನಿಸುತ್ತಿದ್ದೇನೆ. ಅವರೊಬ್ಬ ತಪಸ್ವಿ ಎಂಬುದರಲ್ಲಿ ಎರಡು ಮಾತಿಲ್ಲ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. “ರಾಮಮಂದಿರ ನಿರ್ಮಾಣದಿಂದ ದೇಶಕ್ಕೆ ದೇಶವೇ ಖುಷಿಯಲ್ಲಿದೆ. ಇದು ಸುವರ್ಣ ಯುಗದ ಸಂಕೇತವಾಗಿದೆ. ನವಭಾರತ ನಿರ್ಮಾಣದ ದ್ಯೋತಕವಾಗಿದೆ. ಮೋದಿ ಅವರು 11 ದಿನಗಳ ಕಠಿಣ ಅನುಷ್ಠಾನ ಕೈಗೊಂಡರು. ಏಕೆಂದರೆ, ಅವರೊಬ್ಬ ತಪಸ್ವಿ” ಎಂದು ಹೇಳಿದರು.