Site icon Vistara News

Ayodhya Ram Mandir Live: ರಾಮಮಂದಿರ ಕನಸು ನನಸು; ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ

Rama Eye

ಅಯೋಧ್ಯೆ: ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಕ್ಷಣಕ್ಷಣದ ಮಾಹಿತಿ (Ayodhya Ram Mandir Live) ಇಲ್ಲಿದೆ…

B Somashekhar

ಕರುನಾಡ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಯೋಗಿ ಧನ್ಯವಾದ

ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಕರ್ನಾಟಕದ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಯೋಗಿ ಆದಿತ್ಯನಾಥ್‌ ಅವರು ಧನ್ಯವಾದ ತಿಳಿಸಿದರು. “ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿಗೆ ಧನ್ಯವಾದಗಳು. ನಮ್ಮ ಮನಸ್ಸಿನಲ್ಲಿರುವ ರಾಮನನ್ನೇ ಅವರು ಕೆತ್ತಿದ್ದಾರೆ” ಎಂದು ಯೋಗಿ ಆದಿತ್ಯನಾಥ್‌ ಹೇಳಿದರು.

B Somashekhar

ಪದಗಳೇ ಬರುತ್ತಿಲ್ಲ ಎಂದ ಯೋಗಿ ಆದಿತ್ಯನಾಥ್‌

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಮಾತನಾಡಿದ ಯೋಗಿ ಆದಿತ್ಯನಾಥ್‌, “ರಾಮಮಂದಿರ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ನನಗೆ ಮಾತನಾಡಲು ಪದಗಳೇ ಬರುತ್ತಿಲ್ಲ. ಮನಸ್ಸಿಂದು ಭಾವುಕವಾಗಿದೆ. 500 ವರ್ಷಗಳ ಕನಸು ಈಗ ನನಸಾಗಿದೆ. ಜಾತಿಯ ಸಂಕೋಲೆ ಇಲ್ಲದೆ ರಾಜಕಾರಣಿಗಳು, ಸಂತರು, ಸಾಧುಗಳು, ಬುದ್ಧಿಜೀವಿಗಳು ರಾಮಮಂದಿರಕ್ಕಾಗಿ ಹೋರಾಡಿದರು. ಹಾಗಾಗಿಯೇ, ಎಲ್ಲಿ ರಾಮಮಂದಿರವನ್ನು ನಿರ್ಮಿಸಲು ಪಣ ತೊಟ್ಟಿದ್ದೇವೋ, ಅಲ್ಲಿಯೇ ರಾಮಮಂದಿರ ನಿರ್ಮಿಸಲು ಸಾಧ್ಯವಾಯಿತು” ಎಂದು ಯೋಗಿ ಆದಿತ್ಯನಾಥ್‌ ಹೇಳಿದರು.

Sukhesha Padibagilu

ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ದೇವಸ್ಥಾನದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

B Somashekhar

ಉಪವಾಸ ಅಂತ್ಯಗೊಳಿಸಿದ ಮೋದಿ

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಕೈಗೊಂಡಿದ್ದ 11 ದಿನಗಳ ಉಪವಾಸವನ್ನು ಪ್ರಾಣಪ್ರತಿಷ್ಠೆ ಬಳಿಕ ಅಂತ್ಯಗೊಳಿಸಿದ್ದಾರೆ.

Deepa S

Selfie With Ramotsava : ಇಲ್ಲಿದ್ದಾರೆ ಕರುನಾಡ ರಾಮಲಲ್ಲಾ; ಎಲ್ಲೆಲ್ಲೂ ರಾಮನನ್ನೇ ಕಂಡೆನಲ್ಲ!

Selfie With Ramotsava : ದೇಶಾದ್ಯಂತ ರಾಮೋತ್ಸವದ ಸಡಗರ. ಈ ಐತಿಹಾಸಿಕ ದಿನ ನಾಡಿನ ಜನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಕುರಿತ ಫೋಟೊಗಳನ್ನು ಅವರು ವಿಸ್ತಾರ ನ್ಯೂಸ್ ಜತೆ (Ram Mandir) ಹಂಚಿಕೊಂಡಿದ್ದಾರೆ.

Selfie With Ramotsava : ಇಲ್ಲಿದ್ದಾರೆ ಕರುನಾಡ ರಾಮಲಲ್ಲಾ; ಎಲ್ಲೆಲ್ಲೂ ರಾಮನನ್ನೇ ಕಂಡೆನಲ್ಲ!
Exit mobile version