ಕಂಪ್ಲಿ: ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮೀನುಗಾರ ಸಮುದಾಯದ ಆರಾಧ್ಯ ದೈವ ಶ್ರೀ ಕಾಳಮ್ಮ ದೇವಿಯ ಪೂಜಾ ಮಹೋತ್ಸವವು ಮಂಗಳವಾರ ಅದ್ಧೂರಿಯಾಗಿ (Ballari News) ಜರುಗಿತು.
ಸೋಮವಾರ ಸಂಜೆ ಗಂಗೆಸ್ಥಳ ಮತ್ತು ಅಗ್ನಿ ಕುಂಭೋತ್ಸವ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಮೆರವಣಿಗೆಯಲ್ಲಿ ಮೂವರು ಭಕ್ತಾದಿಗಳು ಬಾಯಿಗೆ 12 ಅಡಿ ಉದ್ದದ ತ್ರಿಶೂಲ ಅಸ್ತ್ರವನ್ನು ಹಾಕಿಸಿಕೊಂಡು ಕಲ್ಲುಗುಂಡು, ಇಬ್ಬರು ಭಕ್ತಾದಿಗಳು ಆಟೋರಿಕ್ಷಾ, ಇಬ್ಬರು ಭಕ್ತರು ಕಾರುಗಳನ್ನು ತಮ್ಮ ಬೆನ್ನುಗಳಿಗೆ ಹಾಕಿದ್ದ ಕಬ್ಬಿಣದ ಕೊಕ್ಕೆಗಳಿಂದ ಎಳೆದು ತಮ್ಮ ಹರಕೆ ತೀರಿಸಿದರು. ಟ್ರ್ಯಾಕ್ಟರ್‌ಗೆ ಹಾಕಲಾಗಿದ್ದ ಬೊಂಬುಗಳಿಗೆ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ಜೋತು ಬೀಳುವ ಮೂಲಕ ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಅರ್ಜಿ ಸಲ್ಲಿಸಿ
ಮೆರವಣಿಗೆಯು ಶ್ರೀ ಕಾಳಮ್ಮ ದೇವಸ್ಥಾನದಿಂದ ಶ್ರೀ ಸುಂಕಲಮ್ಮ ದೇವಸ್ಥಾನದ ವರೆಗೂ ಜರುಗಿತು. ಭಕ್ತಾದಿಗಳು ರಸ್ತೆಯುದ್ದಕ್ಕೂ ತಮ್ಮ ಬೆನ್ನಿಗೆ ಹಾಕಲಾಗಿದ್ದ ಕೊಕ್ಕೆಯಿಂದ ತಮ್ಮ ಹರಕೆಯಂತೆ ಸುಡು ಬಿಸಿಲ ಮಧ್ಯೆಯು ಗುಂಡು, ಆಟೋ, ಕಾರುಗಳನ್ನು ಎಳೆದೊಯ್ದು ಭಕ್ತಿ ಸಮರ್ಪಿಸಿದರು.
ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದಂತಹ ಭಕ್ತರು ವಿಶೇಷ ಆಚರಣೆಯನ್ನು ನೋಡಿ ಕಣ್ ತುಂಬಿಕೊಳ್ಳುವ ಮೂಲಕ ಆಶ್ಚರ್ಯ ಚಕಿತರಾದರು. ಕಾರ್ಯಕ್ರಮದ ಪೌರೋಹಿತ್ಯವನ್ನು ಮಾರೆಪ್ಪ ಪೂಜಾರಿ ವಹಿಸಿದ್ದರು.
ಇದನ್ನೂ ಓದಿ: Koppala News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಲು ಜಿ.ಪಂ ಸಿಇಒ ಸೂಚನೆ
ಈ ಸಂದರ್ಭದಲ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಚೆನ್ನರಾಜು, ಉಪಾಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಮಾರೆಪ್ಪ ಪೂಜಾರಿ, ಸ್ವಾಮಿ ದೊರೆ, ಎ. ಗಣೇಶ್, ಎಸ್.ಜಿ.ಪೂಜಾರಿ, ಗುರುಮೂರ್ತಿ, ಪಣಿಯಪ್ಪ, ಆರ್. ಕೃಷ್ಣ ಪೂಜಾರಿ, ಎಸ್.ಆರ್. ಸುರೇಶ್ ಸೇರಿದಂತೆ ಸರ್ವ ಸಮುದಾಯಗಳ ಸದ್ಭಕ್ತರು ಪಾಲ್ಗೊಂಡಿದ್ದರು.