ನವದೆಹಲಿ: ಮುಂದಿನ ತಿಂಗಳು ಲೋಕಾರ್ಪಣೆಯಾಗಲಿರುವ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.
ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.
प्रभु श्री रामलला का गर्भ गृह स्थान लगभग तैयार है। हाल ही में लाइटिंग-फिटिंग का कार्य भी पूर्ण कर लिया गया है। आपके साथ कुछ छायाचित्र साझा कर रहा हूँ। pic.twitter.com/yX56Z2uCyx
— Champat Rai (@ChampatRaiVHP) December 9, 2023
ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.
ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.
श्री राम जय राम जय जय राम!
— Shri Ram Janmbhoomi Teerth Kshetra (@ShriRamTeerth) December 8, 2023
Shri Ram Jai Ram Jai Jai Ram! pic.twitter.com/SZQlSwZl5X
ವಿಗ್ರಹವನ್ನು ನೆಲ ಮಹಡಿಯಲ್ಲಿರುವ ‘ಗ್ರಹಗೃಹ’ದಲ್ಲಿ ಪ್ರತಿಷ್ಠಾಪಿಸಲಾಗುವುದು. ದೇವಾಲಯದ ನೆಲ ಮಹಡಿ ಬಹುತೇಕ ಸಿದ್ಧವಾಗಿದೆ. ಹಾಗಾಗಿ ‘ಪ್ರಾಣ-ಪ್ರತಿಷ್ಠಾ’ (ಪ್ರತಿಷ್ಠಾಪನಾ ಸಮಾರಂಭ)ಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಚಂಪತ್ ರಾಯ್ ಅವರು ತಿಳಿಸಿದ್ದಾರೆ. ಮುಂದಿನ ತಿಂಗಳು ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ.
ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ: Ram Mandir: ಜನವರಿ 22ಕ್ಕೆ ರಾಮ ಮಂದಿರ ಉದ್ಫಾಟನೆ, ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ