ಬೆಂಗಳೂರು: ಇಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದ ಬೆಂಗಳೂರು ಕರಗ (Bengaluru Karaga 2023) ಮಹೋತ್ಸವದಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಚೈತ್ರ ಪೂರ್ಣಿಮಾ (Chaitra Purnima) ದಿನವಾದ ಗುರುವಾರ (ಏ.6) ರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಇದರ ಅಂಗವಾಗಿ ದೇಗುಲದ ಮುಂಭಾಗ ನೂರಾರು ಕೆಜಿಯಷ್ಟು ಕರ್ಪೂರ ಹಚ್ಚಿ ದ್ರೌಪದಿಗೆ ಭಕ್ತಾದಿಗಳು ಸೇವೆ ಸಲ್ಲಿಸುತ್ತಾರೆ. ಹೀಗೆ ಸಲ್ಲಿಸುವಾಗ ಕರ್ಪೂರದ ಬೆಂಕಿಯು ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಬೈಕ್‌ಗಳಿಗೆ ತಗುಲಿ, ಅವುಗಳು ಹೊತ್ತಿ ಉರಿದಿವೆ.
ದೇವಾಲಯದ ಪ್ರತೀತಿ ಹಿನ್ನೆಲೆಯಲ್ಲಿ ಎನ್‌ಆರ್ ಜಂಕ್ಷನ್‌ನಿಂದ ದೇವಾಲಯದ ಸುಮಾರು 700 ಮೀಟರ್‌ನಷ್ಟು ಉದ್ದದ ಮಾರ್ಗದಲ್ಲಿ ಐವತ್ತು ಕೆಜಿಯ ಎರಡು ಕರ್ಪೂರ ಗಟ್ಟಿಗಳನ್ನು ಹಚ್ಚಲಾಗುತ್ತದೆ. ಕರ್ಪೂರ ಹಚ್ಚುವ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸದಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿತ್ತು. ಆದರೂ ಮನವಿಗೆ ಸ್ಪಂದಿಸದ ಕೆಲ ಬೈಕ್ ಸವಾರರು ರಸ್ತೆ ಬದಿಯೇ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕರಗುತ್ತಿದೆ ಹಿಮಾಲಯ, ಭವಿಷ್ಯದಲ್ಲಿ ಕಾದಿದೆ ಅಪಾಯ
ಈ ವೇಳೆ ಗಾಳಿಗೆ ಕರ್ಪೂರದ ಬೆಂಕಿಯು ಆಟೊ ಸೇರಿ ದ್ವಿಚಕ್ರ ವಾಹನಗಳಿಗೆ ತಗುಲಿದೆ. ಕೂಡಲೇ ಸ್ಥಳೀಯರೆಲ್ಲರೂ ಸೇರಿ ಬೆಂಕಿ ನಂದಿಸಿದ್ದು, ಕೆಲ ವಾಹನಗಳಿಗೆ ಹಾನಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.