Site icon Vistara News

Bhagavad Gita Abhiyan | ಸ್ವರ್ಣವಲ್ಲಿ ಮಠದಿಂದ ಭಗವದ್ಗೀತಾ ಅಭಿಯಾನ; ಡಿ.4 ಕ್ಕೆ ದಾವಣಗೆರೆಯಲ್ಲಿ ಸಮಾರೋಪ

Bhagavad Gita Abhiyan

ದಾವಣಗೆರೆ: ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮತ್ತು ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ರಾಜ್ಯಾದ್ಯಂತ ಹಮ್ಮಿಕೊಂಡಿರುವ “ಶ್ರೀಮದ್ಭಗವದ್ಗೀತಾʼʼ ಅಭಿಯಾನವು (Bhagavad Gita Abhiyan) ಯಶಸ್ವಿಯಾಗಿ ನಡೆಯುತ್ತಿದೆ.

ಹರಿಹರದ ಶ್ರೀ ಹರಿಹರೇಶ್ವರ ದೇವಾಲಯದಲ್ಲಿ ಅಭಿಯಾನ ನಿಮಿತ್ತ ಶ್ರೀಗಳವರ ಉಪನ್ಯಾಸ.

ನವೆಂಬರ್‌ 3 ರಂದು ಈ ಅಭಿಯಾನವು ದಾವಣಗೆರೆಯಲ್ಲಿ ಉದ್ಘಾಟನೆಗೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರೇ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಭಗವದ್ಗೀತೆಯನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ.

ಈ ವರ್ಷ ಗೀತೆಯ ಐದನೇ ಆಧ್ಯಾಯವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ನವೆಂಬರ್‌ 4ರಿಂದ ಆರಂಭಗೊಂಡಿರುವ ಈ ಅಭಿಯಾನದಲ್ಲಿ ಈಗಾಗಲೇ ಎರಡು ಬ್ಯಾಚ್‌ಗಳು ಮುಗಿದಿದ್ದು, ಇನ್ನೊಂದು ಬ್ಯಾಚ್‌ ನಡೆಯಲಿದೆ. ಅಭಿಯಾನದಲ್ಲಿ 5 ರಿಂದ 7ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆ, 8 ರಿಂದ 10ನೇ ತರಗತಿಯ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಗೀತಾ ಕಂಠಪಾಠ, ಜಿಲ್ಲಾಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ ಮತ್ತು 500 ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ದಾವಣಗೆರೆಯಲ್ಲಿ ಡಿಸೆಂಬರ್‌ 4 ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಮಹಾ ಸಮರ್ಪಣೆ ಸಮಾರಂಭ ನಡೆಯಲಿದೆ. ಕಳೆದ ಹದಿನೈದು ವರ್ಷಗಳಿಂದ ಶ್ರೀಮಠವು ಶ್ರೀಮದ್ಭಗವದ್ಗೀತಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದು, ಇನ್ನೊಂದು ಬ್ಯಾಚ್‌ ನಡೆಯಲಿದೆ.

ದಾವಣಗೆರೆಯ ಲಕ್ಷ್ಮಣ ರಾವ್ ಕಿರ್ಲೋಸ್ಕರ್ ಶಾಲೆಯಲ್ಲಿ ಉಪನ್ಯಾಸ ನೀಡುತ್ತಿರುವ ಶ್ರೀಗಳು.

ಅಭಿಯಾನದಲ್ಲಿ 5 ರಿಂದ 7ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲೆ, 8 ರಿಂದ 10ನೇ ತರಗತಿಯ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಗೀತಾ ಕಂಠಪಾಠ, ಜಿಲ್ಲಾಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ ಮತ್ತು 500 ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಡಿಸೆಂಬರ್‌4 ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಮಹಾ ಸಮರ್ಪಣೆ ಸಮಾರಂಭ ನಡೆಯಲಿದೆ.

ದಾವಣಗೆರೆಯ ಯುರೊಸ್ಕೂಲ್‌ನಲ್ಲಿ ಭಗವದ್ಗೀತೆ ಕಲಿಸುತ್ತಿರುವ ಶ್ರೀಗಳು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕವಾಗಿ ಈ ಅಭಿಯಾನವನ್ನು ನಡೆಸಲಾಗಿರಲಿಲ್ಲ. ಈ ವರ್ಷ ಈ ಹಿಂದಿನಂತೆಯೇ ಅಭಿಯಾನ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿಯೂ ಅಭಿಯಾನ ನಡೆಯುತ್ತಿದೆ.

ಸರ್ವಜನಿಕರು ನವೆಂಬರ್‌ 27ರಿಂದ ಏಳು ದಿನ ಪ್ರತಿ ಮನೆಯಲ್ಲಿ ಭಗವದ್ಗೀತೆ ಪಠಿಸಬೇಕು. ಡಿ.3 ರಂದು 18 ಅಧ್ಯಾಯಗಳನ್ನು ಪಠಣ ಮಾಡಿ, ಗೀತಾ ಜಯಂತಿ ಆಚರಿಸಬೇಕು ಎಂದು ಶ್ರೀಗಳು ಆಶಿಸಿದ್ದಾರೆ. ಸಂಸ್ಕೃತರಾಗಲು ಭಗವದ್ಗೀತೆ ಕಲಿಕೆಯು ಪ್ರೇರಣೆ ನೀಡುತ್ತದೆ. ಆದ್ದರಿಂದ ಈ ಆಭಿಯಾನವನ್ನು ಶ್ರೀ ಮಠವು 2007ರಿಂದ ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ| ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ಕ್ರಮ; ಸ್ವರ್ಣವಲ್ಲಿಯಲ್ಲಿ ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆ

Exit mobile version