Site icon Vistara News

Maha Shivaratri 2023 : ಎಲ್ಲೆಡೆ ಮಹಾ ಶಿವರಾತ್ರಿಯ ಆಚರಣೆ, ವಿಶೇಷ ಪೂಜೆ, ಉತ್ಸವದ ಸಂಭ್ರಮ

shivaratri

ಬೆಂಗಳೂರು: ರಾಜ್ಯಾದ್ಯಂತ ಮಹಾ ಶಿವರಾತ್ರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬೆಂಗಳೂರಿನ ವಿವಿಧೆಡೆ ಭಕ್ತಿಭಾವದಿಂದ ಮಹಾಶಿವರಾತ್ರಿ ಆಚರಿಸಲಾಯಿತು. ( Maha Shivaratri 2023) ಈಶ್ವರನ ಸನ್ನಿಧಾನಕ್ಕೆ ಭಕ್ತರು ತೆರಳಿ ಅಭಿಷೇಕ, ರುದ್ರಪಠಣ, ಬಿಲ್ವಾರ್ಚನೆ ನೆರವೇರಿಸಿದರು. ಇಡೀ ರಾತ್ರಿ ಶಿವನಾಮಸ್ತರಣೆಯೊಂದಿಗೆ ಜಾಗರಣೆ ಆಚರಿಸಿದರು.ಶನಿವಾರ ಬೆಳಗ್ಗಿನಿಂದಲೇ ಪರಮೇಶ್ವರನ ಸನ್ನಿಧಿಗಳಲ್ಲಿ ಪೂಜಾ ಕೈಂಕರ್ಯ ಆರಂಭವಾಗಿತ್ತು, ಸರದಿ ಸಾಲಿನಲ್ಲಿ ನಿಂತ ಭಕ್ತರು ಗರ್ಭಗುಡಿಯಲ್ಲಿ ಶಿವಲಿಂಗ ದರ್ಶನ ಪಡೆದು, ಎಳನೀರು, ಜಲಾಭಿಷೇಕ, ಕ್ಷೀರಾಭಿಷೇಕವನ್ನು ಭಕ್ತಿಭಾವದಿಂದ ನೆರವೇರಿಸಿದರು. ಮಹಾಮಂಗಳಾರು ಶಿವ ಸಹಸ್ರನಾಮ ಪಠಿಸಿದರು.

ಮಲ್ಲೇಶ್ವರದ ಕಾಡುಮಲ್ಲೇಶ್ವರ ಗೆಳೆಯರ ಬಳಗ ಹಾಗೂ ದೇವಸ್ಥಾನದ ಸಹಯೋಗದಲ್ಲಿ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು ಇಂದು ವಿಂಜೃಭಣೆಯಿಂದ ರತೋತ್ಸವ ಕೂಡ ನಡೆಯಲಿದೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಜೋಡಿ ಬ್ರಹ್ಮ ರಥೋತ್ಸವ:

ಚಿಕ್ಕಬಳ್ಳಾಪುರ ದಕ್ಷಿಣ ಕಾಶಿ ನಂದಿಯಲ್ಲಿ ಇಂದು ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ತಾಲ್ಲೂಕಿನ ಪ್ರಸಿದ್ದ ನಂದಿಗ್ರಾಮದಲ್ಲಿ ಯೋಗ & ಭೋಗ ನಂದೀಶ್ವರ ಜೋಡಿ ರಥೋತ್ಸವ ಸಂಭ್ರಮ ನಡೆಯಲಿದೆ. ಶಿವರಾತ್ರಿಯ ಮಾರನೆ ದಿನ ನಡೆಯುವ ರಾಜ್ಯದ ಪ್ರಸಿದ್ದ ಜಾತ್ರೆ ಇದಾಗಿದೆ. ಲಕ್ಷಾಂತರ ಜನ ಭಕ್ತಾಧಿಗಳು ಜಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಲಕ್ಷಾಂತರ ಜನ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಅನ್ನು ಪೊಲೀಸರು ಕೈಗೊಂಡಿದ್ದಾರೆ.

Exit mobile version