ಚಾತುರ್ಮಾಸ್ಯ ಎಂದರೆ ನಾಲ್ಕು ತಿಂಗಳು ಎನ್ನುವುದು ಸಾಮಾನ್ಯ ಅರ್ಥ. ಈ ನಾಲ್ಕು ತಿಂಗಳುಗಳಲ್ಲಿ ಯತಿವರ್ಯರು ಕೈಗೊಳ್ಳುವ ಆಚರಣೆಗಳನ್ನು ಚಾತುರ್ಮಾಸ್ಯ (chaturmas 2022) ವ್ರತ ಎನ್ನುತ್ತಾರೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನಲಾಗುತ್ತದೆ.
ಆಷಾಢಮಾಸದ ಪೌರ್ಣಿಮೆಯ ದಿನ ಚಾತುರ್ಮಾಸ್ಯ ಸಂಕಲ್ಪ ಮಾಡಲಾಗುತ್ತದೆ. ಏಕೆಂದರೆ, ಈ ಪೌರ್ಣಿಮೆಯನ್ನು ಗುರು ಪೂರ್ಣಿಮೆ, ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಋಗ್ವೇದಾದಿಗಳನ್ನು ವಿಂಗಡಿಸಿ ಲೋಕಕ್ಕೆ ಕೊಟ್ಟಿರುವ ಮತ್ತು ವೇದಾಂತದ ಮೇರು ಪರ್ವತದಂತಿರುವ ಬ್ರಹ್ಮ ಸೂತ್ರಗಳನ್ನು ಬರೆದು ಕೊಟ್ಟಿರುವ ಮಹಾಗುರು ವೇದ ವ್ಯಾಸರ ಜಯಂತಿ ಈ ದಿನ. ಇಂತಹ ಸುದಿನದಂದು ಚಾತುರ್ಮಾಸ್ಯ ಅನುಷ್ಠಾನ ಪ್ರಾರಂಭಿಸಲಾಗುತ್ತದೆ.
ಚಾತುರ್ಮಾಸ್ಯ ಕಾಲದಲ್ಲಿ ತೀವ್ರವಾದ ಮಳೆಯಿರುತ್ತದೆ ಎಲ್ಲಾ ಕಡೆ ಕ್ರಿಮಿಕೀಟಗಳು ತುಂಬಿರುತ್ತವೆ. ಅವುಗಳಿಗೆ ಹಿಂಸೆಯಾಗದಿರಲೆಂದು ಸನ್ಯಾಸಿಗಳ ಸಂಚಾರವನ್ನೂ ನಿಷೇಧಿಸಲಾಗಿದೆ. ಯತಿಗಳು, ಸನ್ಯಾಸಿಗಳು ಚಾತುರ್ಮಾಸ್ಯ ಕಾಲದಲ್ಲಿ ಸಂಚಾರವನ್ನು ಮಾಡುವುದಿಲ್ಲ. ಚಾತುರ್ಮಾಸ್ಯ ವ್ರತದ ದೀಕ್ಷೆಯನ್ನು ಕೈಗೊಂಡು ಒಂದೇ ಕಡೆ, ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡು, ವ್ರತವನ್ನು ಆಚರಿಸಿ ಬೋಧನೆ, ಪ್ರವಚನ ನೀಡುವರು.
ನಾಡಿನ ಯಾವ ಮಠಾಧೀಶರು ಎಲ್ಲಿ ಈ ವ್ರತಾಚರಣೆಕೈಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ
ಶೃಂಗೇರಿ ಶ್ರೀ ಶಾರದಾ ಪೀಠ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩) ಉಭಯ ಜಗದ್ಗುರುಗಳು ವ್ಯಾಸ ಪೂಜೆ ನೆರವೇರಿಸಿ, ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ.
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦) ಮತ್ತು ಉಮಾಮಹೇಶ್ವರ ವ್ರತದ ದಿನದಂದು ಜಗದ್ಗುರುಗಳು ಸೀಮೋಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯ ಮಾಡಲಿದ್ದಾರೆ.
ವಿಶೇಷತೆಗಳೇನು?: ವ್ರತದ ಸಂದರ್ಭದಲ್ಲಿ ಉಭಯ ಜಗದ್ಗುರುಗಳು ಗುರುಭವನದಲ್ಲಿ ವಾಸ್ತವ್ಯ ಇದ್ದು, ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾರೆ. ವ್ರತದ ಸಂದರ್ಭದಲ್ಲಿ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ವಾಕ್ಯರ್ಥ ಸಭೆ ನಡೆಯಲಿದೆ. ವಾಕ್ಯರ್ಥ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸರನ್ನು ಜಗದ್ಗುರುಗಳು ಗೌರವಿಸಲಿದ್ದಾರೆ.
ಸ್ಥಳ: ಶ್ರೀಮಠದ ಗುರುಭವನ, ಶೃಂಗೇರಿ.
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶಿರಸಿ
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩) ಮಧ್ಯಾಹ್ನ ೩ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ಸಚಿವ ಬಿ ಸಿ ನಾಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦)
ವಿಶೇಷತೆಗಳೇನು?: ಪ್ರತಿನಿತ್ಯ ಶ್ರೀ ವೇದವ್ಯಾಸವಂದನ ಕಾರ್ಯಕ್ರಮಗಳು. ಋಗ್ವೇದ, ಕೃಷ್ಣಯಜುರ್ವೇದ, 18ಪುರಾಣಗಳು ಮತ್ತು ಮಹಾಭಾರತ ಪಾರಾಯಣ ನಡೆಯಲಿದೆ. ಸಂಜೆ ಮಹಾಭಾರತದ ಕುರಿತು ಪ್ರವಚನ.
ಸ್ಥಳ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ
ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ
ಮಂತ್ರಾಯಲದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು
ಎಂದಿನಿಂದ ಆರಂಭ?: ಆಷಾಢ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು (ಜುಲೈ ೨೬, ೨೦೨೨)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦). ಅಂದು ಶ್ರೀಗಳು ಗೋಶಾಲೆಯ ಬಳಿಯ ಆಂಜನೇಯ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿ, ವ್ರತ ಸಮಾರೋಪಗಳಿಸುವರು. ನಂತರ ಮಂತ್ರಾಲಯಕ್ಕೆ ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.
ವಿಶೇಷತೆಗಳೇನು?: ಆಗಸ್ಟ್ ೧೦ ರಿಂದ ೧೬ರ ವರೆಗೆ ಶ್ರೀ ಗುರು ರಾಯರ ಆರಾಧನೆ ನಡೆಯಲಿದೆ. ಹೀಗಾಗಿ ಬೇರೆ ವಿಶೇಷ ಕಾರ್ಯಕ್ರಮಗಳಿರುವುದಿಲ್ಲ.
ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ
ಶ್ರೀ ರಾಮಚಂದ್ರಾಪುರ ಮಠ, ಹೊಸನಗರ
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦)
ವಿಶೇಷತೆಗಳೇನು?: ಶ್ರೀ ಮಠವು ವಿಷ್ಣುಗುಪ್ತ ವಿದ್ಯಾಪೀಠವನ್ನು ಪ್ರಾರಂಭಿಸಿದ್ದು, ಇಲ್ಲಿ ನಡೆಯುವ ಚಾತುರ್ಮಾಸ್ಯ ವ್ರತವನ್ನು ʼಗುರುಕುಲ-ಚಾತುರ್ಮಾಸ್ಯʼ ಎಂದು ಕರೆಯಲಾಗುತ್ತಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಈ ಚಾತುರ್ಮಾಸ್ಯದ ಅವಧಿಯಲ್ಲಿ ವೈದಿಕ ಸಮಾವೇಶ, ಗುರಿಕಾರ ಸಮಾವೇಶ, ಮಾತೃ ಸಮಾವೇಶ ಮತ್ತು ಯುವ ಸಮಾವೇಶ ನಡೆಯಲಿದೆ. ಶ್ರೇಷ್ಠ ಕಲೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿರುತ್ತದೆ.
ಸ್ಥಳ: ಅಶೋಕೆ, ಗೋಕರ್ಣದ ಮೂಲ ಮಠ, ಉತ್ತರ ಕನ್ನಡ ಜಿಲ್ಲೆ.
ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠ, ಹರಿಹರಪುರ
ಕೊಪ್ಪ ತಾಲೂಕು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಪೀಠಾಧಿಪತಿಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦)
ವಿಶೇಷತೆಗಳೇನು?: ಪ್ರತಿನಿತ್ಯ ಬೆಳಗ್ಗೆ ಭಜನೆ, ಸತ್ಸಂಗ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಮಠದ ಆರಾಧ್ಯ ದೇವರಾದ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ನಿತ್ಯ ಕಲ್ಯಾಣೋತ್ಸವ ಸೇವೆ ನಡೆಯಲಿದೆ.
ಸ್ಥಳ : ಶ್ರೀ ಮಠ, ಹರಿಹರಪುರ, ಕೊಪ್ಪ ತಾಲೂಕು
ಶ್ರೀ ಎಡನೀರು ಮಠ, ಕಾಸರಗೋಡು
ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦)
ವಿಶೇಷತೆಗಳೇನು?: ಪ್ರತಿನಿತ್ಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಥಳ : ಶ್ರೀ ಎಡನೀರು ಮಠ, ಕಾಸರಗೋಡು
ಶೃಂಗೇರಿ ಶಿವಗಂಗಾ ಶ್ರೀ ಶಾರದಾ ಮಠ, ಶಿವಗಂಗೆ
ಶ್ರೀ ಶೃಂಗೇರಿ ಶಿವಗಂಗಾ ಶಾರದಾಮಠಾಧೀಶ್ವರರಾದ ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ ೧೩)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ ೧೦)
ವಿಶೇಷತೆಗಳೇನು?: ಶ್ರೀ ಶಾರದಾ ಪರಮೇಶ್ವರಿಗೆ ಮಹಾಭಿಷೇಕ, ಲಕ್ಷಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಸ್ಥಳ: ದಕ್ಷಿಣಾಮ್ನಾಯ ಶಾರದಾ ಪೀಠ ಶಾಖಾ ಮಠ, ಶಿವಗಂಗೆ
ಉಡುಪಿ ಅಷ್ಟಮಠದ ಯತಿಗಳು
ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕಾಣಿಯೂರು ಮಠ, ಉಡುಪಿ
ದಿನಾಂಕ: ಜು. ೧೮ ರಿಂದ ಸೆ. ೧೦
ಸ್ಥಳ: ಉಡುಪಿಯ ಕಾಣಿಯೂರು ಮಠ
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ
ದಿನಾಂಕ: ಜುಲೈ ೨೬ ರಿಂದ ಸೆ. ೧೦
ಸ್ಥಳ: ಚೆನ್ನೈ, ತಮಿಳುನಾಡು
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ
ದಿನಾಂಕ: ಜು.೧೩ ರಿಂದ ಸೆ.೧೦
ಸ್ಥಳ: ಹೈದರಾಬಾದ್
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ, ಉಡುಪಿ
ದಿನಾಂಕ: ಜು. ೨೩ ರಿಂದ ಸೆ. ೧೦
ಸ್ಥಳ: ಮಲ್ಲೇಶ್ವರಂ, ಬೆಂಗಳೂರು.
ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಕಿರಿಯ ಯತಿಗಳು
ಸ್ಥಳ: ಪಲಿಮಾರು ಮೂಲ ಮಠ, ಪಲಿಮಾರು
ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠ, ಉಡುಪಿ
ದಿನಾಂಕ: ಜು. ೧೮ ರಿಂದ ಸೆ.೨೦ರವರೆಗೆ
ಸ್ಥಳ: ಉಡುಪಿಯ ಶ್ರೀಕೃಷ್ಣಾಪುರ ಮಠ
ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸೋದೆ ಶ್ರೀ ವಾದಿರಾಜ ಮಠ,
ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು
ಶ್ರೀರಘುವರೇಂದ್ರತೀರ್ಥ ಶ್ರೀಪಾದರು, ಶೀ ಭೀಮನಕಟ್ಟೆ ಮಠ
ದಿನಾಂಕ: ಜು.೧೩ ರಿಂದ ಸೆ.೧೦
ಸ್ಥಳ: ಶ್ರೀ ಸೋಂದಾ ಮಠ, ಶಿರಸಿ
ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಚಿತ್ರಾಪುರ ಮಠ, ಕುಳಾಯಿ
ದಿನಾಂಕ: ಜು.೧೮ರಿಂದ ಸೆ.೧೦
ಸ್ಥಳ: ಶ್ರೀ ಮಧ್ವಾಚಾರ್ಯರ ಮೂಲ ಮಠ, ಚಿತ್ರಾಪುರ, ಸುರತ್ಕಲ್
ಇದನ್ನೂ ಓದಿ| Guru Purnima 2022 | ಗುರು ಪದದ ಅರ್ಥ ಅರಿತವರಿಗಷ್ಟೇ ಮುಕ್ತಿ