ಚಾತುರ್ಮಾಸ್ಯ ಎಂದರೆ ನಾಲ್ಕು ತಿಂಗಳು ಎನ್ನುವುದು ಸಾಮಾನ್ಯ ಅರ್ಥ. ಈ ನಾಲ್ಕು ತಿಂಗಳುಗಳಲ್ಲಿ ಯತಿವರ್ಯರು ಕೈಗೊಳ್ಳುವ ಆಚರಣೆಗಳನ್ನು ಚಾತುರ್ಮಾಸ್ಯ (Chaturmasya 2023) ವ್ರತ ಎನ್ನುತ್ತಾರೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನಲಾಗುತ್ತದೆ.
ಈಗ ಸಾಮಾನ್ಯವಾಗಿ ಕೆಲವು ಯತಿಗಳು ಎರಡು ತಿಂಗಳು ಮಾತ್ರ ಚಾತುರ್ಮಾಸ್ಯಕ್ಕೆ ಕೂರುತ್ತಾರೆ. ʻಮಾಸೋ ವೈ ಪಕ್ಷಃʼ ಎಂಬ ಪ್ರಮಾಣಾನುಸಾರವಾಗಿ ನಾಲ್ಕು ಪಕ್ಷಗಳೆಂದು ಎರಡು ತಿಂಗಳಾಗುತ್ತವೆ. ಹೀಗಾಗಿ ಆಷಾಢ ಕೃಷ್ಣಪಕ್ಷದಿಂದ ಭಾದ್ರಪದ ಪೌರ್ಣಿಮೆಯವರೆಗೆ ಈ ವ್ರತಾಚರಣೆ ಕೈಗೊಳ್ಳುವುದೂ ಉಂಟು.
ನಾಡಿನ ಬಹುತೇಕ ಯತಿಗಳು ಆಷಾಢಮಾಸದ ಪೌರ್ಣಿಮೆಯ ದಿನ (ಜುಲೈ 3) ಚಾತುರ್ಮಾಸ್ಯ ಸಂಕಲ್ಪ ಮಾಡುತ್ತಿದ್ದಾರೆ. ಏಕೆಂದರೆ, ಈ ಪೌರ್ಣಿಮೆಯನ್ನು ಗುರು ಪೂರ್ಣಿಮೆ, ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಋಗ್ವೇದಾದಿಗಳನ್ನು ವಿಂಗಡಿಸಿ ಲೋಕಕ್ಕೆ ಕೊಟ್ಟಿರುವ ಮತ್ತು ವೇದಾಂತದ ಮೇರು ಪರ್ವತದಂತಿರುವ ಬ್ರಹ್ಮ ಸೂತ್ರಗಳನ್ನು ಬರೆದು ಕೊಟ್ಟಿರುವ ಮಹಾಗುರು ವೇದ ವ್ಯಾಸರ ಜಯಂತಿ ಈ ದಿನ. ಇಂತಹ ಸುದಿನದಂದು ಚಾತುರ್ಮಾಸ್ಯ ಅನುಷ್ಠಾನ ಪ್ರಾರಂಭಿಸಲಾಗುತ್ತಿದೆ.
ಯಾವ ಯತಿಗಳ ವ್ರತಾಚರಣೆ ಎಲ್ಲಿ?
ಶೃಂಗೇರಿ ಶ್ರೀ ಶಾರದಾ ಪೀಠ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ 3) ಉಭಯ ಜಗದ್ಗುರುಗಳು ವ್ಯಾಸ ಪೂಜೆ ನೆರವೇರಿಸಿ, ಚಾತುರ್ಮಾಸ್ಯ ವ್ರತ ಆರಂಭಿಸಲಿದ್ದಾರೆ.
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29) ಮತ್ತು ಉಮಾಮಹೇಶ್ವರ ವ್ರತದ ದಿನದಂದು ಜಗದ್ಗುರುಗಳು ಸೀಮೋಲಂಘನ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದೆ.
ವಿಶೇಷತೆಗಳೇನು?: ವ್ರತದ ಸಂದರ್ಭದಲ್ಲಿ ಉಭಯ ಜಗದ್ಗುರುಗಳು ಗುರುಭವನದಲ್ಲಿ ವಾಸ್ತವ್ಯ ಇದ್ದು, ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾರೆ. ವ್ರತದ ಸಂದರ್ಭದಲ್ಲಿ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ವಾಕ್ಯರ್ಥ ಸಭೆ ನಡೆಯಲಿದೆ. ವಾಕ್ಯರ್ಥ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸರನ್ನು ಜಗದ್ಗುರುಗಳು ಗೌರವಿಸಲಿದ್ದಾರೆ.
ಸ್ಥಳ: ಶ್ರೀಮಠದ ಗುರುಭವನ, ಶೃಂಗೇರಿ.
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶಿರಸಿ
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ 03). ವ್ರತ ಸಂಕಲ್ಪದ ದಿನ ಋಗ್ವೇದ, ಕೃಷ್ಣಜರ್ವೇದ, 18 ಪುರಾಣ ಪಾರಾಯಣ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಧ್ಯಕ್ಷ ಅಶೋಕ ಹಾರ್ನಹಳ್ಳಿ ಅತಿಥಿಗಳಿಗಳಾಗಿ ಭಾಗವಹಿಸುವರು. ಈ ಸಂರ್ಭದಲ್ಲಿ ವೈದ್ಯರಾದ ಡಾ.ಎಸ್.ಆರ್.ಹೆಗಡೆ, ವಾತುಲಾಗಮ ವಿದ್ವಾಂಸ ವೇ. ಗಜಾನನ ಹರೇಭಟ್ಟ ಗೋಕರ್ಣ, ದಕ್ಷ ಆಡಳಿತಗಾರ ರಘುಪತಿ ಎನ್.ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ, ವಿಸ್ತಾರ ಮೀಡಿಯಾ ನಿರ್ದೇಶಕ ಶ್ರೀನಿವಾಸ ಹೆಬ್ಬಾರ್ ಅವರನ್ನು ಗೌರವಿಸಲಾಗುತ್ತದೆ. ಶ್ರೀಗಳು ಬರೆದ ಲೇಖನಗಳ ಸಂಕಲನ ಗುರುವಾಣಿ ಕೃತಿ ಬಿಡುಗಡೆಯಾಗಲಿದೆ
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ಜು.10 ರಿಂದ ಜು.24 ರ ತನಕ ಶ್ರೀಗಳಿಂದ ಕಾಷ್ಠ ಮೌನ ಇದ್ದು, ಶ್ರೀಗಳ ದರ್ಶನ ಇರುವುದಿಲ್ಲ. ಶಿಷ್ಯರಿಗಾಗಿ ಪ್ರತಿದಿನ ಸಂಜೆ ಶ್ರೀ ಮಹಾಭಾರತ ಪುರಾಣ ಪ್ರವಚನ ನಡೆಯಲಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಸ್ವಸಹಾಯ ಸಂಘಗಳ ಸಮಾವೇಶ, ಯಕ್ಷ ಶಾಲ್ಮಲಾ ಸಂಸ್ಥೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸ್ಥಳ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ
ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ
ಮಂತ್ರಾಯಲದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು
ಎಂದಿನಿಂದ ಆರಂಭ?: ಆಷಾಢ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು (ಜುಲೈ 15)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29). ಅಂದು ಶ್ರೀಗಳು ಗೋಶಾಲೆಯ ಬಳಿಯ ಆಂಜನೇಯ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿ, ವ್ರತ ಸಮಾರೋಪಗಳಿಸುವರು. ನಂತರ ಮಂತ್ರಾಲಯಕ್ಕೆ ಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ.
ವಿಶೇಷತೆಗಳೇನು?: ಪ್ರತಿನಿತ್ಯ ವಿದ್ವಾಂಸರ ಪ್ರವಚನ, ಭಜನಾ ಮಂಡಳಿಗಳ ಸಮಾವೇಶ, ಸಂಗೀತ ಕಾರ್ಯಕ್ರಮ, ಶ್ರೀ ಮಠದ ವಿದ್ವಾಂಸರ ಸಮ್ಮೇಳನ, ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಹರಿಕಥಾಮೃತಸಾರ ಸಮಗ್ರ ಪಾರಾಯಣ ಮತ್ತು ಪರೀಕ್ಷೆ. ಲಕ್ಷ್ಮೀ ಶೋಭಾನದ ಪಾರಾಯಣ, ಸಾಮೂಹಿಕ ಕುಂಕುಮಾರ್ಚನೆ, ಗುರುಪುಷ್ಯ ಯೋಗದ ಸಂದರ್ಭ ಸಾಮೂಹಿಕ ಅಷ್ಟೋತ್ತರ ಪಾರಾಯಣ ನಡೆಸಲಾಗುತ್ತದೆ. ಹರಿಕಥಾ ವಿದ್ವಾಂಸರನ್ನು ಸನ್ಮಾನಿಸಲಾಗುತ್ತದೆ.
ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ
ಶ್ರೀ ರಾಮಚಂದ್ರಾಪುರ ಮಠ, ಹೊಸನಗರ
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ03)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ಈ ಬಾರಿಯ ಚಾತುರ್ಮಾಸ್ಯಕ್ಕೆ ʻಸಂಘಟನಾ ಚಾತುರ್ಮಾಸ್ಯʼ ಎಂದು ಅಭಿದಾನ ನೀಡಲಾಗಿದೆ. ಈ ಸಂದರ್ಭದಲ್ಲಿ ಮಠದ ಶಿಷ್ಯ ಕೋಟಿಯನ್ನು ಸಂಘಟಿಸುವ ಕಾರ್ಯಕ್ರಮಗಳು ನಡೆಯಲಿವೆ. ಚಾತುರ್ಮಾಸ್ಯದ ಪ್ರಾರಂಭದ ದಿನದ ಧರ್ಮಸಭೆಯಲ್ಲಿ ಬಿ.ಎಲ್.ನಾಗರಾಜ ರಚಿಸಿರುವ ʻಶ್ರೀಮದಾತ್ಮಲಿಂಗ ವೈಭವಂʼ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಸ್ಥಳ: ಅಶೋಕೆ, ಗೋಕರ್ಣದ ಮೂಲ ಮಠ, ಉತ್ತರ ಕನ್ನಡ ಜಿಲ್ಲೆ.
ಶ್ರೀ ಶಾರದಾ ಲಕ್ಷ್ಮೀನರಸಿಂಹ ಪೀಠ, ಹರಿಹರಪುರ
ಕೊಪ್ಪ ತಾಲೂಕು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಪೀಠಾಧಿಪತಿಗಳಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ 03)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ಪ್ರತಿನಿತ್ಯ ಬೆಳಗ್ಗೆ ಭಜನೆ, ಸತ್ಸಂಗ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಮಠದ ಆರಾಧ್ಯ ದೇವರಾದ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಗೆ ನಿತ್ಯ ಕಲ್ಯಾಣೋತ್ಸವ ಸೇವೆ ನಡೆಯಲಿದೆ.
ಸ್ಥಳ : ಸಾದರ ಕ್ಷೇಮಾಭಿವೃದ್ಧಿ ಸಂಘ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮೀಪುರಂ, ಬೆಂಗಳೂರು.
ಶ್ರೀ ಎಡನೀರು ಮಠ, ಕಾಸರಗೋಡು
ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ 03)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ಪ್ರತಿನಿತ್ಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗುರು ಪೂರ್ಣಿಮೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಮುಂಬೈನ ಸದಾಶಿವ ಶೆಟ್ಟಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸ್ಥಳ : ಶ್ರೀ ಎಡನೀರು ಮಠ, ಕಾಸರಗೋಡು
ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠ
ಶ್ರೀ ಶಂಕರಭಾರತೀ ಮಹಾಸ್ವಾಮಿ, ಶ್ರೀಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು
ಎಂದಿನಿಂದ ಆರಂಭ?: ವ್ಯಾಸ ಪೂರ್ಣಿಮೆ ದಿನ (ಜುಲೈ 03)
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ಶ್ರೀ ಶಾರದಾ ಪರಮೇಶ್ವರಿಗೆ ಮಹಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಸ್ಥಳ: ಶ್ರೀ ಜಪ್ಯೇಶ್ವರ ಕ್ಷೇತ್ರ (ಜಪದಕಟ್ಟೆ), ಕೆ.ಆರ್.ನಗರ, ಮೈಸೂರು.
ಉತ್ತರಾದಿಮಠ, ಬೆಂಗಳೂರು.
ಶ್ರೀ ಸತ್ಯಾತ್ಮತೀರ್ಥರು
ಎಂದಿನಿಂದ ಆರಂಭ?: ಜುಲೈ 12
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ.
ಸ್ಥಳ: ಶ್ರೀ ಸತ್ಯಧರ್ಮ ತೀರ್ಥರ ಮೂಲ ವೃಂದಾನದ ಸನ್ನಿಧಾನ, ಉತ್ತರಾದಿ ಮಠ, ಹೊಳೆಹೊನ್ನೂರು, ಶಿವಮೊಗ್ಗ ಜಿಲ್ಲೆ.
ಉತ್ತರಾದಿಮಠ, ಬೆಂಗಳೂರು.
ಶ್ರೀ ಸತ್ಯಾತ್ಮತೀರ್ಥರು
ಎಂದಿನಿಂದ ಆರಂಭ?: ಜುಲೈ 12
ಎಂದು ಮುಕ್ತಾಯ?: ಭಾದ್ರಪದ ಮಾಸದಲ್ಲಿ ಬರುವ ಅನಂತನ ಹುಣ್ಣಿಮೆ (ಸೆಪ್ಟೆಂಬರ್ 29)
ವಿಶೇಷತೆಗಳೇನು?: ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ.
ಸ್ಥಳ: ಶ್ರೀ ಸತ್ಯಧರ್ಮ ತೀರ್ಥರ ಮೂಲ ವೃಂದಾನದ ಸನ್ನಿಧಾನ, ಉತ್ತರಾದಿ ಮಠ, ಹೊಳೆಹೊನ್ನೂರು, ಶಿವಮೊಗ್ಗ ಜಿಲ್ಲೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಉಡುಪಿ ಅಷ್ಟಮಠದ ಯತಿಗಳು
ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕಾಣಿಯೂರು ಮಠ, ಉಡುಪಿ
ದಿನಾಂಕ: ಜು. 03 ರಿಂದ ಸೆ. 29
ಸ್ಥಳ: ಉಡುಪಿಯ ಕಾಣಿಯೂರು ಮಠ
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ
ದಿನಾಂಕ: ಜುಲೈ 16 ರಿಂದ ಸೆ.29
ಸ್ಥಳ: ವರ್ಧನಗಿರಿ ಕ್ಷೇತ್ರ, ಬಸವನಗುಡಿ, ಬೆಂಗಳೂರು.
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ
ದಿನಾಂಕ: ಜು.03 ರಿಂದ ಸೆ. 29
ಸ್ಥಳ: ಶ್ರೀಕೃಷ್ಣಧಾಮ, ಸರಸ್ವತಿಪುರಂ, ಮೈಸೂರು.
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ, ಉಡುಪಿ
ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು, ಕಿರಿಯ ಯತಿಗಳು
ದಿನಾಂಕ: ಜು. 11 ರಿಂದ ಸೆ. 29
ಸ್ಥಳ: ಪಾಲಿಮಾರು ಶಾಖಾ ಮಠ, ಅಣ್ಣಾನಗರ, ಚೆನ್ನೈ.
ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠ, ಉಡುಪಿ
ದಿನಾಂಕ: ಜು. 03 ರಿಂದ ಸೆ.29ರವರೆಗೆ
ಸ್ಥಳ: ಉಡುಪಿಯ ಶ್ರೀಕೃಷ್ಣಾಪುರ ಮಠ
ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸೋದೆ ಶ್ರೀ ವಾದಿರಾಜ ಮಠ,
ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು
ಶ್ರೀರಘುವರೇಂದ್ರತೀರ್ಥ ಶ್ರೀಪಾದರು, ಶೀ ಭೀಮನಕಟ್ಟೆ ಮಠ
ದಿನಾಂಕ: ಜು.03 ರಿಂದ ಸೆ.29
ಸ್ಥಳ: ಶ್ರೀ ಸೋಂದಾ ಮಠ, ಶಿರಸಿ
ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಚಿತ್ರಾಪುರ ಮಠ, ಕುಳಾಯಿ
ದಿನಾಂಕ: ಜು.03 ರಿಂದ ಸೆ.29
ಸ್ಥಳ: ಶ್ರೀ ಮಧ್ವಾಚಾರ್ಯರ ಮೂಲ ಮಠ, ಚಿತ್ರಾಪುರ, ಸುರತ್ಕಲ್
ಇದನ್ನೂ ಓದಿ : Chaturmas 2023 : ಚಾತುರ್ಮಾಸ್ಯ ವ್ರತವನ್ನು ಗೃಹಸ್ಥರೂ ಮಾಡಬಹುದು!
ಚಾತುರ್ಮಾಸ್ಯ ಎಂದರೇನು?
ಚಾತುರ್ಮಾಸ್ಯ (Chaturmas 2023) ಎಂದರೆ ನಾಲ್ಕುತಿಂಗಳು ಎನ್ನುವುದು ಸಾಮಾನ್ಯ ಅರ್ಥ. ಈ ನಾಲ್ಕು ತಿಂಗಳುಗಳಲ್ಲಿ ಮಾಡುವ ಆಚರಣೆಯನ್ನು ಚಾತುರ್ಮಾಸ್ಯ ವ್ರತ ಎನ್ನುತ್ತಾರೆ. ಆಷಾಢ ಶುಕ್ಲ ಏಕಾದಶಿಯಿಂದ (ಇಂದಿನಿಂದ) ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ (ಜೂನ್ 3 ರಿಂದ) ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ʻಚಾತುರ್ಮಾಸ’ ಎಂದು ಕರೆಯಲಾಗುತ್ತದೆ.
ಚಾತುರ್ಮಾಸ್ಯ ವ್ರತ ಎಂದು ಕೊನೆಗೊಳ್ಳಲಿದೆ?
ಸೆಪ್ಟೆಂಬರ್ 29 ರಂದು ಯತಿಗಳು ಚಾತುರ್ಮಾಸ್ಯ ವ್ರತವನು ಅಂತ್ಯಗೊಳಿಸಲಿದ್ದಾರೆ. ಅಂದು ಉಮಾಮಹೇಶ್ವರ ವ್ರತದ ದಿನವಾಗಿರುತ್ತದೆ.