ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ವಿನೂತನ ಶೈಲಿಯ ಅಲಂಕಾರಿಕ ಇಂಡೋ -ವೆಸ್ಟರ್ನ್ ಶೈಲಿಯ ಲೈಟ್ಸ್ (Deepavali Decoration Lights), ಸ್ಟ್ರಿಂಗ್ ಲೈಟಿಂಗ್ಸ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯವು ಕಾಲಿಟ್ಟಿವೆ. ಪ್ರತಿ ಬಾರಿಯೂ ದೀಪಾವಳಿ ಮನೆಯ ಒಳಾಂಗಣ ಹಾಗೂ ಹೊರಾಂಗಣದ ಅಲಂಕಾರಕ್ಕೆ ನಾನಾ ಬಗೆಯ ವಿನೂತನ ಶೈಲಿಯ ಕಂಟೆಂಪರರಿ ಅಲಂಕಾರಿಕ ಲೈಟ್ ಸೆಟ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತವೆ. ಕೇವಲ ಟ್ರೆಡಿಷನಲ್ ದೀಪಗಳು ಮಾತ್ರವಲ್ಲ, ಇಂಡೋ-ವೆಸ್ಟರ್ನ್ ಶೈಲಿಯವು ಈ ಬಾರಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಇಂಟಿರೀಯರ್ ಡಿಸೈನರ್ ರಾಶಿ.
ಒಳಾಂಗಣದ ಸೌಂದರ್ಯ ಹೆಚ್ಚಿಸುವ ಲೈಟ್ಸ್
ಕರ್ಟನ್ ಫೇರಿ ಲೈಟ್ಸ್, ಸ್ಟಾರ್ಸ್ ಸೀರೀಸ್, ಕಲರ್‌ಫುಲ್ ಸ್ಟ್ರಿಂಗ್ ಲೈಟ್ಸ್, ಲಾಂಗ್ ಪೆಂಡೆಂಟ್ ಲ್ಯಾಂಪ್, ಕಾಫಿ ಕ್ಯಾನ್ ಲ್ಯೂಮಿನರೀಸ್, ಕಾಫಿ ಕ್ಯಾನ್ ಲ್ಯೂಮಿನೇರಿಸ್, ಗ್ಲಾಸ್ ಲ್ಯಾಂಪ್ ಹೀಗೆ ನಾನಾ ವಿನೂತನ ಬಗೆಯ ಇಂಡೋ ವೆಸ್ಟರ್ನ್ ಶೈಲಿಯ ಅಲಂಕಾರಿಕ ಎಲೆಕ್ಟ್ರಿಕ್ ದೀಪಗಳು ಟ್ರೆಡಿಷನಲ್ ವಿನ್ಯಾಸದ ಜೊತೆಜೊತೆಗೆ ವೆಸ್ಟರ್ನ್ ಕಾನ್ಸೆಪ್ಟ್‌ವನ್ನೊಳಗೊಂಡಿವೆ. ಹಬ್ಬದ ನಂತರವೂ ಮನೆಯ ಯಾವುದೇ ಕಾರ್ಯಕ್ರಮಗಳಲ್ಲಿ ಬಳಸಬಹುದಾಗಿದೆ.
ಸ್ಟ್ರಿಂಗ್ ಲೈಟ್ಸ್ ಚಿತ್ತಾರ
ಸಾಮಾನ್ಯವಾಗಿ ಮೊದಲೆಲ್ಲಾ ಒಂದೇ ಬಣ್ಣದ ಲೈಟಿಂಗ್ಸ್ ಇಡೀ ಮನೆಯ ಸುತ್ತ ಹಾಕುವುದು ಸಾಮಾನ್ಯವಾಗಿತ್ತು. ಇದೀಗ ಇದರಲ್ಲೂಕೊಂಚ ಬದಲಾವಣೆಯಾಗಿದ್ದು, ಸಾಕಷ್ಟು ಕಲರ್‌ಫುಲ್ ಮಿಕ್ಸ್ ಮ್ಯಾಚ್ ಮಾಡಿದ ಸ್ಟ್ರಿಂಗ್ ಲೈಟಿಂಗ್ಸ್ ಹಾಕುವುದು ಕಂಡು ಬರುತ್ತಿದೆ. ಐದಾರಕ್ಕಿಂತ ಹೆಚ್ಚು ಬಣ್ಣದ ಎಲ್‌ಇಡಿ ಪುಟ್ಟ ಪುಟ್ಟ ಲೈಟಿಂಗ್ಸ್ ಅಂದರೆ, ಸೀರಿಯಲ್‌ಗಳನ್ನು ಜೋತು ಬಿಡುವುದು ಪ್ರಚಲಿತದಲ್ಲಿದೆ.
ಕರ್ಟನ್ ಫೇರಿ ಲೈಟ್
ಆನ್‌ಲೈನ್‌ನಲ್ಲಿ ಲಭ್ಯವಿರುವ ಕರ್ಟನ್ ಫೇರಿ ಲೈಟ್ ದುಬಾರಿ. ನೋಡಲು ಅರಮನೆಯಂತೆ ಲುಕ್ ನೀಡುವ ಇವು ಇದೀಗ ದೊಡ್ಡ ಮನೆ ಹಾಗೂ ಬಂಗಲೆಗಳಲ್ಲಿಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ಕಲರ್‌ಫುಲ್ ಟ್ರಾನ್ಸಪರೆಂಟ್ ಲುಮಿನೈರ್
ಕಲರ್‌ಫುಲ್ ಅಲಂಕಾರಿಕ ಲುಮಿನೈರ್ ನೋಡಲು ಒಂದೇ ತರಹದ್ದಾಗಿ ಕಂಡರೂ, ಪ್ರತಿ ವರ್ಷ ಹೊಸ ಬಗೆಯಲ್ಲಿ ಬಿಡುಗಡೆಗೊಳ್ಳುತ್ತವೆ. ಈ ಬಾರಿ ಕೊಂಚ ಲೈಟ್ ಆಗಿರುವಂತಹ ನಾನಾ ಶೇಡ್‌ಗಳ ಜಿಯಾಮಿಟ್ರಿಕಲ್ ಡಿಸೈನ್ ಹೊಂದಿರುವ ಗ್ಲಾಸ್ ಮೇಲೆ ಪೇಂಟಿಂಗ್ ಮಾಡಿರುವಂತಹ ಲ್ಯಾಂಟೆರ್ನ್ ಮಾದರಿಯಲ್ಲಿ ಬಿಡುಗಡೆಗೊಂಡಿವೆ. ನೋಡಲು ಆಕರ್ಷಕವಾಗಿ ಕಾಣುವ ಇವುಗಳನ್ನು ನೇತು ಹಾಕಲುಬಹುದು. ಇಲ್ಲವೇ ಸ್ಟಾಂಡ್ ಇದ್ದಲ್ಲಿ ಕಾರ್ನರ್‌ನಲ್ಲಿರಿಸಬಹುದು ಎನ್ನುತ್ತಾರೆ ಇಂಟಿರಿಯರ್ ಡಿಸೈನರ್ಸ್
ಅಲಂಕಾರಿ ಲೈಟಿಂಗ್ಸ್ ಹಾಕುವವರ ಗಮನಕ್ಕೆ
- ಹಬ್ಬದ ನಂತರವೂ ಬಳಸುವಂತಹ ವಿನ್ಯಾಸದವನ್ನು ಖರೀದಿಸಿ.
- ಉತ್ತಮ ಕ್ವಾಲಿಟಿ ಹಾಗೂ ಬ್ರಾಂಡ್ನದ್ದನ್ನು ಕೊಳ್ಳಿ.
- ಮಕ್ಕಳನ್ನು ಇವುಗಳಿಂದ ದೂರವಿಡಿ.
- ಮಲಗುವ ಮುನ್ನ ಸ್ವಿಚ್ ಆಫ್ ಮಾಡುವುದನ್ನು ಮರೆಯಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಎಥ್ನಿಕ್‌ವೇರ್ಸ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ