ಅಯೋಧ್ಯೆ: 2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಬಳಿಕ, ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಮೇಲೆ ದೇಶದ ಪ್ರತಿಯೊಂದು ಮನೆಯಲ್ಲಿ ರಾಮಜ್ಯೋತಿ ಬೆಳಗಲಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು. ಅಯೋಧ್ಯೆ ವಿಮಾನ ನಿಲ್ದಾಣ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಜನವರಿ 22ರಂದು ದೇಶಕ್ಕೆ ದೇಶವೇ ರಾಮಮಯವಾಗಲಿ, ರಾಮನ ಜಪವೇ ಎಲ್ಲೆಡೆ ಜಗಮಗಿಸಲಿ ಎಂದು ಕರೆ ನೀಡಿದರು.
“ಅಯೋಧ್ಯೆ ರಾಮಮಂದಿರವು ದೇಶದ ಜನರ ದೇಗುಲವಾಗಿದೆ. ರಾಮಮಂದಿರದಿಂದ ದೇಶದ ರಾಮಭಕ್ತರು ಪುನೀತರಾಗುವ ಜತೆಗೆ ಉತ್ತರ ಪ್ರದೇಶದ ಅಭಿವೃದ್ಧಿಗೆ ರಾಮಮಂದಿರ ಸಂಕೇತವಾಗಲಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯ ರಾಮಮಂದಿರವು ಸಾವಿರಾರು ಜನರ ಪರಿಶ್ರಮದಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಇದು ಎಲ್ಲ ರಾಮ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.
पिछले 9 वर्षों में भारत में विश्वस्तरीय इंफ्रास्ट्रक्चर और कनेक्टिविटी का अभूतपूर्व विस्तार हुआ है। राममय अयोध्या धाम में आज विभिन्न विकास परियोजनाओं का लोकार्पण और शिलान्यास कर गर्व की अनुभूति हो रही है। https://t.co/NA0xxO3lGC
— Narendra Modi (@narendramodi) December 30, 2023
ಜನವರಿ 22ರಂದು ಎಲ್ಲರೂ ಅಯೋಧ್ಯೆಗೆ ಬರದಿರಿ
“ದೇಶದಲ್ಲಿರುವ ಎಲ್ಲ ರಾಮನ ಭಕ್ತರು ಅಯೋಧ್ಯೆಗೆ ಬರಬೇಕು, ರಾಮನ ದರ್ಶನ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆದರೆ, ಜನವರಿ 22ರಂದು ಎಲ್ಲ ನಾಗರಿಕರು ಅಯೋಧ್ಯೆಗೆ ಬರದಿರಿ. ಭದ್ರತೆ, ಜನಜಂಗುಳಿಯನ್ನು ತಪ್ಪಿಸಲು ನಿಧಾನವಾಗಿ ಅಯೋಧ್ಯೆಯತ್ತ ಧಾವಿಸಿ. ರಾಮಮಂದಿರಕ್ಕಾಗಿ 550 ವರ್ಷ ಕಾದಿದ್ದೀರಿ. ಈಗ ರಾಮಮಂದಿರ ಕನಸು ನನಸಾಗುತ್ತಿದೆ. ಯಾರು ಕೂಡ ಅವಸರ ಮಾಡದೆ ಉದ್ಘಾಟನೆ ಬಳಿಕ ಸಮಯ ತೆಗೆದುಕೊಂಡು ಅಯೋಧ್ಯೆಗೆ ಬಂದು, ರಾಮನ ದರ್ಶನ ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು.
“ಅಯೋಧ್ಯೆಯ ಜನರಿಗೆ ವಿಶೇಷವಾದ ಉಡುಗೊರೆ, ಅದೃಷ್ಟ ಲಭಿಸಿದೆ. ದೇಶದ ಕೋಟ್ಯಂತರ ಭಾರತೀಯರನ್ನು ಅಯೋಧ್ಯೆಗೆ ಸ್ವಾಗತಿಸುವ ಸೌಭಾಗ್ಯ ನಿಮ್ಮದಾಗಿದೆ. ಅಯೋಧ್ಯೆಗೆ ಆಗಮಿಸುವ ರಾಮನ ಭಕ್ತರನ್ನು ನೀವು ಚೆನ್ನಾಗಿ ಉಪಚರಿಸಿ. ಅಯೋಧ್ಯೆಯನ್ನು ಸ್ವಚ್ಛವಾಗಿಡಿ, ಸುಸಜ್ಜಿತವಾಗಿಡಿ. ಅಯೋಧ್ಯೆಗೆ ಆಗಮಿಸುವವರು ಕೂಡ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಿ. ಆ ಮೂಲಕ ರಾಮನ ನಗರಿಯನ್ನು ದೇಶದ ನಗರಿಯನ್ನಾಗಿ ಕಾಪಾಡಿಕೊಳ್ಳಿ” ಎಂದು ಹೇಳಿದರು.
ಕರ್ನಾಟಕದ ರೈಲುಗಳನ್ನು ಪ್ರಸ್ತಾಪಿಸಿದ ಮೋದಿ
ದೇಶದ ರೈಲು ಸಂಪರ್ಕ ಸಾಧನೆ ಕುರಿತು ಮಾತನಾಡಿದ ನರೇಂದ್ರ ಮೋದಿ, ಕರ್ನಾಟಕದ ಬಗ್ಗೆಯೂ ಪ್ರಸ್ತಾಪಿಸಿದರು. ಶನಿವಾರ ಮೋದಿ ಅವರು ಚಾಲನೆ ನೀಡಿದ ಆರು ರೈಲುಗಳಲ್ಲಿ ಕರ್ನಾಟಕಕ್ಕೆ ಮೂರು ರೈಲು ಸಂಬಂಧಿಸಿವೆ. ಹಾಗಾಗಿ ಮೋದಿ ಅವರು ಕರ್ನಾಟಕದ ರೈಲುಗಳನ್ನು ಪ್ರಸ್ತಾಪಿಸಿದರು. “ಕರ್ನಾಟಕದಲ್ಲಿ ನೂತನ ರೈಲುಗಳು ಸಂಪರ್ಕ ಕ್ರಾಂತಿಗೆ ನಾಂದಿ ಹಾಡಲಿವೆ. ಇದರಿಂದ ಜನರು ಸುಸಜ್ಜಿತ ರೈಲು ಸಂಪರ್ಕ ಪಡೆಯಲಿದ್ದು, ಸುಗಮವಾಗಿ ಹಲವು ನಗರಗಳಿಗೆ ಸಂಚರಿಸಬಹುದಾಗಿದೆ” ಎಂದು ತಿಳಿಸಿದರು.
#WATCH | Ayodhya, Uttar Pradesh: PM Narendra Modi says, "Today after the Vande Bharat trains and Namo Bharat trains, the country has got a new series of trains… This has been named as Amrit Bharat trains… The power of all these three trains will help in the development of the… pic.twitter.com/JB6KQeujhI
— ANI (@ANI) December 30, 2023
ಇದನ್ನೂ ಓದಿ: Ayodhya Airport: ಅಯೋಧ್ಯೆ ಮಹರ್ಷಿ ವಾಲ್ಮೀಕಿ ಏರ್‌ಪೋರ್ಟ್‌ಗೆ ಹಲವು ಹೊಸತನದ ಹಿರಿಮೆ
ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ನವದೆಹಲಿ, ಅಮೃತಸರ-ದೆಹಲಿ, ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್, ಜಲ್ನಾ-ಮುಂಬೈ, ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಇವು ಮೋದಿ ಅವರಿಂದ ಚಾಲನೆ ಪಡೆದ ಆರು ವಂದೇ ಭಾರತ್ ರೈಲುಗಳು. ಇವುಗಳಲ್ಲಿ ಕೊಯಮತ್ತೂರು-ಬೆಂಗಳೂರು, ಮಂಗಳೂರು-ಮಡ್ಗಾಂವ್ ಕರ್ನಾಟಕಕ್ಕೆ ಸಂಬಂಧಪಟ್ಟಿವೆ. ಹೊಚ್ಚ ಹೊಸ ಮಾದರಿಯ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇವು ದರ್ಭಾಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ನಡುವೆ ಓಡಾಡಲಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ