Site icon Vistara News

Free Bus Service : ಶಕ್ತಿ ಯೋಜನೆಯಿಂದ ದೇವರೂ ಶ್ರೀಮಂತರಾದರು; ಪುಣ್ಯಕ್ಷೇತ್ರಗಳಲ್ಲಿ ಹೆಚ್ಚಿದ ಆದಾಯ

Kukke subrahmanya Mysore chamundeshwari

ಬೆಂಗಳೂರು: ರಾಜ್ಯದಲ್ಲಿ ಜಾರಿಯಾದ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ (Shakti scheme) ಮಹಿಳೆಯರಿಗೆ ಮಾತ್ರ ಲಾಭವಾಗಿದ್ದಲ್ಲ. ರಾಜ್ಯದ ಹಲವು ಪುಣ್ಯ ಕ್ಷೇತ್ರಗಳಿಗೂ (Temples of Karnataka) ಇದರ ಲಾಭ ಸಿಕ್ಕಿದೆ! ಹೌದು, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ (Free Bus service) ಅವಕಾಶ ಕಲ್ಪಿಸಿದ ಬಳಿಕ ದೇವಾಲಯಗಳಿಗೆ (women visits temple) ಹೋಗುವ ಮಹಿಳೆಯರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಹೀಗಾಗಿ ದೇವಾಲಯಗಳ ಆದಾಯವೂ ಹೆಚ್ಚಾಗಿದೆ.

ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಆರಂಭಗೊಂಡಿದ್ದು ಜೂನ್‌ 11ರಿಂದ. ಆವತ್ತಿನಿಂದ ಜುಲೈ 15ರವರೆಗಿನ ದೇವಾಲಯಗಳ ಆದಾಯವನ್ನು ಗಮನಿಸಿದರೆ ಅದು ಸಾಕಷ್ಟು ಹೆಚ್ಚಾಗಿರುವುದನ್ನು ಅಂಕಿ ಅಂಶಗಳೇ ಸ್ಪಷ್ಟಪಡಿಸುತ್ತವೆ. ಈ ವರ್ಷದ ಜೂನ್‌ 11ರಿಂದ ಜುಲೈ 15ರವರೆಗಿನ ಆದಾಯ ಈ ಅವಧಿಯ ಆದಾಯ ಮತ್ತು ಕಳೆದ ವರ್ಷದ ಇದೇ ಅವಧಿಯ ಆದಾಯವನ್ನು ಹೋಲಿಕೆ ಮಾಡಿದರೆ ಇದು ಸ್ಪಷ್ಟವಾಗುತ್ತದೆ. ಗಮನಿಸಿ, ಇದು ಹುಂಡಿಗೆ ಹಾಕಿದ ಹಣದ ಲೆಕ್ಕಾಚಾರವಲ್ಲ, ಇ-ಹುಂಡಿಯ ಲೆಕ್ಕಾಚಾರ ಮಾತ್ರ. ಹುಂಡಿಗೆ ಹಾಕಿದ ಹಣದ ಲೆಕ್ಕಾಚಾರ ಈಗ ನಡೆದಿಲ್ಲ.

ಧರ್ಮಸ್ಥಳದಲ್ಲಿ ಭಕ್ತ ಜನ ಸಂದಣಿ

ಶಕ್ತಿ ಯೋಜನೆ ಆರಂಭವಾಗಿದ್ದು ಜೂನ್‌ 11ರಂದು. ಅದಾಗಿ ಮೊದಲ ವೀಕೆಂಡ್‌ ಬಂದಿದ್ದು ಜೂನ್‌ 17 ಮತ್ತು 18ರಂದು. ಆಗ ರಾಜ್ಯಾದ್ಯಂತ ಮಹಿಳೆಯರ ಬಸ್‌ ಸಂಚಾರ ಯಾವ ರೀತಿ ಇತ್ತೆಂದರೆ ಬೇರೆ ಯಾರಿಗೂ ಎಲ್ಲ ಬಸ್‌ಗಳು ತುಂಬಿ ತುಳುಕಿ ಹೆಚ್ಚುವರಿ ಬಸ್‌ ಬಿಟ್ಟರೂ ಸಾಲದಂತಾಗಿತ್ತು. ಪುಣ್ಯ ಕ್ಷೇತ್ರಗಳಲ್ಲಂತೂ ಕಾಲಿಡಲು ಜಾಗವಿಲ್ಲದಂತಾಗಿತ್ತು.

ಡಾ. ವೀರೇಂದ್ರ ಹೆಗ್ಗಡೆಯವರೇ ಮಾತನಾಡಿದ್ದರು

ಶಕ್ತಿ ಯೋಜನೆಯ ಯಶಸ್ಸಿನ ಬಗ್ಗೆ ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರೇ ಖುಷಿಯಿಂದ ಪ್ರತಿಕ್ರಿಯಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಈ ಯೋಜನೆ ಮಹಿಳೆಯರ ದೇವಸ್ಥಾನ ಭೇಟಿಗೆ ಭಾರಿ ಅನುಕೂಲವಾಗಿದೆ ಎಂದಿದ್ದರು. ಜತೆಗೆ ದೇವಸ್ಥಾನಕ್ಕೆ ಬರುವ ಮಹಿಳೆಯರಲ್ಲಿ ಕೆಲವರು ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದರು.

ಇಷ್ಟೇ ಅಲ್ಲ, ಕಾಂಗ್ರೆಸ್‌ ಆರಂಭದಿಂದಲೂ ಶಕ್ತಿ ಯೋಜನೆ ಜನರಲ್ಲಿ ಧಾರ್ಮಿಕ ಶ್ರದ್ಧೆಯನ್ನು ಹೆಚ್ಚಿಸಲಿದೆ ಎಂದು ಹೇಳುತ್ತಲೇ ಬರುತ್ತಿತ್ತು. ಜನರು ದೇವರ ಮೇಲೆ ಭಕ್ತಿಯನ್ನು ಹೆಚ್ಚಿಸಿಕೊಳ್ಳುವುದೇ ಹಿಂದುತ್ವಕ್ಕೆ ನೀಡುವ ಕೊಡುಗೆ. ಕಾಂಗ್ರೆಸ್‌ ಆ ಕೊಡುಗೆಯನ್ನು ನೀಡಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿತ್ತು.

ಹಾಗಿದ್ದರೆ ದೇವಳ ಆದಾಯ ಯಾವ ಪ್ರಮಾಣದಲ್ಲಿ ಹೆಚ್ಚಿದೆ?

ಶಕ್ತಿ ಯೋಜನೆ ಬಳಿಕ ರಾಜ್ಯದ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ಹೆಚ್ಚಳವಾಗಿರುವುದು ಕಣ್ಣಿಗೆ ಕಾಣುವ ಸತ್ಯ. ಇದು ಆದಾಯದ ಮೇಲೆ ಉಂಟು ಮಾಡಿರುವ ಪರಿಣಾಮಗಳನ್ನು ಅಂಕಿ ಅಂಶಗಳೇ ಹೇಳುತ್ತಿವೆ.

ಹೆಚ್ಚಳದ ವ್ಯತ್ಯಾಸ ಎಷ್ಟು?

ಈ ವರ್ಷ ಜೂನ್ 11 ಜುಲೈ 15 ರವರೆಗೆ 58 ದೇಗುಲಗಳ ಇ-ಹುಂಡಿಯಲ್ಲಿ 24.47 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಲೆಕ್ಕಾಚಾರಗಳು ಹೇಳುತ್ತಿವೆ. ಕಳೆದ ವರ್ಷ ಜೂನ್ 11ರಿಂದ ಜುಲೈ 15ರವರೆಗೆ ಪ್ರತಿಷ್ಠಿತ 58 ದೇಗುಲಗಳಲ್ಲಿ ಇ- ಹುಂಡಿ ಮೂಲಕ 19 ಕೋಟಿ ಆದಾಯ ಸಂಗ್ರಹವಾಗಿತ್ತು.

ಯಾವ ಯಾವ ದೇವಸ್ಥಾನಗಳಿಗೆ ಎಷ್ಟು ಆದಾಯ ಹೆಚ್ಚಳ

2022 ರ ಜೂನ್ 11ರಿಂದ ಜುಲೈ 15ರವರೆಗೆ ದೇವಾಲಯಗಳಿಗೆ ಬಂದಿರುವ ಆದಾಯ ಮತ್ತು 2023ರ ಜೂನ್ 11ರಿಂದ ಜುಲೈ 15ರವರೆಗೆ ದೇವಸ್ಥಾನಗಳಿಗೆ ಬಂದಿರುವ ಆದಾಯದ ಲೆಕ್ಕಾಚಾರ ಇಲ್ಲಿದೆ

ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ- 11.13 ಕೋಟಿ
ಈ ವರ್ಷ- 11.16 ಕೋಟಿ

ಮೈಸೂರಿನ ಚಾಮುಂಡಿಬೆಟ್ಟ
ಕಳೆದ ವರ್ಷ- 48.01 ಲಕ್ಷ
ಈ ವರ್ಷ- 3.63 ಕೋಟಿ

ಯಡಿಯೂರು ಸಿದ್ದಲಿಂಗೇಶ್ವರ
ಕಳೆದ ವರ್ಷ-1.20 ಕೋಟಿ
ಈ ವರ್ಷ-1.48 ಕೋಟಿ

ನಂಜನಗೂಡು ಶ್ರೀಕಂಠೇಶ್ವರ
ಕಳೆದ ವರ್ಷ-1.05 ಕೋಟಿ
ಈ ವರ್ಷ- 1.27 ಕೋಟಿ

ಕೊಪ್ಪಳ ಜಿಲ್ಲೆ ಹುಲಿಗೆಮ್ಮದೇವಿ
ಕಳೆದ ವರ್ಷ- 1.02 ಕೋಟಿ
ಈ ವರ್ಷ- 1.41 ಕೋಟಿ

ಬೆಂಗಳೂರು ಬನಶಂಕರಿ
ಕಳೆದ ವರ್ಷ- 65.82 ಲಕ್ಷ
ಈ ವರ್ಷ- 83.64 ಲಕ್ಷ

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ
ಕಳೆದ ವರ್ಷ – 43.33 ಲಕ್ಷ
ಈ ವರ್ಷ- 48.09 ಲಕ್ಷ

ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
ಕಳೆದ ವರ್ಷ- 20.76 ಲಕ್ಷ
ಈ ವರ್ಷ- 27.98 ಲಕ್ಷ

ಕನಕಪುರದ ಕಬ್ಬಾಳಮ್ಮ
ಕಳೆದ ವರ್ಷ-13.96 ಲಕ್ಷ
ಈ ವರ್ಷ- 19.64 ಲಕ್ಷ

ಇದನ್ನೂ ಓದಿ: Free Bus Service : ಫ್ರೀ ಬಸ್ಸಲ್ಲಿ ಬಂದ ಮಹಿಳೆಯರಿಂದ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ!

Exit mobile version