Site icon Vistara News

Ganesh Chaturthi 2022 | ಗಣಪತಿಯನ್ನು ಪೂಜಿಸುವಾಗ ಈ ಮಂತ್ರ ಹೇಳಲು ಮರೆಯಬೇಡಿ

Ganesh Chaturthi

ಗಣಪತಿ ಎಲ್ಲರ ಇಷ್ಟದ ದೇವರು. ಎಲ್ಲರಿಗೂ ಒಲಿಯುವ ದೇವರು ಕೂಡ. ಯಾವುದೇ ಕಾರ್ಯದ ಆರಂಭಕ್ಕೂ ಮೊದಲು ವಿಘ್ನನಿವಾರಣೆಗಾಗಿ ಗಣೇಶನನ್ನು ಪೂಜಿಸಬೇಕೆಂದಿರುವುದರಿಂದ ಗಣೇಶನ ಪೂಜೆ, ಪ್ರಾರ್ಥನೆ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ಹೀಗಾಗಿಯೇ ಗಣಪತಿಯ ಹಬ್ಬವೆಂದರೆ (Ganesh Chaturthi 2022) ಸಂಭ್ರಮ ಹೆಚ್ಚು.

ಗಣೇಶ ಚತುರ್ಥಿಯಂದು ಎಲ್ಲರ ಮನೆಯಲ್ಲಿಯೂ ಗಣಪನಿಗೆ ಪೂಜೆ ನಡೆಯುತ್ತದೆ. ಅವನಿಗೆ ಯಾವ ಜಾತಿ, ಮತ, ಪಂಥವೂ ಇಲ್ಲ. ಯಾರು ಮನೆಗೆ ಕರೆಯುತ್ತಾರೋ ಅವರ ಮನೆಗೆ ಹೋಗುತ್ತಾನೆ. ಭಕ್ತಿಯಿಂದ ಪ್ರಾರ್ಥಿಸಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆ. ಅವರವರ ಅಭಿರುಚಿಗೆ ತಕ್ಕಂತೆ ರೂಪ ಹೊಂದಿರುವ ಗಣಪತಿ ಎಲ್ಲರ ಮನಸ್ಸು ಗೆಲ್ಲುವ ದೇವರು.

ಗಣಪತಿ ಹಬ್ಬದಂದು ನಾವು ಪೂಜೆ ಮಾಡುವಾಗ ಯಾವೆಲ್ಲಾ ಮಂತ್ರ ಹೇಳಬೇಕು, ಯಾವ ಮಂತ್ರ ಹೇಳಿದರೆ ಯಾವ ಇಷ್ಟಾರ್ಥಗಳು ಈಡೇರುತ್ತವೆ ಎಂದು ನೋಡೋಣ;

ಸರ್ವ ಇಷ್ಟಾರ್ಥಸಿದ್ಧಿಗಾಗಿ;
ಓಂ ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧೀಮಹಿ|
ತನ್ನೋ ದಂತೀಃ ಪ್ರಚೋದಯಾತ್‌||

ಅಡೆತಡೆ ನಿವಾರಣೆಗಾಗಿ
ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೆ ದೇವ ಸರ್ವಕಾರ್ಯೇಷು ಸರ್ವದಾ ||

ಕಾರ್ಯಸಿದ್ಧಿಗಾಗಿ
ಓಂ ತತ್ಪುರುಷಾಯ ವಿದ್ಮಹೇ|
ವಕ್ರತುಂಡಾಯ ಧೀಮಹಿ|
ತನ್ನೋ ದಂತೀಃ ಪ್ರಚೋದಯಾತ್‌ ||

ಸರ್ವ ಕಾರ್ಯಜಯಕ್ಕಾಗಿ
ಓಂ ಹಸ್ತಿಮುಖಾಯ ವಿದ್ಮಹೇ|
ಲಂಬೋದರಾಯ ಧೀಮಹಿ|
ತನ್ನೋ ಸಿದ್ಧಿಃ ಪ್ರಚೋದಯಾತ್‌ ||

ಕ್ರಿಮಿ -ಕೀಟಗಳಿಂದ ರಕ್ಷಣೆ ಪಡೆಯಲು
ಓಂ ರಾಕ್ಷಸೇಶಾಯ ವಿದ್ಮಹೇ|
ಬಲರಾಜಾಯ ಧೀಮಹಿ|
ತನ್ನಃ ಮೂಷಕಃ ಪ್ರಚೋದಯಾತ್‌||

ಹಬ್ಬದಂದು ಗಣೇಶನ ತತ್ತ್ವವು ಪೃಥ್ವಿಯ ಮೇಲೆ ಎಂದಿಗಿಂತ ಒಂದು ಸಾವಿರ ಪಟ್ಟು ಕಾರ್ಯ ನಿರತವಾಗಿರುತ್ತದೆಯಂತೆ. ಈ ಅವಧಿಯಲ್ಲಿ ಮಾಡಿದಂತಹ ಶ್ರೀ ಗಣೇಶನ ಉಪಾಸನೆಯಿಂದ ಗಣೇಶ ತತ್ತ್ವದ ಲಾಭವು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ.

ಹೀಗಾಗಿ ‘‘ಓಂ ಗಂ ಗಣಪತಯೇ ನಮಃ| ʼʼ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಬೇಕು. ಈ ನಾಮಜಪವನ್ನು ಒಬ್ಬರೇ ಹಾಗೂ ಸಾಮೂಹಿಕವಾಗಿಯೂ ಮಾಡಬಹುದು.

ಇದನ್ನೂ ಓದಿ| Ganesh Chaturthi 2022 | ತತ್ವಮಯನಾದ ದೇವ ಗಣಪತಿ

Exit mobile version