Site icon Vistara News

ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 2.52 ಕೋಟಿ ರೂ. ಸಂಗ್ರಹ

ಮಂತ್ರಾಲಯ ರಾಯರ ಮಠದ

ರಾಯಚೂರು: ಕೊರೊನಾ ಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪ್ರಸಿದ್ಧ ಧಾರ್ಮಿಕ ಕೇಂದ್ರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮತ್ತೆ ಹಿಂದಿನ ವೈಭವಕ್ಕೆ ಮರಳಿದೆ.

ಕಳೆದ ಜೂನ್‌ ತಿಂಗಳಿನಲ್ಲಿ ಮಠದಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಗಿದ್ದು, ಒಟ್ಟು 2,52,33,205 ರೂ. ಸಂಗ್ರಹವಾಗಿದೆ. ಇದರಲ್ಲಿ 5,61,355 ರೂ‌. ನ್ಯಾಣಗಳು ಜಮೆಯಾಗಿದೆ. ಇದಲ್ಲದೆ, 164 ಗ್ರಾಂ ಬಂಗಾರ ಮತ್ತು ‌1098 ಗ್ರಾಂ ಬೆಳ್ಳಿ ಸಮರ್ಪಣೆಯಾಗಿದೆ.

ಜೂನ್ ಒಂದೇ ತಿಂಗಳಿನಲ್ಲಿ ಇಷ್ಟೊಂದು ಕಾಣಿಕೆ ಹರಿದು ಬಂದಿರುವುದು ಮಠದ ಆಡಳಿಗಾರರಲ್ಲಿ ಆಶ್ಚರ್ಯ ಮೂಡಿಸಿದೆ. ಭಕ್ತರು ಬಂಗಾರ, ಬೆಳ್ಳಿಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮರ್ಪಣೆ ಮಾಡಿದ್ದಾರೆ. ಎಣಿಕೆಗಾಗಿ 300ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗಿದೆ.

ಹುಂಡಿ ಎಣಿಕೆ ಕಾರ್ಯದಲ್ಲಿ ನಿರತರಾಗಿರುವ ಸ್ವಯಂ ಸೇವಕರು.

ಜೂನ್‌ ತಿಂಗಳಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಬಂಗಾರ, ಬೆಳ್ಳಿ ಮತ್ತು ವಿದೇಶಿ ನ್ಯಾಣಗಳು ಸಹ ಕಾಣಿಕೆ ರೂಪದಲ್ಲಿ ಬಂದಿರುವುದು ಹುಂಡಿ ಎಣಿಕೆ ವೇಳೆ ತಿಳಿದುಬಂದಿದೆ ಎಂದು ಶ್ರೀ ಮಠದ ವ್ಯವಸ್ಥಾಪಕ ಎಸ್‌ ಕೆ ಶ್ರೀನಿವಾಸರಾವ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗುರು ರಾಯರ ಮಠದ ಹೆಸರಿನಲ್ಲಿಯೂ ಆನ್‌ಲೈನ್‌ನಲ್ಲಿ ವಂಚನೆ; ಇಬ್ಬರ ಬಂಧನ

Exit mobile version