Site icon Vistara News

Nanjanagud : ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ, ರಥೋತ್ಸವದ ಸಂಭ್ರಮ

nanjanagud

#image_title

ಮೈಸೂರು: ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ ಶುರುವಾಗಿದೆ. ನಂಜುಂಡೇಶ್ವರನ ಸನ್ನಿಧಿಯಲ್ಲಿ ರಥೋತ್ಸವ ಸಂಭ್ರಮ ಕಳೆಗಟ್ಟಿದೆ. ಗೌತಮ ಪಂಚ ರಥೋತ್ಸವದಲ್ಲಿ ರಾರಾಜಿಸಿದ ಶ್ರೀಕಂಠೇಶ್ವರನನ್ನು ಭಕ್ತಾದಿಗಳು ಆರಾಧಿಸಿದರು.
ನೀತಿ ಸಂಹಿತೆ ಹಿನ್ನೆಲೆ ಜಿಲ್ಲಾ, ತಾಲೂಕು ಆಡಳಿತ ವತಿಯಿಂದ ನಿರ್ವಹಣೆಯ ನೇತೃತ್ವ ವಹಿಸಲಾಗಿದೆ. ಬೆಳಗ್ಗೆ 6ರಿಂದ 6:40 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚಮಹಾ ರಥೋತ್ಸವ ಆರಂಭವಾಗಿದೆ.
ದೇವಾಲಯದ ಪ್ರಧಾನ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥ ಯಾತ್ರೆ ನಡೆದಿದೆ.
ರಥ ಬೀದಿಯಲ್ಲಿ ಶ್ರೀ ಗಣಪತಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮನವರು, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥಗಳು ಸಾಗಿತು.
ನೂರಾರು ಟನ್ ತೂಕದ ಬೃಹತ್ ರಥದಲ್ಲಿ ನಂಜುಂಡೇಶ್ವರ ಉತ್ಸವ ಮೂರ್ತಿ ರಾರಾಜಿಸಿದೆ. ಬಣ್ಣ ಬಣ್ಣದ ಬಾವುಟ, ಬಂಟಿಂಗ್ಸ್ ಗಳಿಂದ ಅಲಂಕಾರ ಮಾಡಲಾಗಿದೆ.
ರಾಜ್ಯದ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಾತ್ರಿಯಿಂದಲೇ ದೇವಾಲಯದ ಸುತ್ತಮುತ್ತ, ಮೊಗಶಾಲೆಯಲ್ಲಿ ಜನಸ್ತೋಮ ಬೀಡು ಬಿಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Exit mobile version