Site icon Vistara News

Horoscope Today |‌ ಕನ್ಯಾ ರಾಶಿಯವರಿಗೆ ಇಂದು ಸಂತೋಷದ ದಿನ; ನಿಮ್ಮ ಭವಿಷ್ಯ ಹೀಗಿದೆ

horoscope today

Horoscope Today

ಇಂದಿನ ಪಂಚಾಂಗ (12-೦೧-202೩)

ಶ್ರೀ ಶಕೇ 1944, ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ.

ತಿಥಿ: ಪಂಚಮಿ 16:36 ವಾರ: ಗುರುವಾರ
ನಕ್ಷತ್ರ: ಹುಬ್ಬಾ 14:23 ಯೋಗ: ಸೌಭಾಗ್ಯ 12:30
ಕರಣ: ತೈತುಲ 16:36 ಇಂದಿನ ವಿಶೇಷ: ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವದಿನ.
ಅಮೃತಕಾಲ: ಬೆಳಗ್ಗೆ 07 ಗಂಟೆ 19 ನಿಮಿಷದಿಂದ 09 ಗಂಟೆ 06 ನಿಮಿಷದವರೆಗೆ.

ಸೂರ್ಯೋದಯ: 06 : 45    ಸೂರ್ಯಾಸ್ತ: 0೬ : 11

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದ್ವಾದಶ ರಾಶಿ ಭವಿಷ್ಯ  (Horoscope Today)

ಮೇಷ: ಹಣಕಾಸಿನ ವಿಷಯದಲ್ಲಿ ಸುಧಾರಣೆ ನಿಶ್ಚಿತ. ಸಂಬಂಧಿಗಳು ನಿಮಗೆ ಅನಿರೀಕ್ಷಿತ ಉಡುಗೊರೆ ನೀಡುವ ಸಾಧ್ಯತೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಕಲೆ ಮತ್ತು ರಂಗಭೂಮಿಯ ಜೊತೆ ಸಂಪರ್ಕ ಹೊಂದಿರುವವರು ಸೃಜನಶೀಲವಾಗಿ ಅತ್ಯುತ್ತಮವಾದುದ್ದನ್ನು ನೀಡಲು ಹೊಸ ಅವಕಾಶ ಪಡೆಯುತ್ತಾರೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವೃಷಭ: ನಿಮ್ಮ ಆತ್ಮವಿಶ್ವಾಸ ನಿಮ್ಮ ಆಸೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಹಾಯ ಮಾಡುತ್ತದೆ. ಆಶಾವಾದಿಗಳಾಗಿರಿ ಮತ್ತು ಜೀವನದಲ್ಲಿ ಉಜ್ವಲ ಭವಿಷ್ಯ ಇದೆ ಎಂಬ ನಂಬಿಕೆ ಇರಲಿ. ವ್ಯಾಪಾರ ವ್ಯವಹಾರದಲ್ಲಿ ಲಾಭ ಸಿಗುವ ಸಾಧ್ಯತೆ. ಆರೋಗ್ಯ ಪರಿಪೂರ್ಣ, ಉದ್ಯೋಗಿಗಳಿಗೆ ಕೊಂಚ ಒತ್ತಡ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5

ಮಿಥುನ: ಆರೋಗ್ಯ ಚೆನ್ನಾಗಿರಲಿದೆ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಅವಕಾಶವಾಗಿರುತ್ತದೆ. ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿ ತಲುಪುತ್ತೀರಿ. ಉದ್ಯೋಗಿಗಳಿಗೆ ಉತ್ಸಾಹದ ದಿನ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಕಟಕ: ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಆದರೆ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಾವಶ್ಯಕ ವಿವಾದಗಳಲ್ಲಿ ಸಿಲುಕಿಕೊಳ್ಳುವುದು ಬೇಡ. ಆರ್ಥಿಕ ಪ್ರಗತಿ ಮಧ್ಯಮ. ಉದ್ಯೋಗದಲ್ಲಿ ಹಿಡಿದ ಕಾರ್ಯ ಮುಗಿಸುವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ಸಿಂಹ: ಕಚೇರಿ ಮತ್ತು ಮನೆಯಲ್ಲಿನ ಕೆಲವು ಒತ್ತಡಗಳು ನಿಮ್ಮ ಸಹನೆಯನ್ನು ಪರೀಕ್ಷಿಸುತ್ತವೆ. ಆರ್ಥಿಕವಾಗಿ ಸಲಹೆ ಸಹಕಾರ ಸಿಗಲಿದೆ. ಇಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಒತ್ತಡದ ವಾತಾವರಣವಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ:

ಕನ್ಯಾ: ಇಂದು ನಿಮಗೆ ಸಂತೋಷದ ದಿನವಾಗಿರಲಿದೆ. ಹಳೆಯ ವಿಚಾರಗಳನ್ನು ನೆನಪಿಸಿಕೊಂಡು ಮಾನಸಿಕ ಒತ್ತಡವನ್ನು ತಂದುಕೊಳ್ಳುವು ಬೇಡ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆರ್ಥಿಕವಾಗಿ ಪ್ರಗತಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ತುಲಾ: ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ. ಮನರಂಜನೆಗೆ ಸಮಯ ನೀಡಲಿದ್ದೀರಿ. ಇಂದು ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ವೃಶ್ಚಿಕ: ಬಹಳ ದಿನಗಳಿಂದ ನೀವು ಕಾಣುತ್ತಿದ್ದ ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುವ ಸಮಯ. ಅಲ್ಪ ಮಟ್ಟಿನ ಸಮಸ್ಯೆಗಳು ತಲೆದೋರಿದರೂ ಸಮರ್ಥವಾಗಿ ನಿಭಾಯಿಸುವಿರಿ. ಸಂಬಂಧಿಗಳಿಂದ ಶುಭ ಸುದ್ದಿ ಸಿಗಲಿದೆ. ಭೂಮಿ ಸಂಬಂಧಿ ವ್ಯಾಪಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಆರ್ಥಿಕವಾಗಿ ಇಂದು ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಧನಸ್ಸು: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಅನಿವಾರ್ಯ ಕಾರಣಗಳಿಂದ ಖರ್ಚು ‌ಹೆಚ್ಚಾಗಲಿದೆ. ಕಿರಿಯರಿಗೆ ಮಾರ್ಗದರ್ಶನ ಮಾಡುವಿರಿ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಮಕರ: ಆರೋಗ್ಯ ಸುಧಾರಣೆ. ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಜೀವನದ ಹಲವು ಪ್ರಮುಖ ವಿಷಯಗಳ ಕುರಿತು ಕುಟುಂಬದೊಂದಿಗೆ ಚರ್ಚಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಕುಂಭ: ಕೆಲಸದ ಸ್ಥಳದಲ್ಲಿ ಅಥವಾ ವ್ಯಾಪಾರದಲ್ಲಿ ನಿಮ್ಮ ಯಾವುದೇ ಅಜಾಗರೂಕತೆ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ ಆದಷ್ಟು ಜಾಗ್ರತೆ ಇರಲಿ. ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ದೈಹಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕೊಂಚ ಒತ್ತಡ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಮೀನ: ನಿಮ್ಮ ನಡವಳಿಕೆ ಇತರರ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನಿಮಗೆ ಭವಿಷ್ಯದ ಪ್ರವೃತ್ತಿಗಳ ಬಗ್ಗೆ ಆಲೋಚನೆ ಮೂಡಲಿದೆ. ವಿವಾಹ ಆಕಾಂಕ್ಷಿಗಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರೋಗ್ಯ ಪರಿಪೂರ್ಣ ವಾಗಿರಲಿದೆ. ಆರ್ಥಿಕವಾಗಿ ದಿಢೀರ್‌ ಲಾಭ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ:

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version