Site icon Vistara News

ಹಾಸನಾಂಬೆ ದೇವಿ ದರ್ಶನಕ್ಕೆ ತನ್ನ ಅರ್ಧಾಂಗಿಯನ್ನು ಹೊತ್ತು ತಿರುಗಿದ ಪತಿ

ಹಾಸನ: ಇವರು ಹಾಲು-ಜೇನಿನಂತಿರುವ ಅನ್ಯೋನ್ಯ ದಂಪತಿ. ಪತ್ನಿಗೆ ಹಾಸನಾಂಬೆ ದರ್ಶನ ಮಾಡಬೇಕೆಂಬ ಹಂಬಲ. ಆದರೆ, ಆಕೆ ವಿಶೇಷಚೇತನರಾಗಿದ್ದರು. ಹೀಗಾಗಿ ಅರ್ಧಾಂಗಿಯ ಆಸೆಯನ್ನು ನೆರವೇರಿಸಲು ಪತಿ ಮಾಡಿದ್ದು ವಿಶೇಷ ಕೆಲಸ.

ಯಾವ ಸಿನಿಮಾ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಪತ್ನಿಯನ್ನು ಎತ್ತಿಕೊಂಡ ಪತಿಯು ದೇವಿಯ ದರ್ಶನ ಮಾಡಿಸಿದ್ದಾರೆ. ಇವರ ಈ ಕಾರ್ಯಕ್ಕೆ ಪೊಲೀಸರು ಸಹ ಸಾಥ್‌ ಕೊಟ್ಟಿದ್ದಾರೆ. ಭಕ್ತರಿಗೆ ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವವಳು ಹಾಸನಾಂಬೆ.

ಈ ದೇವಿಯ ದರ್ಶನ ಮಾಡಬೇಕೆಂಬ ಆಸೆ ಹೊಂದಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯ ನಿವಾಸಿ ಗೌರಮ್ಮ ಅವರನ್ನು ಆಕೆಯ ಪತಿ ನಾಗರಾಜ್‌ ಎತ್ತಿಕೊಂಡು ಬಂದು ದರ್ಶನ ಮಾಡಿಸಿದ್ದಾರೆ. ಪತ್ನಿ ಹೊತ್ತು ಬಂದ ನಾಗರಾಜ್‌ ಅವರಿಗೆ ಪೊಲೀಸರು ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಕಳೆದ ವರ್ಷ ಕೂಡ ಪತ್ನಿಗೆ ದೇವಿ ದರ್ಶನ ಮಾಡಿಸಿದ್ದರು. ಇದನ್ನು ಕಂಡ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ವರ್ಷ ಕಳೆದರೂ ಬೆಳಗುತ್ತಿರುವ ಹಾಸನಾಂಬೆ ಜ್ಯೋತಿ; ಇಲ್ಲಿವೆ ಧಾರ್ಮಿಕ ಆಚರಣೆಯ ಫೋಟೊಗಳು

Exit mobile version