ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ದಿನ ಹತ್ತಿರ ಬರುತ್ತಿದ್ದಂತೆ ದೇಶವಾಸಿಗಳಲ್ಲಿ ರಾಮಭಕ್ತಿ ಸ್ಪುರಿಸುತ್ತಿದೆ. ಮಂದಿರದ ಅಂತಿಮ ರೂಪವನ್ನು ದರ್ಶಿಸಲು ಎಲ್ಲರೂ ತವಕದಲ್ಲಿದ್ದಾರೆ. ಬಾಲ ರಾಮನ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಭಕ್ತಿಯಿಂದ ಆರಾಧಿಸಲು ನಾನಾ ರೀತಿಯಲ್ಲಿ ಸಜ್ಜಾಗಿದ್ದಾರೆ. ಅದಕ್ಕೆ ತಕ್ಕಂತೆ ದೇಶದ ಮೂಲೆಮೂಲೆಗಳಿಂದ ನಾನಾ ಪ್ರಸಂಗಗಳು ದಾಖಲೆಯಾಗುತ್ತಿವೆ. ಅಂತೆಯೇ ಹೈದರಾಬಾದ್ ಮೂಲಕ 64 ವರ್ಷದ ಚಲ್ಲಾ ಶ್ರೀನಿವಾಸ ಶಾಸ್ತ್ರಿ ಎಂಬುವರು ರಾಮನಿಗಾಗಿ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ಪಾದುಕೆಗಳನ್ನು ಹೊತ್ತು ಅಯೋಧ್ಯೆಗೆ 8,000 ಕಿಲೋಮೀಟರ್ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಅವರ ಪ್ರಯಾಣವು ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆಯೊಂದಿಗೆ ಸಮಾಪ್ತಿಯಾಗಲಿದೆ.
ಶ್ರೀನಿವಾಸ ಶಾಸ್ತ್ರಿ ಅವರು ಅಯೋಧ್ಯೆ-ರಾಮೇಶ್ವರಂ ಮಾರ್ಗದ ಮೂಲಕ ಪಾದಯಾತ್ರೆ ಕೈಗೊಂಡಿದ್ದಾರೆ. ರಾಮನ ವನವಾಸದ ಸಂದರ್ಭವನ್ನು ಸ್ಮರಿಸುವ ಉದ್ದೇಶದರಿಂದ ಅವರು ಚಿನ್ನಲೇಪಿತ ಪಾದುಕೆಯೊಂದಿಗೆ ಹೋಗುತ್ತಿದ್ದಾರೆ. ಇವರ ರಾಮನ ಭಕ್ತಿ ಸಂದಾಯ ಇದೇ ಮೊದಲಲ್ಲ. ಹಿಂದೆ ರಾಮ ಮಂದಿರಕ್ಕೆ ಐದು ಬೆಳ್ಳಿ ಇಟ್ಟಿಗೆಗಳನ್ನು ದಾನ ಮಾಡಿದ್ದಾರೆ ಶ್ರೀನಿವಾಸ ಅವರು.
ನಿಷ್ಠಾವಂತ ಭಕ್ತರಾಗಿರುವ ಶ್ರೀನಿವಾಸ ಶಾಸ್ತ್ರಿ ಕಳೆದ ಜುಲೈ 20 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದರು. ರಾಮೇಶ್ವರದಿಂದ ಆರಂಭಗೊಂಡು ದಾರಿಯುದ್ದಕ್ಕೂ ಭಗವಾನ್ ರಾಮನು ಸ್ಥಾಪಿಸಿದ ಶಿವಲಿಂಗಗಳ ದರ್ಶನ ಪಡೆದು ಮುಂದಕ್ಕೆ ಸಾಗಿದ್ದಾರೆ.
ತೀರ್ಥಕ್ಷೇತ್ರಗಳಿಗೆ ಭೇಟಿ
ಒಡಿಶಾದ ಪುರಿ, ಮಹಾರಾಷ್ಟ್ರದ ತ್ರಯಂಬಕ್ ಮತ್ತು ಗುಜರಾತ್ನ ದ್ವಾರಕಾದಂತಹ ತೀರ್ಥಕ್ಷೇತ್ರಗಳನ್ನು ಕ್ರಮಿಸಿರುವ ಶಾಸ್ತ್ರಿ ಮುಂದಿನ 10 ದಿನಗಳಲ್ಲಿ ಅಯೋಧ್ಯೆಯನ್ನು ತಲುಪುವ ಗುರಿ ಹೊಂದಿದ್ದಾರೆ. ರಾಮ್ ಲಲ್ಲಾ ವಿಗ್ರಹಕ್ಕೆ ‘ಪಂಚ ಲೋಹಗಳುದಿಂದ ತಯಾರಿಸಿದ ಚಿನ್ನದ ಲೇಪಿತ ‘ ಪಾದುಕೆ’ (ತೆಲುಗಿನಲ್ಲಿ ಪಾದುಕಲು) ಅನ್ನು ಶಾಸ್ತ್ರಿ ಅವರು ತಲೆಯ ಮೇಲೆ ಹೊತ್ತು ನಡೆಯುತ್ತಿದ್ದಾರೆ. ಅಯೋಧ್ಯೆಯನ್ನು ತಲುಪಿದ ನಂತರ ಅದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲು ಯೋಜಿಸಿದ್ದಾರೆ.
ಭಗವಾನ್ ರಾಮನ ವನವಾಸದ ಮಾರ್ಗವನ್ನು ನಿಖರವಾಗಿ ನಕ್ಷೆ ಮಾಡಿದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಡಾ. ರಾಮಾವತಾರ ಅವರ ನೆರವಿನಿಂದ ಅವರು ಪಾದಯಾತ್ರೆ ಕೈಗೊಂಡಿದ್ದಾರೆ.
“ನನ್ನ ತಂದೆ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದರು. ಅವರು ಹನುಮಂತನ ದೊಡ್ಡ ಭಕ್ತರಾಗಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಅವರ ಆಸೆಯಾಗಿತ್ತು. ಅವರು ಇನ್ನಿಲ್ಲದ ಕಾರಣ, ಅವರ ಆಸೆಯನ್ನು ಪೂರೈಸಲು ನಾನು ನಿರ್ಧರಿಸಿದೆ” ಎಂದು ಶಾಸ್ತ್ರಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : Ram Mandir : ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ದೇಣಿಗೆ ನೀಡಿದ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ
ಶಾಸ್ತ್ರಿ ಅವರು ಪಾದಯಾತ್ರೆ ನಡುವೆ ತುರ್ತು ಕಾರ್ಯಕ್ಕಾಗಿ ನಿಷ್ಠಾವಂತ ಬ್ರಿಟನ್ ಭೇಟಿಗಾಗಿ ತನ್ನ ಯಾತ್ರೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿದ್ದರು. ತಮಿಳುನಾಡಿನಲ್ಲಿ ಯಾತ್ರೆ ನಿಲ್ಲಿಸಿದ ಸ್ಥಳದಿಂದ ಅದನ್ನು ಪುನರಾರಂಭಿಸಿದ್ದರು. ಅವರು ಅಯೋಧ್ಯೆಯಿಂದ ಸುಮಾರು 272 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಚಿತ್ರಕೂಟದಲ್ಲಿದ್ದಾರೆ. ಅವರ ಇತರ ಐದು ಮಂದಿ ತಮ್ಮ ಆಧ್ಯಾತ್ಮಿಕ ಪ್ರಯಾಣ ನಡೆಸುತ್ತಿದ್ದಾರೆ.
ಅಯೋಧ್ಯೆಯ ಭಾಗ್ಯನಗರ ಸೀತಾರಾಮ ಫೌಂಡೇಶನ್ನ ಸ್ಥಾಪಕರಾಗಿರುವ ಶಾಸ್ತ್ರಿ ಅವರು ಅಯೋಧ್ಯೆಯಲ್ಲಿಯೇ ಶಾಶ್ವತವಾಗಿ ನೆಲೆಸಲು ಯೋಜಿಸಿದ್ದಾರೆ. ಪವಿತ್ರ ನಗರದಲ್ಲಿ ಮನೆ ನಿರ್ಮಿಸಲು ಚಿಂತನೆ ನಡೆಸಿದ್ದಾರೆ.