Site icon Vistara News

Independence Day | ದೇಗುಲಗಳಲ್ಲಿಯೂ ಸ್ವಾತಂತ್ರ್ಯೋತ್ಸವ; ಇಲ್ಲಿವೆ ಅಪರೂಪದ ಚಿತ್ರಗಳು

Independence Day

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ದೇಗುಲ, ಮಠ-ಮಂದಿರಗಳು ಮತ್ತು ಧಾರ್ಮಿಕ ಕೇಂದ್ರಗಳೂ ಭಾಗಿಯಾಗಿವೆ. ಎಲ್ಲೆಡೆ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆ (Independence Day) ಆಚರಿಸಲಾಗಿದೆ.

ಕೆಲವು ದೇಗುಲಗಳಲ್ಲಿ ನೆರದಿದ್ದ ಭಕ್ತರು ಧ್ವಜಾರೋಹಣ ನೆರವೇರಿಸಿದರೆ, ಮಠ-ಮಂದಿರಗಳಲ್ಲಿ ಸಂತರು, ಗುರುಗಳು, ಸ್ವಾಮೀಜಿಗಳು ಧ್ವಜಾರೋಹಣ ನೆರವೇರಿಸಿ ದೇಶ ಪ್ರೇಮ ಮೆರೆದಿದ್ದಾರೆ. ಇದರ ಕೆಲ ಅಪರೂಪದ ಚಿತ್ರಗಳು ಇಲ್ಲಿವೆ;

ಶೃಂಗೇರಿಯ ಮಠದ ಆನೆಗಳ ಮೇಲೆ ರಾಷ್ಟ್ರಧ್ವಜ ಚಿತ್ರಿಸಲಾಗಿತ್ತು. ಆನೆಗಳು ರಾಷ್ಟ್ರಧ್ವಜವನ್ನು ಸೊಂಡಿಲಲ್ಲಿ ಹಿಡಿದು ದೇಗುಲಗಳನ್ನು ಸುತ್ತಿದವು, ಶ್ರೀಮಠದ ಆವರಣದಲ್ಲಿ ಓಡಾಡಿ ಸಂಭ್ರಮ ಮೂಡಿಸಿದವು.
ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಶ್ರೀ ಸಿದ್ಧಗಂಗಾ ಮಠವನ್ನು ತ್ರಿವರ್ಣ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.
ಸೋದೆ ವಾದಿರಾಜ ಮಠದಲ್ಲಿ ರಮಾ ತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು , ಭೀಮನಕಟ್ಟೆ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಸಂತೆಬೆನ್ನೂರಿನ ಉತ್ತರಾದಿ ಮಠದಲ್ಲಿ ಭಕ್ತರು ಧ್ವಜಾರೋಹಣ ನೆರವೇರಿಸಿದರು.
ಬಾದಾಮಿಯ ಶ್ರೀ ಬನಶಂಕರಿ ದೇವಿಯನ್ನು ತ್ರಿವರ್ಣದ ಶಾಲಿನಿಂದ ಅಲಂಕರಿಸಲಾಗಿತ್ತು.

ಇದನ್ನೂ ಓದಿ| Independence Day | ಕೊರೆವ ಚಳಿಯಲ್ಲೂ ಸಿಯಾಚಿನ್‌ನಲ್ಲಿ ತಿರಂಗಾ ಹಾರಿಸಿದ ಯೋಧರು

Exit mobile version