Site icon Vistara News

ISKCON: ಇಸ್ಕಾನ್‌ನಿಂದ ಯುಕೆಯಲ್ಲಿ ಶ್ರೀಲ ಪ್ರಭುಪಾದರ ಜೀವನ ಚರಿತ್ರೆ ‘ಸಿಂಗ್, ಡಾನ್ಸ್ ಆ್ಯಂಡ್‌ ಪ್ರೇ’ ಪುಸ್ತಕ ಬಿಡುಗಡೆ

'Sing, Dance and Pray' book release

'Sing, Dance and Pray' book release

ಬೆಂಗಳೂರು: ಇಸ್ಕಾನ್ ಬೆಂಗಳೂರು (ISKCON) ವತಿಯಿಂದ ‘ಸಿಂಗ್, ಡಾನ್ಸ್ ಆ್ಯಂಡ್‌ ಪ್ರೇ’ ಪುಸ್ತಕದ ಪ್ರಚಾರ ಪ್ರವಾಸವನ್ನು ಯುನೈಟೆಡ್ ಕಿಂಗ್‌ಡಮ್‌ (UK) ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದು ಇಸ್ಕಾನ್‌ ಹಾಗೂ ಅಂತಾರಾಷ್ಟ್ರೀಯ ಹರೇ ಕೃಷ್ಣ ಆಂದೋಲನದ ಸಂಸ್ಥಾಪನಾಚಾರ್ಯ ಶ್ರೀಮದ್ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಶ್ರೀಲ ಪ್ರಭುಪಾದ ಅವರ ಜೀವನ ಚರಿತ್ರೆಯಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ವಿವಿಧೆಡೆ ಗಣ್ಯರ ಉಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆಗೊಂಡಿತು.

ವಿಲ್ಬರ್ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಇತಿಹಾಸಕಾರ ಡಾ. ಹಿಂದೋಲ್ ಸೇನ್ ಗುಪ್ತ ಪುಸ್ತಕದ ಲೇಖಕರಾಗಿದ್ದಾರೆ. ಈ ಪುಸ್ತಕವು ಸಮಕಾಲೀನರಿಗೆ ಶ್ರೀಲ ಪ್ರಭುಪಾದರ ಅದ್ಭುತ ಬದುಕಿನ ಅಪೂರ್ವ ಚಿತ್ರಣ ನೀಡುತ್ತದೆ.
ಬ್ರಿಟನ್‌ನ ಅನೇಕ ಐತಿಹಾಸಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಥಳಗಳಲ್ಲಿ ಪುಸ್ತಕದ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

  1. ಯುಕೆಯಲ್ಲಿ ಭಾರತದ ಹೈ ಕಮಿಷನ್‌ ಸಾಂಸ್ಕೃತಿಕ ವಿಭಾಗವಾದ ನೆಹರು ಕೇಂದ್ರದಲ್ಲಿ ಮೇ 4ರಂದು ಪುಸ್ತಕ ಬಿಡುಗಡೆಗೊಂಡಿತು.
  2. ಪುಸ್ತಕ ಬಿಡುಗಡೆಯ ಅನಂತರ ಪ್ರತಿಷ್ಠಿತ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಪುಸ್ತಕದ ಕುರಿತು ಸಂವಾದ ನಡೆಯಿತು.
  3. ಶ್ರೀಲ ಪ್ರಭುಪಾದರ ಗೌರವಾರ್ಥವಾಗಿ ಹೌಸ್ ಆಫ್ ಕಾಮನ್ಸ್ ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
  4. ಶ್ರೀ ಗೀತಾ ಭವನ ಮಂದಿರ, ಬರ್ಮಿಂಗ್ಹಮ್​ನಲ್ಲಿ ಬಿಡುಗಡೆ.
  5. ಶ್ರೀ ಪ್ರಜಾಪತಿ ಸಂಸ್ಥೆ, ಲಿಸೆಸ್ಟರ್​
  6. ಶ್ರೀ ಸ್ವಾಮಿನಾರಾಯಣ ಮಂದಿರ, ಸ್ಟ್ಯಾಂಮೋರ್, ಲಂಡನ್

ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೇ 13 ರಂದು ನಡೆದ ಕಾರ್ಯಕ್ರಮದ ಜತೆಗೆ ಯುಕೆ ಪ್ರವಾಸವು ಸಮಾಪ್ತಿಗೊಂಡಿತು. ಇಸ್ಕಾನ್ ಬೆಂಗಳೂರಿನ ಮತ್ತು ಅಕ್ಷಯಪಾತ್ರಾ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತದಾಸರು ಈ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಮತ್ತು ಅಕ್ಷಯ ಪಾತ್ರಾ ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಾಪತಿ ದಾಸರು ಮತ್ತು ಪುಸ್ತಕದ ಲೇಖಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಗಣ್ಯ ಅತಿಥಿಗಳು, ಪ್ರಾಧ್ಯಾಪಕರು, ತತ್ತ್ವಜ್ಞಾನಿಗಳು, ವಿದ್ಯಾರ್ಥಿಗಳು, ಪುಸ್ತಕಪ್ರೇಮಿಗಳು ಮತ್ತಿತರರು ಪುಸ್ತಕವನ್ನು ಅಪಾರವಾಗಿ ಮೆಚ್ಚಿ ಶ್ರೀಲ ಪ್ರಭುಪಾದರು ಮಾಡಿದ ಆಧ್ಯಾತ್ಮಿಕ ಕ್ರಾಂತಿ ಕುರಿತ ಸ್ಫೂರ್ತಿದಾಯಕ ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಇದನ್ನೂ ಓದಿ | Prerane : ಸ್ಮೃತಿ, ವಿಸ್ಮೃತಿ, ಸಂಸ್ಕೃತಿ; ಇವುಗಳ ನಡುವಿನ ಸಂಬಂಧವೇನು?

ಈ ಕೆಳಕಂಡ ಗಣ್ಯ ಅತಿಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು:

ಶ್ರೀಲ ಪ್ರಭುಪಾದರವರಿಗೆ ಗಣ್ಯ ವ್ಯಕ್ತಿಗಳ ಮೆಚ್ಚುಗೆಯ ಮಾತು

ಅನಿಲ್ ಅಗರ್ವಾಲ್

“ಶ್ರೀಲ ಪ್ರಭುಪಾದರು ಇಳಿ ವಯಸ್ಸಿನಲ್ಲಿ ವಿಶ್ವಾದ್ಯಾಂತ ಕೃಷ್ಣ ಭಕ್ತಿ ಆಂದೋಲನವನ್ನು ಸ್ಥಾಪಿಸಿದ್ದು, ಅವರ ಜೀವನ ಮತ್ತು ಕಾರ್ಯಗಳನ್ನು ಕುರಿತು ಅರಿತಾಗ ನಾನು ತುಂಬಾ ಸ್ಫೂರ್ತಿಗೊಂಡೆ. ಅವರನ್ನು ನಾನು ಸರ್ವಕಾಲೀನ ಶ್ರೇಷ್ಠ ಉದ್ಯಮಿ ಎಂದು ಪರಿಗಣಿಸುವೆ. ಅವರು ವಿಶ್ವವ್ಯಾಪಿ ಸಂಸ್ಥೆಯನ್ನು ಸ್ಥಾಪಿಸಿರುವುದಷ್ಟೇ ಅಲ್ಲ, ಸಮಾಜಕ್ಕೆ ‌108 ಸಾಂಸ್ಕೃತಿಕ ಕೇಂದ್ರಗಳನ್ನು ಬಿಟ್ಟು ಹೋಗಿರುವುದಾಗಿದೆ. ʼಸಿಂಗ್, ಡಾನ್ಸ್ ಆ್ಯಂಡ್‌ ಪ್ರೇʼ ಒಂದು ಧಾರ್ಮಿಕ ಪುಸ್ತಕವಲ್ಲ, ಅದೊಂದು ಸ್ಫೂರ್ತಿದಾಯಕ ಪುಸ್ತಕವಾಗಿದೆ. ತಮ್ಮ ಬದುಕಿನಲ್ಲಿ ಸ್ಫೂರ್ತಿಯನ್ನು ಬಯಸುವವರೆಲ್ಲರೂ ಈ ಪುಸ್ತಕವನ್ನು ಅವಶ್ಯವಾಗಿ ಓದಲೇಬೇಕು.”

ಅಮೀಶ್ ತ್ರಿಪಾಠಿ

“ಯಾರೂ ಕೂಡ ಹಸಿವಿನಿಂದ ಇರಬಾರದು ಎನ್ನುವ ಶ್ರೀಲ ಪ್ರಭುಪಾದರ ಕನಸಿನ ಫಲವಾಗಿ ವಿಶ್ವವ್ಯಾಪಿ ಅಕ್ಷಯಪಾತ್ರಾದಲ್ಲಿ ಸಾಕಾರಗೊಂಡಿದೆ. ಭಾರತದಲ್ಲಿ ಆರಂಭಗೊಂಡ ಈ ಸಂಸ್ಥೆಯು ಯುಕೆಯಲ್ಲಿ ಕೂಡ ಸತ್ಕಾರ್ಯವನ್ನು ಮಾಡುತ್ತಿದೆ. ವಸುಧೈವ ಕುಟುಂಬಕಂ ಎನ್ನುವ ಅವರ ಸಂದೇಶವನ್ನು ಅಕ್ಷರ ಪಾತ್ರೆಯು ಎಲ್ಲೆಡೆ ಸಾರುತ್ತಿದೆ.”

ಮಧು ಪಂಡಿತ ದಾಸ

“ಈ ಯುಕೆ ಪ್ರವಾಸದ ಭಾಗವಾಗಿರುವುದು ನನಗೆ ಸಂತೋಷ ಉಂಟುಮಾಡಿದೆ. ‘ಸಿಂಗ್, ಡ್ಯಾನ್ಸ್ ಆ್ಯಂಡ್ ಪ್ರೇ’ ಪುಸ್ತಕದ ಅನಾವರಣವನ್ನು ಅತ್ಯಂತ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ಇತರ ಗಣ್ಯರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಶ್ರೀಲ ಪ್ರಭುಪಾದರು ಲಂಡನ್, ಪ್ರಪಂಚದ ಒಂದು ಪ್ರಮುಖ ನಗರವೆಂದು ಭಾವಿಸಿದ್ದರು. ಇಲ್ಲಿ ನಾವು ಅವರಿಗೆ ಗೌರವ ಅರ್ಪಿಸಿದ್ದು, ಆನಂದವನ್ನು ಉಂಟುಮಾಡಿದೆ. ಶ್ರೀಲ ಪ್ರಭುಪಾದರ ಜೀವನ ಚರಿತ್ರೆಯನ್ನು ಓದಿ ಮತ್ತು ಅವರ ಅದ್ಭುತ ಬದುಕು, ಜಗತ್ತಿಗೆ ಅವರು ನೀಡಿದ ಸಂದೇಶ ಮತ್ತು ಆಧ್ಯಾತ್ಮಿಕ ದೃಷ್ಟಿಯನ್ನು ಹರಡಲು ನಮಗೆ ನೆರವಾಗಿ ಎಂದು ಕೋರುವೆ.”

ಡಾ. ಹಿಂದೋಲ್ ಸೇನ್ ಗುಪ್ತ

“ ಶ್ರೀಲ ಪ್ರಭುಪಾದರು ತಮ್ಮ ಕೃಷ್ಣಪ್ರಜ್ಞಾ ಆಂದೋಲನದ ಆರಂಭಿಕ ಯಶಸ್ಸನ್ನು ಅಮೆರಿಕದಲ್ಲಿ ಕಂಡರು. ಆದರೆ ಬೀಟಲ್ಸ್ ಜತೆಗೆ ಸಂಪರ್ಕ ಮತ್ತು ಜಾರ್ಜ್ ಹ್ಯಾರಿಸನ್ ಅವರ ಶಿಷ್ಯನಾದ ಮೇಲೆ ಇಂಗ್ಲೆಂಡಿನಲ್ಲಿ ಇಸ್ಕಾನ್ ಹೆಚ್ಚು ಜನರನ್ನು ತಲುಪುವುದು ಸಾಧ್ಯವಾಯಿತು. ಇಂಗ್ಲೆಂಡಿನಲ್ಲಿ ಪ್ರಭುಪಾದರು ತಮ್ಮ ಮಹಾ ಮಂತ್ರವನ್ನು ಅತ್ಯಧಿಕ ಮಾರಾಟದ ದಾಖಲೆಯಾಗಿ ಪರಿವರ್ತಿಸಿದರು. ಆದುದರಿಂದ ಇಂಗ್ಲೆಂಡ್ ಅವರಿಗೆ ವಿಶೇಷ ದೇಶವಾಗಿತ್ತು. ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ಸೇರಿದಂತೆ ಯುಕೆಯ ವಿವಿಧ ಸ್ಥಳಗಳಲ್ಲಿನ ಪುಸ್ತಕ ಪ್ರವಾಸವು ನನಗೆ ಗೌರವದ ಸಂಗತಿಯಾಗಿದೆ. ಇದರಿಂದ ದೊಡ್ಡ ಕನಸು ನನಸಾಗಿದೆ.”

ಇದನ್ನೂ ಓದಿ | ಗೋ ಸಂಪತ್ತು: ತುಪ್ಪದಿಂದ ಯಾವೆಲ್ಲಾ ಔಷಧಿ ತಯಾರಿಸುತ್ತಾರೆ ನೋಡಿ!

ಶ್ರೀಲ ಪ್ರಭುಪಾದರ ಕೊಡುಗೆಯ ಸ್ಮರಣೆಗೆ ಇಸ್ಕಾನ್ ಬೆಂಗಳೂರಿನ ಪ್ರಯತ್ನಗಳು

ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾದ ಶ್ರೀಲ ಪ್ರಭುಪಾದರ 125ನೇ ಜನ್ಮದಿನೋತ್ಸವವನ್ನು ಇಸ್ಕಾನ್ ಬೆಂಗಳೂರು ಅನೇಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಅವರ ಬದುಕು, ಸಂದೇಶ ಮತ್ತು ಕೊಡುಗೆಗಳ ಕುರಿತು ಭಾರತ ಮತ್ತು ವಿದೇಶಗಳಲ್ಲಿ ಅರಿವು ಮೂಡಿಸಲು ಜೀವನ ಚರಿತ್ರೆ ಪುಸ್ತಕ ಅನಾವರಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. 125ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಿದ್ದನ್ನು ನೆನಪು ಮಾಡಿಕೊಳ್ಳಬಹುದು.

‘ಸಿಂಗ್, ಡ್ಯಾನ್ಸ್ ಆ್ಯಂಡ್‌ ಪ್ರೇ’ ಪುಸ್ತಕವು ವಿಶ್ವಕ್ಕೆ ಭಾರತದ ಅತಿ ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಾದ ಶ್ರೀಲ ಪ್ರಭುಪಾದರ ಬದುಕನ್ನು ಕುರಿತಂತೆ ಅತ್ಯುತ್ತಮವಾಗಿ ಸಂಶೋಧನೆ ಮಾಡಿ ಬರೆದ ಜೀವನ ಚಿತ್ರವಾಗಿದೆ. ಭಾರತದ ಆಧ್ಯಾತ್ಮಿಕ ನಾಯಕ, ಚಿಂತಕ ಮತ್ತು ಸುಧಾರಕರೊಬ್ಬರು ಪಶ್ಚಿಮ ರಾಷ್ಟ್ರಗಳಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶವನ್ನು ತೆಗೆದುಕೊಂಡು ಹೋಗಿದ್ದು ಮತ್ತು ಆ ಮೂಲಕ ವಿಶ್ವದ ಸುಖಕ್ಕಾಗಿ ಆಧ್ಯಾತ್ಮಿಕ ಕ್ರಾಂತಿಯನ್ನು ಉಂಟು ಮಾಡಿದ್ದು, ಇತಿಹಾಸದಲ್ಲಿಯೇ ಇದೇ ಮೊದಲು. ದೃಢ ಸಂಕಲ್ಪ ಮತ್ತು ಅಗಾಧ ಕರುಣೆಯ ಅವರ ಅದ್ಭುತ ಗಾಥೆಗೆ ಇದು ಒಂದು ಗೌರವಾರ್ಪಣೆ.

ಶ್ರೀಲ ಪ್ರಭುಪಾದರ ಜೀವನ ಚರಿತ್ರೆಯನ್ನು ಕುರಿತು

ʼಸಿಂಗ್, ಡ್ಯಾನ್ಸ್ ಆ್ಯಂಡ್‌ ಪ್ರೇʼ ಪುಸ್ತಕವು ಭಾರತದ ಪುರಾತನ ಆಧ್ಯಾತ್ಮಿಕ ಸಂಸ್ಕೃತಿಯನ್ನು 20ನೇ ಶತಮಾನದ ಪಾಶ್ಚಿಮಾತ್ಯ ಜಗತ್ತಿಗೆ ಶ್ರೀಲ ಪ್ರಭುಪಾದರ ಪ್ರಸ್ತುತಿಯನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಶ್ರೀಲ ಪ್ರಭುಪಾದರ ಜೀವನ, ಅವರ ಅಪೂರ್ವ ಗುಣ ಮತ್ತು ಅವರ ಅಗಾಧ ಪ್ರಭಾವವನ್ನು ಸಮಕಾಲೀನರಿಗೆ ಪರಿಚಯಿಸುತ್ತದೆ. ಅಮೆರಿಕದಲ್ಲಿ 60 ಮತ್ತು 70ರ ದಶಕದಲ್ಲಿ ಇದ್ದ ಕೌಂಟರ್ ಕಲ್ಚರ್‌ ಸಂದರ್ಭದಲ್ಲಿ ಅವರು ಅನೇಕ ಕಷ್ಟಕೋಟಲೆಗಳ ಮಧ್ಯೆಯೂ ನಿರಂತರವಾಗಿ ಪ್ರಯತ್ನಿಸುತ್ತ ಮತ್ತು ಶ್ರೀ ಕೃಷ್ಣನಲ್ಲಿ ಅಪಾರವಾದ ನಿಷ್ಠೆಯಿಂದ ಸಕಾರಾತ್ಮಕ ಸಾಂಸ್ಕೃತಿಕ ಪಲ್ಲಟವನ್ನು ತಂದ ವಿವರವನ್ನು ಈ ಪುಸ್ತಕವು ನೀಡುತ್ತದೆ. ಆ ಕಾಲದ ಗಣ್ಯರು ಮತ್ತು ಇತರ ಪ್ರಮುಖ ಜನರ ಮೇಲೆ ಅವರ ಪ್ರಭಾವವನ್ನು ಇದು ತಿಳಿಸುತ್ತದೆ. ಬೀಟಲ್ಸ್ ನಾಯಕತ್ವದ ಖ್ಯಾತ ಗಿಟಾರ್ ವಾದಕ ಜಾರ್ಜ್ ಹ್ಯಾರಿಸನ್, ಜಾನ್ ಲೆನನ್ ಅವರಲ್ಲಿ ಪ್ರಮುಖರು. ಅಮೆರಿಕದ ಕವಿ ಮತ್ತು ಲೇಖಕ ಅಲೆನ್ ಗಿನ್ಸ್ ಬರ್ಗ್ ಅವರ ಮೇಲೆ ಕೂಡ ಶ್ರೀಲ ಪ್ರಭುಪಾದರ ಪ್ರಭಾವವಿತ್ತು. ಇವುಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.

ಈ ಪುಸ್ತಕವು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗಿದೆ. ದೇಶಾದ್ಯಂತ ಇದಕ್ಕೆ ಒಳ್ಳೆಯ ವಿಮರ್ಶೆಯೂ ಬಂದಿದೆ. ಡಾ. ಜಾನ್ ಸ್ಟ್ರಾಟನ್ ಹಾಲೀ (ಧರ್ಮ ಕುರಿತು ಕ್ಲೈರ್ ಟೌ ಪ್ರಾಧ್ಯಾಪಕ, ಕೊಲಂಬಿಯಾ ವಿಶ್ವ ವಿದ್ಯಾಲಯ) ಮತ್ತು ಪ್ರಾನ್ಸಿಸ್ ಎಕ್ಸ್. ಕ್ಲೂನೆ (ದಿವ್ಯ ಶಾಸ್ತ್ರದ ಪರ್ಕ್ಮನ್ ಪ್ರಾಧ್ಯಾಪಕ, ಹಾರ್ವಡ್ ವಿಶ್ವವಿದ್ಯಾಲಯ) ಅವರಂತಹ ಅಂತಾರಾಷ್ಟೀಯ ವಿದ್ವಾಂಸರಲ್ಲದೆ ಶಶಿ ತರೂರ್ (ಸಂಸತ್ ಸದಸ್ಯ ಮತ್ತು ಲೇಖಕ) ಅವರಂತಹ ನಾಯಕರು ಮತ್ತು ಸ್ವಪನ್ ದಾಸ್‌ ಗುಪ್ತ (ಪತ್ರಕರ್ತ ಮತ್ತು ಚಿಂತಕ) ಅವರೂ ಕೂಡ ಈ ವಿದ್ವತ್‌ಪೂರ್ಣ ಕೃತಿಯನ್ನು ಮೆಚ್ಚಿಕೊಂಡು ಶ್ಲಾಘಿಸಿದ್ದಾರೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ: “ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ”!

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಜಗದೀಶ್ ಧನಕರ್‌, ಗೃಹ ಸಚಿವ ಅಮಿತ್ ಶಾ ಅವರು ಈ ಪುಸ್ತಕವನ್ನು ಸ್ವೀಕರಿಸಿದ್ದಾರೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಖ್ಯಾತ ಶಿಕ್ಷಣ ತಜ್ಞರೂ ದಾನಿಗಳೂ ಆದ ಸುಧಾ ಮೂರ್ತಿ ಅವರಂತಹ ಗಣ್ಯರು ಈ ಪುಸ್ತಕವನ್ನು ಮೆಚ್ಚಿಕೊಂಡಿದ್ದರು ಮತ್ತು ಭಾರತದಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Exit mobile version