ಬೆಂಗಳೂರು: ಯುವಾ ಬ್ರಿಗೇಡ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ʼಜಾಗೊ ಹಿಂದೂʼ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಸಂತರು, 15ಕ್ಕೂ ಹೆಚ್ಚು ವೈಚಾರಿಕ ಪ್ರಖರತೆಯುಳ್ಳ ಗಣ್ಯರು ಭಾಗವಹಿಸಿ ಹಿಂದೂ ಧರ್ಮದ ಆಗು-ಹೋಗುಗಳ ಕುರಿತು ಚರ್ಚಿಸಿದ್ದಾರೆ.
ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಸೂಕ್ತವಾಗಿ ಪರಿಹರಿಸುವ ರೀತಿ ಮತ್ತು ಹಿಂದೂ ಜಾಗೃತಿಯನ್ನು ಸುದೀರ್ಘವಾಗಿ ಉಳಿಸಿಕೊಳ್ಳಲು ಮಾಡಬೇಕಾದ ಪ್ರಯತ್ನದ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಶ್ರೀ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೇರಿದಂತೆ ಬೀದರ್‌ನಿಂದ ಮೈಸೂರಿನವರೆಗೆ ಅನೇಕ ಮಠಾಧೀಶರು, ಸಾಧುಗಳು ಭಾಗವಹಿಸಿದ್ದರು. ಬೀದರ್‌ನ ಸಿದ್ಧಾರೂಢ ಮಠದ ಅತ್ಯಂತ ಹಿರಿಯ ಸ್ವಾಮೀಜಿಯವರಾದ ಶ್ರೀ ಶಿವಕುಮಾರ ಸ್ವಾಮೀಜಿ ಸೇರಿದಂತೆ ಇಮ್ಮಡಿ ಶ್ರೀ ಸಿದ್ದರಾಮೇಶ್ವರ, ಶ್ರೀ ಶಾಂತವೀರ ಮಹಾಸ್ವಾಮೀಜಿಯಂತಹ ತರುಣ ಸ್ವಾಮೀಜಿಗಳೂ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದು, ಹಿಂದೂ ಸಮಾಜದ ಗೌರವವನ್ನು ಎತ್ತಿ ಹಿಡಿಯುವ ಅಗತ್ಯವನ್ನು ಎಲ್ಲಾ ಮಠಾಧೀಶರಿ ಪ್ರತಿಪಾದಿಸಿದರು ಎಂದು ಯುವಾ ಬ್ರಿಗೇಡ್ ತಿಳಿಸಿದೆ.
ಇದನ್ನೂ ಓದಿ|ಶ್ರೀರಂಗಪಟ್ಟಣ ಮಸೀದಿ ವಿವಾದ; ಮದರಸಾ ತೆರವಿಗೆ ಡೆಡ್‌ಲೈನ್ ಕೊಟ್ಟ ಹಿಂದೂ ಪರ ಸಂಘಟನೆಗಳು