Site icon Vistara News

Karwar News: ವಿಜೃಂಭಣೆಯ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವ

Chennapattana Hanumantha Bhatkal karwar

#image_title

ಕಾರವಾರ: ಭಟ್ಕಳ ಪಟ್ಟಣದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತಾಧಿಗಳ ಜಯಘೋಷಗಳ ನಡುವೆ ವೈಭವಯುತವಾಗಿ ಗುರುವಾರ (ಮಾ.30) ರಾಮ ನವಮಿಯಂದು ಸಂಪನ್ನಗೊಂಡಿತು.

ಮಾ.23 ರಿಂದ ಆರಂಭಗೊಂಡ ಧಾರ್ಮಿಕ ಪೂಜಾ ವಿಧಿವಿಧಾನಗಳು ಮಾ.31 ರವರೆಗೆ ನಡೆಯಲಿದೆ. ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಸೂರ್ಯೋದಯದಿಂದಲೇ ಸಾವಿರಾರು ಭಕ್ತರು ರಥ ಕಾಣಿಕೆಗಾಗಿ ಸರತಿ ಸಾಲಿನಲ್ಲಿ ನಿಂತು ಫಲಪುಷ್ಪವನ್ನು ಶ್ರೀದೇವರಿಗೆ ಅರ್ಪಿಸಿದರು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ತಾಲೂಕಿನ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಊರುಗಳಿಂದ ಆಗಮಿಸಿದ ಸಹಸ್ರಾರು ಜನರು ಪೂಜೆ ಪುನಸ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಜೆ 5.35ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ವಾಡಿಕೆಯಂತೆ ಶಿರ್ಕಿನ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆಯಿಂದ ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯ ಘೋಷದೊಂದಿಗೆ ರಥವನ್ನು ಎಳೆಯಲಾಯಿತು.

ಇದನ್ನೂ ಓದಿ: New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ರಥೋತ್ಸವದ ಸಂದರ್ಭದಲ್ಲಿ 20 ಸಾವಿಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಬಾರಿ ಡೊಳ್ಳು ಕುಣಿತ, ರೇಡಿಯೋ ಕಲಾವಿದ ಉದಯಪ್ರಭು ತಂಡದಿಂದ ಭಜನೆ, ವಾದ್ಯಗೋಷ್ಠಿ ಜನಮನ ಸೆಳೆದವು. ಆಡಳಿತಾಧಿಕಾರಿ ಮಮತಾ ದೇವಿ ಎಸ್, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಜೆ.ಡಿ ನಾಯ್ಕ, ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ ಮತ್ತಿತರ ಗಣ್ಯರು ದೇವರಿಗೆ ಪೂಜೆ ಸಲ್ಲಿಸಿದರು.

ದೇವಸ್ಥಾನದ ಶ್ರೀಧರ ಮೊಗೇರ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯ‌ ಕುಮಾರ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಉಪ ವಿಭಾಗದ ಡಿವೈಎಸ್‌ಪಿ ಶ್ರೀಕಾಂತ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐ ಸುರಕ್ಷತೆಯನ್ನು ಒದಗಿಸಿದ್ದು ಬ್ರಹ್ಮ ರಥೋತ್ಸವವು ಶಾಂತಿಯುತವಾಗಿ ಜರುಗಿತು.

ಇದನ್ನೂ ಓದಿ: Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್‌ ಆಗ್ತಿದೆ ಈತನ ಕೆಲಸ

Exit mobile version