ಆರೋಗ್ಯ
New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕೊರೊನಾ ಸೋಂಕಿನ ಬೆನ್ನಲ್ಲೇ ಮತ್ತೊಂದು ಸೋಂಕಿನ (New Virus) ಸುದ್ದಿ ಎಲ್ಲೆಡೆ ಹರಿದಾಡಿದೆ. ಸಿಲ್ವರ್ ಲೀಫ್ ಡಿಸೀಸ್ ಹೆಸರಿನ ಕಾಯಿಲೆ ಭಾರತದಲ್ಲಿ ಮೊದಲನೆಯದಾಗಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನವದೆಹಲಿ: ಕೊರೊನಾ ಸೋಂಕು ವಿಶ್ವಾದ್ಯಂತ ಭಾರೀ ತಲ್ಲಣವನ್ನೇ ಉಂಟುಮಾಡಿತ್ತು. ಲಕ್ಷಾಂತರ ಜೀವಗಳು ಈ ಸೋಂಕಿನಿಂದಾಗಿ ಸಾವನ್ನಪ್ಪಿವೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವೈರಸ್ (New Virus) ಬಂದಿರುವ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದೆ. ಅದರಲ್ಲೂ ಭಾರತದಲ್ಲಿಯೇ ಮೊದಲನೆಯದಾಗಿ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Covid-19 Cases: ಕೊರೊನಾ ಸೋಂಕಿನ ಕೇಸ್ನಲ್ಲಿ 24ಗಂಟೆಯಲ್ಲಿ ಶೇ.40 ಏರಿಕೆ; ಇಂದು 3ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೌದು. ಭಾರತದಲ್ಲಿ ಸಸ್ಯಗಳಿಗೆ ಹೆಚ್ಚಾಗಿ ಕಾಡುವ ರೋಗವೆಂದರೆ ಅದು ಸಿಲ್ವರ್ ಲೀಫ್ ರೋಗ. ಈ ರೋಗದ ವೈರಸ್ ಇದೀಗ ಮಾನವನ ದೇಹಕ್ಕೂ ಹೊಗ್ಗಿರುವುದಾಗಿ ವರದಿಯಾಗಿದೆ. ಭಾರತದ ರೈತನೊಬ್ಬನಿಗೆ ಈ ಸೋಂಕು ತಗುಲಿದ್ದು, ಆತನಲ್ಲಿ ಜ್ವರ, ಕೆಮ್ಮುವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಇದುವರೆಗೆ ಈ ಸೋಂಕು ಯಾವುದೇ ದೇಶದಲ್ಲಿಯೂ ಮನುಷ್ಯರಿಗೆ ಹಬ್ಬಿರಲಿಲ್ಲ. ಇದೇ ಮೊದಲನೇ ಬಾರಿಗೆ ಇಂತದ್ದೊಂದು ಪ್ರಕರಣ ವರದಿಯಾಗಿದೆ.
ಅಂದ ಹಾಗೆ ಈ ಸೋಂಕು ಯಾವಾಗ ರೈತನಿಗೆ ತಗುಲಿದ್ದು ಎನ್ನುವ ವಿಚಾರದಲ್ಲಿ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಈ ಕುರಿತಾದ ವರದಿಯೊಂದು ʼಮೆಡಿಕಲ್ ಮೈಕೋಲಜಿ ಕೇಸ್ ರಿಪೋರ್ಟ್ಸ್ʼ ಜರ್ನಲ್‌ನಲ್ಲಿ ದಾಖಲಾಗಿದೆ.
ಇದನ್ನೂ ಓದಿ: Coronavirus: ಇಂದು 1800ಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆ; ಏಪ್ರಿಲ್ನಲ್ಲಿ 2 ದಿನ ಆಸ್ಪತ್ರೆಗಳಲ್ಲಿ ಅಣುಕು ಕಾರ್ಯಾಚರಣೆ
ಇತ್ತೀಚೆಗೆ ಅಮೆರಿಕದ ಆರೋಗ್ಯ ಅಧಿಕಾರಿಗಳು ವೈರಸ್ ಒಂದರ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಕ್ಯಾಂಡಿಡಾ ಔರಿಸ್ ಫಂಗಸ್ ಹೆಸರಿನ ಸೋಂಕು ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದರು. ಹಾಗೆಯೇ ಈ ಸೋಂಕಿಗೆ ತುತ್ತಾಗುವವರಲ್ಲಿ ಶೇ.60 ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಮತ್ತೊಂದು ಸೋಂಕಿನ ವಿಚಾರ ಸುದ್ದಿಯಾಗಿದೆ. ಇದರ ಬಗ್ಗೆ ಭಾರತೀಯ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ.
ಆರೋಗ್ಯ
Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!
ಬಹಳಷ್ಟು ಸಾರಿ ನಾವು ಮೊಸರಿನೊಂದಿಗೆ ಸೇರಿಸಿ ತಿನ್ನುವ ಜೋಡಿ ಆಹಾರಗಳಿಂದಾಗಿ ನಮಗೆ ಅಸಿಡಿಟಿ, ಗ್ಯಾಸ್, ಎದೆಯುರಿ, ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರುತ್ತವೆ. ಆಯುರ್ವೇದದ ಪ್ರಕಾರ ವಿರುದ್ಧ ಗುಣದ ಆಹಾರಗಳನ್ನು ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ.
ಬಿಸಿಬಿಸಿಯಾದ ಆಲೂ ಪರಾಠಾದ ಮೇಲೆ ತುಂಡು ಬೆಣ್ಣೆ ಹಾಗೆಯೇ ಕರಗುತ್ತಿದ್ದರೆ, ಅದನ್ನು ಕೈಯಲ್ಲಿ ಮುರಿದು ಮೊಸರಿನ ಜೊತೆಗೆ ಅದ್ದಿ ಅದ್ದಿ ತಿನ್ನುವುದು ಸ್ವರ್ಗ ಸುಖ ಅಂತ ನಿಮಗೆ ಬಹಳ ಸಲ ಅನಿಸಿರಬಹುದಲ್ಲವೇ? ಆದರೆ, ನಿಜವಾದ ಅರ್ಥದಲ್ಲಿ ಇದು ತಿನ್ನಬಾರದ ಜೋಡಿಯಂತೆ. ನಮಗೇ ಗೊತ್ತಿಲ್ಲದ ಹಾಗೆ ಮೊಸರಿನ ಜೊತೆಗೆ ಆರೋಗ್ಯಕರ ಜೋಡಿಯಾಗದ ಜೋಡಿಗಳನ್ನು ನಾವು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ, ನಿಜಾರ್ಥದಲ್ಲಿ ಅವು ಸರಿಯಾದ ಜೋಡಿಯೇ ಆಗಿರುವುದಿಲ್ಲ.
ಭಾರತದಲ್ಲಿ ಮೊಸರು ಎಂಬುದು ನಿತ್ಯದ ಆಹಾರವಾದ್ದರಿಂದ ಅದಿಲ್ಲದೆ ಬಹುತೇಕದ ಆಹಾರಕ್ರಮ ಪೂರ್ಣವಾಗುವುದಿಲ್ಲವಾದ್ದರಿಂದ ಎಷ್ಟೋ ಸಾರಿ ನಮಗೇ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ. ಮೊಸರಿನಲ್ಲಿ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಶಿಯಂ ಮತ್ತಿತರ ಖನಿಜಾಂಶಗಳು ಇದ್ದು, ಇವು ದೇಹದ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವಾದರೂ ಬಹಳಷ್ಟು ಸಾರಿ ನಾವು ಮೊಸರಿನೊಂದಿಗೆ ಸೇರಿಸಿ ತಿನ್ನುವ ಜೋಡಿ ಆಹಾರಗಳಿಂದಾಗಿ ನಮಗೆ ಅಸಿಡಿಟಿ, ಗ್ಯಾಸ್, ಎದೆಯುರಿ, ಹೊಟ್ಟೆಯುಬ್ಬರ, ಜೀರ್ಣಕ್ರಿಯೆ ಸಮಸ್ಯೆಗಳು ತಲೆದೋರುತ್ತವೆ. ಆಯುರ್ವೇದದ ಪ್ರಕಾರ ವಿರುದ್ಧ ಗುಣದ ಆಹಾರಗಳನ್ನು ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಒಂದಕ್ಕೊಂದು ಹೊಂದಿಕೆಯಾಗದ ಗುಣಗಳ ಆಹಾರಗಳನ್ನು ಜೊತೆಯಾಗಿ ಸೇವಿಸುವುದರಿಂದ ಸಾಕಷ್ಟು ಜೀರ್ಣಕ್ರಿಯೆ ತೊಂದರೆಗಳು ಎದುರಾಗುತ್ತವೆ. ಹಾಗಾದರೆ ಬನ್ನಿ, ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳು ಒಳ್ಳೆಯ ಜೋಡಿಯಲ್ಲ ನೋಡೋಣ.
1. ಬೆಲ್ಲ ಮತ್ತು ಮೊಸರು: ಬೆಲ್ಲ ಸಕ್ಕರೆಗಿಂತ ಒಳ್ಳೆಯದು ನಿಜ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸಕ್ಕರೆಯ ಬದಲಿಎ ಬೆಲ್ಲವನ್ನು ಬಳಸುವುದುಂಟು. ಆದರೆ, ಬೆಲ್ಲ ಸಕ್ಕರೆಯಂತೆ ಎಲ್ಲದಕ್ಕೂ ಸರಿ ಹೊಂದುವುದಿಲ್ಲ. ಮೊಸರಿನ ಜೊತೆಗೆ ಬೆಲ್ಲ ಯೋಗ್ಯ ಜೋಡಿಯಲ್ಲ. ಮೊಸರು ಶೀತ ಪ್ರಕೃತಿಯಾದರೆ, ಬೆಲ್ಲ ಉಷ್ಣ ಪ್ರಕೃತಿಯದ್ದು. ಹಾಗಾಗಿ ಮೊಸರಿನ ಜೊತೆಗೆ ಬೆಲ್ಲ ಸೇರಿಸಿದರೆ ಕೆಮ್ಮು, ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಳೂ ಬರಬಹುದು ಎನ್ನುತ್ತಾರೆ ತಜ್ಞರು.
2. ಹಾಲು ಮತ್ತು ಮೊಸರು: ಎಷ್ಟೋ ವರ್ಷಗಳಿಂದ ನಾವು ಹಾಲು ಹಾಗೂ ಮೊಸರನ್ನು ಜೊತೆಜೊತೆಯಾಗಿ ಬಳಸುತ್ತಾ ಬಂದಿದ್ದೇವೆ. ಆದರೆ, ಹಾಲು ಹಾಗೂ ಮೊಸರು ಒಳ್ಳೆಯ ಕಾಂಬಿನೇಶನ್ ಅಲ್ಲವಂತೆ. ಯಾವುದೇ ಹುಳಿ ಬಂದ ಆಹಾರವನ್ನು ಹಾಲಿನ ಜೊತೆ ಬೆರೆಸುವುದು ಒಳ್ಳೆಯ ಅಭ್ಯಾಸ ಅಲ್ಲ. ಇದರಿಂದ ಹೊಟ್ಟೆ ಕೆಡುವ ಸಂಭವ ಹೆಚ್ಚು.
3. ಚಹಾ ಮತ್ತು ಮೊಸರು: ಚಹಾದ ಜೊತೆಗೆ ಮೊಸರು ತಿನ್ನುವ ಅಭ್ಯಾಸವಿದ್ದರೆ ಖಂಡಿತ ಬಿಡಿ. ಚಹಾದ ಜೊತೆ ಮೊಸರು ಯಾರಾದರೂ ತಿನ್ನುತ್ತಾರಾ ಎಂದು ಮರುಪ್ರಶ್ನೆ ಹಾಕಬೇಡಿ. ಚಹಾದ ಜೊತೆಗೆ ಮೊಸರಿನಿಂದ ಮಾಡಿದ ತಿನಿಸುಗಳಾದ ದಹಿ ಕೆಬಾಬ್, ದಹಿ ಸ್ಯಾಂಡ್‌ವಿಚ್ ಮತ್ತಿತರ ತಿನಿಸುಗಳೂ ಕೂಡಾ ಒಳ್ಳೆಯದಲ್ಲ. ತಂಪು ಹಾಗೂ ಉಷ್ಣ ಪ್ರಕೃತಿಯ ಎರಡು ವಿರುದ್ಧ ಆಹಾರಗಳಿವು.
4. ಮಾವಿನಹಣ್ಣು ಹಾಗೂ ಮೊಸರು: ಬಹಳಷ್ಟು ಮಂದಿ ಮ್ಯಾಂಗೋ ಶೇಕ್‌ಗೆ ಮೊಸರು ಹಾಕಿ ಮ್ಯಾಂಗೋ ಲಸ್ಸಿ ಮಾಡುವುದುಂಟು. ರುಚಿಯಾಗಿರುತ್ತದೆ ನಿಜ. ಆದರೆ, ಇದೂ ಕೂಡಾ ಒಳ್ಳೆಯ ಕಾಂಬಿನೇಶನ್ ಅಲ್ಲವಂತೆ. ಯಾಕೆಂದರೆ ಮೊಸರಿನಲ್ಲಿ ಪ್ರಾಣಿಜನ್ಯ ಪ್ರೊಟೀನ್ ಇದ್ದು ಇದು ಹಣ್ಣುಗಳ ಜೊತೆ ಬೆರೆತು ದೇಹದೊಳಗೆ ಹುಳಬರುವ ಸಾಧ್ಯತೆ ಹೆಚ್ಚಿರುವುದರಿಂದ ಇದು ಅಜೀರ್ಣದಂತಹ ತೊಂದರೆಗಳನ್ನು ಆಹ್ವಾನಿಸುತ್ತದೆ.
5. ಈರುಳ್ಳಿ ಮತ್ತು ಮೊಸರು: ನಾವೆಲ್ಲ ಈರುಳ್ಳಿ ಕತ್ತರಿಸಿ ಮೊಸರಿನಿಂದ ಮಾಡುವ ರೈತಾಕ್ಕೆ ಹಾಕುತ್ತೇವೆ. ಇದು ರುಚಿಯಲ್ಲಿ ಅದ್ಭುತವಾಗಿರುತ್ತದೆ ನಿಜ. ಆದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದಂತೆ. ಈರುಳ್ಳಿಯದು ಉಷ್ಣ ಪ್ರಕೃತಿಯಾದರೆ, ರೈತಾ ಶೀತ ಪ್ರಕೃತಿ. ಇವೆರಡನ್ನು ಸೇರಿಸಿದರೆ, ಚರ್ಮದ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದಂತೆ. ಮುಖ್ಯವಾಗಿ ಮೊಡವೆ, ಚರ್ಮದ ಅಲರ್ಜಿ, ಕಜ್ಜಿ, ತುರಿಕೆ ಇತ್ಯಾದಿ.
ಇದನ್ನೂ ಓದಿ: Benefits Of Eating Yogurt: ಮೊಸರು ತಿನ್ನುವ ಲಾಭಗಳೇನು ಗೊತ್ತೇ?
6. ಮೊಸರು ಹಾಗೂ ಮೀನು: ಮೀನು ಹಾಗೂ ಮೊಸರು ಎರಡರಲ್ಲೀ ಪ್ರೊಟೀನ್ ಹೇರಳವಾಗಿದೆ. ಹಾಗಾಗಿ ಎರಡು ಪ್ರೊಟೀನ್‌ಯುಕ್ತ ಆಹಾರಗಳ ಜೋಡಿ ಯಾವತ್ತೂ ಒಳ್ಳೆಯದಲ್ಲ. ಊಟದ ಜೊತೆಗೆ ಒಂದು ಪ್ರೊಟೀನ್‌ಯುಕ್ತ ಆಹಾರವಿದ್ದರೆ ಸಾಕು ಎನ್ನುತ್ತಾರೆ ತಜ್ಞರು. ಯಾಕೆಂದರೆ, ಪ್ರಟೀನನ್ನು ಕರಗಿಸುವುದಕ್ಕೆ ದೇಹಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ.
7. ಪರಾಠಾ ಮತ್ತು ಮೊಸರು: ಇದು ಬಹುತೇಕರಿಗೆ ಕೆಟ್ಟ ಸುದ್ದಿಯಾಗಿ ಕೇಳಬಹುದು. ಯಾಕೆಂದರೆ ಪರಾಠಾದ ಜೊತೆಗೆ ಮೊಸರು ತಿನ್ನುವುದು ಅತ್ಯಂತ ಪ್ರಸಿದ್ಧ ಹಾಗೂ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಕಾಂಬಿನೇಶನ್. ಆದರೆ, ಪರಾಠಾದಲ್ಲಿ ಹೆಚ್ ಎಣ್ಣೆಯಂಶ ಇರುವುದರಿಂದ ಅದನ್ನು ಮೊಸರಿನ ಜೊತೆ ಸೇರಿಸಿದಾಗ ಜೀರ್ಣಕ್ರಿಯೆ ನಿಧಾನವಾಗುತ್ತದೆ. ದೇಹದಲ್ಲಿ ಆಲಸ್ಯ ಹೆಚ್ಚುತ್ತದೆ.
ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಕತ್ತಲಾದ ಮೇಲೆ ತಿನ್ನಬಾರದು ಯಾಕೆ ಗೊತ್ತೇ?
ಆರೋಗ್ಯ
Health Tips For Monsoon: ಮಳೆಗಾಲದಲ್ಲಿ ಕಾಡುವ ಶೀತ-ಜ್ವರವನ್ನು ದೂರ ಇರಿಸುವುದು ಹೇಗೆ?
ಕೆಲವು ಸರಳ ಜೀವನಶೈಲಿಯ ವಿಧಾನಗಳು ಮತ್ತು ಸುಲಭ ಆಹಾರದ ಪಥ್ಯಗಳಿಂದ ಮಳೆಗಾಲದ ಸೋಂಕುಗಳಿಗೆ ಬೆಚ್ಚಿ ಬೀಳದೆ ಬೆಚ್ಚಗಿರಬಹುದು. (Health tips for monsoon) ಹಾಗಾದರೆ ಏನು ಮಾಡಬೇಕು?
ಮಳೆಗಾಲದಲ್ಲಿ ಹವಾಮಾನ ಬದಲಾಗುವುದು ಹೊರಗೆ ಮಾತ್ರವಲ್ಲ. ದೇಹದ ಒಳಗೂ ಹೌದಲ್ಲ. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಹೆಚ್ಚುವ ಶೀತ, ಥಂಡಿ ಒಂದೆಡೆಯಾದರೆ ಮಳೆಯಲ್ಲಿ ನೆನೆಯಬೇಕೆಂಬ ಬಯಕೆ, ಅನಿವಾರ್ಯತೆ ಇನ್ನೊಂದೆಡೆ. ಮಾತ್ರವಲ್ಲದೆ, ಗಾಳಿಯಲ್ಲಿ ಹರಡುವ ಸೋಂಕುಗಳ ಅಬ್ಬರ. ಈ ಎಲ್ಲದರ ಪರಿಣಾಮವೆಂದರೆ ಆಗಾಗ ಕಾಡುವ ನೆಗಡಿ-ಜ್ವರ. ಮಳೆಗಾಲದಲ್ಲಿ ಕಾಡುವ ನೆಗಡಿ-ಜ್ವರದ ಬಾಧೆಯಿಂದ ಮತ್ತು ಗಾಳಿಯ ಮೂಲಕ ದಾಳಿಯಿಡುವ ಸೋಂಕುಗಳನ್ನು (Health tips for monsoon) ದೂರ ಅಟ್ಟುವುದು ಹೇಗೆ?
ನಿದ್ದೆ: ಇದೆಂಥಾ ಮದ್ದು ಎಂದು ಹುಬ್ಬೇರಿಸಬೇಡಿ. ದಿನಕ್ಕೆ ಎಂಟು ತಾಸು ಕಣ್ತುಂಬಾ ನಿದ್ರೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ. ದೀರ್ಘಕಾಲ ನಿದ್ದೆಯಲ್ಲಿರುವಾಗ ತನಗಾದ ಹಾನಿಯನ್ನು ದುರಸ್ತಿ ಮಾಡಿಕೊಳ್ಳುವ ಕೆಲಸವನ್ನು ದೇಹ ಕೈಗೊಳ್ಳುತ್ತದೆ. ಜೊತೆಗೆ, ನಿದ್ದೆಯಲ್ಲಿ ಬಿಡುಗಡೆಯಾಗುವ ಸೈಟೋಕಿನ್‌ಗಳು ದೇಹಕ್ಕೆ ಅವಶ್ಯಕ. ದೇಹದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುವ ಪ್ರೊಟೀನ್‌ಗಳಿವು.
ವ್ಯಾಯಾಮ: ದೇವರ ತಲೆಯ ಮೇಲೆ ಹೂವಿಡುವಷ್ಟೇ ನಿಯತ್ತಿಂದ ವ್ಯಾಯಾಮ ಮಾಡಿ, ತಪ್ಪಿಸಬೇಡಿ. ಅದಕ್ಕೆಂದು ಜಿಮ್ ಸೇರಿಕೊಂಡು ಮೂಟೆಗಟ್ಟಲೆ ಭಾರವನ್ನು ಎತ್ತಬೇಕೆಂದಿಲ್ಲ. ಸರಳ ನಡಿಗೆಯೂ ಆದೀತು. ವಾರದಲ್ಲಿ ಐದು ದಿನ ಮತ್ತು ದಿನಕ್ಕೆ ೩೦ ನಿಮಿಷ ವಾಕಿಂಗ್ ಮಾಡಿದರೂ ಸಹ ಆರೋಗ್ಯ ವೃದ್ಧಿಸುತ್ತದೆ. ಮಳೆಗಾಲದ ಜಡ ವಾತಾವರಣದಲ್ಲಿ ತಿಂದಿದ್ದೂ ಪಚನವಾಗುತ್ತದೆ.
ವಿಟಮಿನ್ ಡಿ: ಮಳೆಗಾಲದ ಮೋಡ ಮುಸುಕಿದ ವಾತಾವರಣದ ಕಾರಣದಿಂದ ಬಿಸಿಲು ಕಡಿಮೆ. ಆದರೆ ಎಂದಾದರೂ ಬಿಸಿಲಿದ್ದಾಗ ಕೊಂಚ ಮೈಯೊಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ದೊರೆಯುತ್ತದೆ. ಮನಸ್ಸಿನ ಮಬ್ಬು ಕಳೆದು ಚೈತನ್ಯ ಆವರಿಸುತ್ತದೆ. ವಿಟಮಿನ್ ಡಿ ಕೊರತೆಯಿಂದಲೂ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ಚೀಸ್, ಕೊಬ್ಬು ಹೆಚ್ಚಿರುವ ಮೀನುಗಳು, ಮೊಟ್ಟೆಯ ಹಳದಿ ಭಾಗಗಳಿಂದಲೂ ದೊರೆಯುವ ಡಿ ಜೀವಸತ್ವವನ್ನು ದೇಹಕ್ಕೆ ಒದಗಿಸಿ.
ಅರಿಶಿನದ ಕಷಾಯ: ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಅರಿಶಿನವನ್ನು ಹಾಲಿಗೆ ಹಾಕಿಕೊಂಡು ಅಥವಾ ಕಷಾಯದೊಂದಿಗೆ ಸೇವಿಸುವುದು ಒಳ್ಳೆಯದು. ಕರಿಮೆಣಸಿನ ಪುಡಿಯೂ ಇದರೊಂದಿಗೆ ಹಿತ. ಮಾಮೂಲಿ ಚಹಾದ ಬದಲು ಯಾವುದೇ ರೀತಿಯ ಗ್ರೀನ್ ಟೀಯನ್ನೂ ಈ ದಿನಗಳಲ್ಲಿ ಬಳಸುವುದು ಹಿತವಾಗುತ್ತದೆ.
ಆಹಾರ: ಆದಷ್ಟೂ ಮನೆಯೂಟವೇ ಇರಲಿ. ಹೊತ್ತಿಂದ ಹೊತ್ತಿಗೆ ಬಿಸಿಯಾಗಿ, ಶುಚಿಯಾಗಿ ಆಹಾರ ಸೇವಿಸುವುದರಿಂದ ಅರ್ಧಕ್ಕರ್ಧ ಆರೋಗ್ಯ ಸಮಸ್ಯೆಗಳು ಬಳಿಗೆ ಸುಳಿಯುವುದಿಲ್ಲ. ಹೊರಗಿನ ಆಹಾರದಲ್ಲಿ ಶುಚಿತ್ವದ ಸಮಸ್ಯೆಯಿದ್ದರೆ ಸೋಂಕುಗಳಿ ಬೆನ್ನು ಬೀಳುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಬೆಚ್ಚಗಿನ ನೀರು ಕುಡಿಯಿರಿ. ಆದರೆ ಸಿಕ್ಕಾಪಟ್ಟೆ ಬಿಸಿನೀರು ಕುಡಿದು ಗಂಟಲು ಸುಟ್ಟುಕೊಳ್ಳುವ ಅಗತ್ಯವಿಲ್ಲ. ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿಸಿಕೊಳ್ಳುವುದು ಸಹ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಇನ್ನೊಂದು ವಿಧಾನ.
ಬೆಚ್ಚಗಿರಿ: ಮಳೆಯಲ್ಲಿ ನೆನೆದರೆ ಮೊದಲು ತಣ್ಣಗಿನ ವಸ್ತ್ರಗಳನ್ನು ತೆಗೆದಿರಿಸಿ, ಬೆಚ್ಚಗಿನ ವಸ್ತ್ರಗಳನ್ನು ಧರಿಸಿ. ಬಿಸಿಯಾಗಿ ಕಾಫಿ, ಕಷಾಯ ಅಥವಾ ಗ್ರೀನ್ ಟೀ ಕುಡಿಯುವುದು ಲಾಭದಾಯಕ. ಗ್ರೀನ್ ಟೀ ಜೊತೆಗೆ ನಾಲ್ಕಾರು ಹನಿ ನಿಂಬೆರಸ ಬೆರೆಸಿಕೊಂಡರೆ ವಿಟಮಿನ್ ಸಿ ಸಹ ದೇಹಕ್ಕೆ ದೊರೆಯುತ್ತದೆ. ಕೈಕಾಲುಗಳನ್ನು ಶುಚಿಯಾಗಿ ಇರಿಸಿಕೊಳ್ಳಿ. ಮಳೆಗಾಲದ ದಿನಗಳಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಮಹತ್ವದ್ದೆನಿಸುತ್ತದೆ.
ದೂರವಿರಿ: ಯಾರಿಗಾದರೂ ನೆಗಡಿ, ಜ್ವರದಂಥ ಲಕ್ಷಣಗಳಿದ್ದರೆ ಅವರಿಂದ ದೂರವಿರಿ. ಮಕ್ಕಳನ್ನೂ ಅಂಥವರ ಸಮೀಪ ಬಿಡಬೇಡಿ. ಒಂದೊಮ್ಮೆ ಗೊತ್ತಿಲ್ಲದೆಯೇ ಸೋಂಕಿತರೊಂದಿಗೆ ಹತ್ತಿರದಲ್ಲಿದ್ದಿರಿ ಎಂದಾದರೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ. ಹೊರಗಿನಿಂದ ಮನೆಯೊಳಗೆ ಬರುತ್ತಿದ್ದಂತೆ ಕೈಕಾಲುಗಳನ್ನು ಮೊದಲು ಶುಚಿ ಮಾಡಿಕೊಳ್ಳಿ.
ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!
ಇಷ್ಟಾಗಿಯೂ ನೆಗಡಿ, ಗಂಟಲುರಿ, ತಲೆಭಾರ ಮುಂತಾದ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ- ನಿಮ್ಮನ್ನು ಉಳಿದವರಿಂದ ಬೇರ್ಪಡಿಸಿಕೊಳ್ಳಿ. (Health tips for monsoon) ಕೆಮ್ಮುವಾಗ, ಸೀನುವಾಗ ಮೂಗು-ಬಾಯಿ ಮುಚ್ಚಿಕೊಳ್ಳುವುದು ಅಗತ್ಯ. ಅರಿಶಿನದ ಕಷಾಯ ಅಥವಾ ಶುಂಠಿ ಕಷಾಯಗಳು ನೆರವಾಗಬಹುದು. ಬಿಸಿ ಆವಿ ತೆಗೆದುಕೊಳ್ಳುವುದು ಗಂಟಲುರಿ ಮತ್ತು ಕಟ್ಟಿದ ಮೂಗಿನ ಪರಿಣಾಮಕಾರಿಯಾಗ ಉಪಶಮನ ನೀಡುತ್ತದೆ. ಕೆಮ್ಮು ಹೆಚ್ಚಾದರೆ ಜೇನುತುಪ್ಪದಲ್ಲಿ ಅತಿಮಧುರ ಅಥವಾ ಜೇಷ್ಠಮಧುವಿನ ಪುಡಿಯನ್ನು ತೆಗೆದುಕೊಳ್ಳುವುದು ಅನುಕೂಲ ಎನಿಸಬಹುದು. ಅಡುಗೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ-ಬೆಳ್ಳಿಳ್ಳಿ ಬಳಸುವುದೂ ಲಾಭದಾಯಕ. ಆಹಾರವನ್ನು ಬಿಸಿಯಿರುವಾಗಲೇ ಸೇವಿಸಿ. ಸಾಕಷ್ಟು ದ್ರಾವಾಹಾರವನ್ನು ಸೇವಿಸಿ, ಮಿಶ್ರಾಂತಿ ಪಡೆಯಿರಿ. ಒಂದೆರಡು ದಿನಗಳಲ್ಲಿ ಜ್ವರ ಮತ್ತಿತರ ಲಕ್ಷಣಗಳು ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯ
Dinesh Gundu Rao: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಮರು ತನಿಖೆ; ರೆಡಿ ಆಗ್ತಿದೆ ಡಿಪಿಆರ್!
Chamarajanagar oxygen tragedy: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021ರಲ್ಲಿ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ ಮೇ 2ರಂದು 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆಗ್ರಹಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಬೆಂಗಳೂರು: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಾಗೂ ಕೋವಿಡ್ (Covid 19) ಸಂದರ್ಭದಲ್ಲಿ ನಡೆದ ಕೆಲವು ಸಂಗತಿಗಳ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ (Chamarajanagar oxygen tragedy) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಾತನಾಡಿ, ಈ ಘಟನೆಯು ಎರಡು ಇಲಾಖೆಗೆ ಒಳಪಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ (Health Department) ಸಮನ್ವಯತೆ ಇರುವುದರಿಂದ ತನಿಖೆಯನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ, ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಹೊಸ ಸರ್ಕಾರ ಬಂದಿರುವುದರಿಂದ ನಾವು ಮರು ತನಿಖೆಗೆ ನಿರ್ಧಾರ ಮಾಡಿದ್ದೇವೆ. ಮರು ತನಿಖೆಗೆ ಸರ್ಕಾರಕ್ಕೆ ಹೇಳಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗಿ 36 ಕೊರೊನಾ ರೋಗಿಗಳು ಮೃತಪಟ್ಟಿದ್ದರು. ಈ ಬಗ್ಗೆ ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಈ ಪ್ರಕರಣವನ್ನು ತನಿಖೆಗೆ ಆದೇಶಿಸಿತ್ತು. ಈಗ ಅಧಿಕಾರಕ್ಕೆ ಬಂದೊಡನೆ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಪ್ರಜ್ಞಾವಂತ ಜಿಲ್ಲೆಯಾಗಿದೆ. ನಾನು ಯಾವ ಜಿಲ್ಲೆಗೂ ಬೇಡಿಕೆ ಇಟ್ಟಿರಲಿಲ್ಲ. ಇದು ಮುಖ್ಯಮಂತ್ರಿಗಳ ನಿರ್ಧಾರವಾಗಿದೆ. ಯಾವ ಜಿಲ್ಲೆಗೆ ಹೋದರೂ ಕೆಲಸ ಮಾಡಬೇಕು. ದಕ್ಷಿಣ ಕನ್ನಡದಲ್ಲಿ ಜನ ಸಹೋದರತೆಯಿಂದ ಬದುಕಿ ಬಾಳಬೇಕು. ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕಿದೆ. ಅಲ್ಲಿ ಶಾಂತಿ ಸೌಹರ್ದತೆ ನೆಲೆಸಬೇಕಿದೆ. ಅ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೋವಿಡ್ ಅವಧಿಯ ಟೆಂಡರ್‌ಗಳ ಮರು ಪರಿಶೀಲನೆ ಮಾಡಲಾಗುತ್ತದೆ. ಅನುಮಾನ ಬಂದ ಟೆಂಡರ್‌ಗಳ ತನಿಖೆ ಮಾಡುತ್ತೇವೆ. ಹೆಚ್ಚು ಬಿಡ್ ಮಾಡಿರುವ ಟೆಂಡರ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಹಿಂದೆ ಕರೆಯಲಾಗಿದ್ದ 108 ಆಂಬ್ಯುಲೆನ್ಸ್ ಟೆಂಡರ್ ಮತ್ತು ಡಯಾಲಿಸಿಸ್ ಟೆಂಡರ್ ಅನ್ನು ರದ್ದುಪಡಿಸಿದ್ದು, ಮರು ಟೆಂಡರ್ ಕರೆಯುತ್ತೇವೆ. ಜಿವಿಕೆ ಮೇಲೆ ಆರೋಪ ಬಂದಿರುವ ಕಾರಣ ಈ ಕ್ರಮ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು.
ಅಧಿಕಾರಿಗಳಿಗೆ ತರಾಟೆ
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳ ಜತೆ ಸಭೆ ಮುಂದುವರಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಗಳಲ್ಲಿ ಸಾವಾದರೆ ನಾನು ಸಹಿಸೋದಿಲ್ಲ. ಯಾರದ್ದೇ ತಪ್ಪು ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಈ ವಿಚಾರವಾಗಿ ಯಾವುದೇ ರಾಜಕೀಯ ಒತ್ತಡ ತಂದರೂ ಪ್ರಯೋಜನ ಇಲ್ಲ. ರಾಜಕೀಯ ಒತ್ತಡ ತಂದರೆ ಅದರ ಮುಂದಿನ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
ಈ ಹಿಂದೆ ಡಯಾಬಿಟಿಕ್ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಜಿರೋ ಡಯಾಬಿಟಿಕ್ ಎಂದು ಯಾದಗಿರಿ ಜಿಲ್ಲೆಯಲ್ಲಿ ವರದಿ ನೀಡಲಾಗಿದೆ. ಆದರೆ, ಇಂತಹ ತಪ್ಪು ಮಾಹಿತಿಗಳನ್ನು ಕೊಡಬಾರದು ಎಂದು ಇದೇ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಆರೋಗ್ಯ
Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್, ಡಯಾಲಿಸಿಸ್ ಟೆಂಡರ್ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ
Karnataka Health Department: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಅನೇಕ ಟೆಂಡರ್‌ಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಬಂದಿದ್ದು, ಈಗ ಆರೋಗ್ಯ ಇಲಾಖೆಯಲ್ಲಿ ಭಾರಿ ಸರ್ಜರಿಗೆ ಮುಂದಾಗಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಗುತ್ತಿಗೆಗಳ ಮೇಲೆ ಈಗಿನ ಕಾಂಗ್ರೆಸ್ ಸರ್ಕಾರ ಕಣ್ಣಿಟ್ಟಿದ್ದು, ಒಂದೊಂದೇ ಟೆಂಡರ್‌ಗಳನ್ನು ರದ್ದುಗೊಳಿಸುವತ್ತ ಹೆಜ್ಜೆಯನ್ನಿಡುತ್ತಿದೆ. ಅಲ್ಲದೆ, ಆಗಿನ ಸಚಿವ ಡಾ. ಕೆ. ಸುಧಾಕರ್ (Dr K Sudhakar) ತೆಗೆದುಕೊಂಡಿರುವ ಹಲವು ನಿರ್ಧಾರಗಳ ಬಗ್ಗೆಯೂ ತನಿಖೆ ನಡೆಸುವುದಾಗಿ ಈಗಾಗಲೇ ಹೇಳಿಕೊಂಡಿದೆ. ಈಗ ಇದರ ಭಾಗವಾಗಿ 108 ಆಂಬ್ಯುಲೆನ್ಸ್ ಹಾಗೂ ಡಯಾಲಿಸಿಸ್ ಕೇಂದ್ರಗಳ ಟೆಂಡರ್‌ಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಗಾಗಲೇ ಕೆಲವು ಟೆಂಡರ್‌ಗಳನ್ನು ರದ್ದುಪಡಿಸಿದ್ದೇವೆ. 108 ಆಂಬ್ಯುಲೆನ್ಸ್ ಸೇವೆ ನೀಡಲು ಜಿವಿಕೆಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ. ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನು ಸಹ ರದ್ದುಪಡಿಸಲಾಗಿದೆ. ಈಗ ಜರೂರಾಗಿರುವ ಕೆಲಸಗಳನ್ನು ಮಾಡುತ್ತಿದ್ದೇವೆ. ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ. ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆಯನ್ನು ಸರಿಪಡಿಸಬೇಕಿದೆ. ಪಾಲಿಸಿ ವಿಚಾರಗಳನ್ನು ಬದಲಾಯಿಸಬೇಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Traffic Police: ಒನ್‌ವೇ, ಫುಟ್‌ಪಾತ್‌ನಲ್ಲಿ ಗಾಡಿ ಓಡಿಸ್ಬೇಡಿ, ಹೋದ್ರೆ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ!
ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಈಗಾಗಲೇ ಕೆಲವು ಟೆಂಡರ್‌ಗಳನ್ನು ಕ್ಯಾನ್ಸಲ್ ಮಾಡಿದ್ದೇವೆ. ಬಾಕಿ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ತಜ್ಞರ ಜತೆ ಚರ್ಚೆ ಮಾಡಿ ಸುಧಾರಣೆ ತರುತ್ತೇವೆ. ಗುಣಮಟ್ಟದ ಚಿಕಿತ್ಸೆ, ಗುಣಮಟ್ಟದ ವ್ಯವಸ್ಥೆಯನ್ನು ನಾವು ಕೊಡುವಂತೆ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ
ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ಸಿಗಲಿದೆ
ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ ಅಂಥವರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಈ ಬಗ್ಗೆ ಸ್ಪಷ್ಟವಾಗಿ ಮಾರ್ಗಸೂಚಿ ಇದೆ. ಅಂಥವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬೇಡಿಕೆ ಇರುವಂತಹ ಅರ್ಹರಿಗೆ ಯೋಜನೆ ಸಿಗಲಿದೆ. ಜನಸಂಖ್ಯೆ ನೋಡಿದರೆ 1-2 ಪರ್ಸೆಂಟ್ ಮಾತ್ರ ಈ ರೀತಿ ಇರಬಹುದು. ಈ ರೀತಿ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದು ಸುಲಭ. ಆದರೆ ಅನುಷ್ಠಾನ ಮಾಡೋದು ಕಷ್ಟ. ಈಗ ಅನುಷ್ಠಾನ ಕೂಡ ಮಾಡಿ ಜನರಿಗೆ ನಾವು ತೋರಿಸಿದ್ದೇವೆ. ಅನುಷ್ಠಾನ ಮಾಡಲ್ಲ ಎಂದು ಕೆಲವರು ನಕರಾತ್ಮಕತೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಜನರಲ್ಲಿ ಕೋಮುವಾದದ ವಿಚಾರವನ್ನು ಹಿಂದಿನ ಬಿಜೆಪಿ ಸರ್ಕಾರದವರು ತುಂಬಿದರು. ಅವರ ಪಕ್ಷದ ಬೆಳವಣಿಗೆಗೆ ಸಿದ್ಧಾಂತ ಬಿತ್ತಲು ನೋಡುತ್ತಿದ್ದಾರೆ. ಮಕ್ಕಳಲ್ಲಿ ತಪ್ಪು ವಿಚಾರಗಳನ್ನು ತಲೆಗೆ ಹಾಕಬಾರದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ನಾವು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
-
ಪ್ರಮುಖ ಸುದ್ದಿ2 hours ago
Horoscope Today: ಈ ರಾಶಿಯವರ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ, ಎಚ್ಚರ ಇರಲಿ!
-
ಆರೋಗ್ಯ50 mins ago
Health Tips: ಮೊಸರಿನ ಜೊತೆಗೆ ಈ ಆಹಾರಗಳನ್ನು ತಿಂದರೆ ಅಪಾಯ ಕಟ್ಟಿಟ್ಟಬುತ್ತಿ!
-
ಕ್ರಿಕೆಟ್22 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕ್ರಿಕೆಟ್21 hours ago
Viral News: ಶುಭಮನ್ ಗಿಲ್ಗೆ ಪ್ರಪೋಸ್ ಮಾಡಿದ ಯುವತಿ; ಸಾರಾ ತೆಂಡೂಲ್ಕರ್ ರಿಯ್ಯಾಕ್ಷನ್ ಹೇಗಿತ್ತು?
-
ದೇಶ18 hours ago
Tipu Sultan: ಬುಲ್ಡೋಜರ್ ಮೂಲಕ ಟಿಪ್ಪು ಸುಲ್ತಾನ್ ಸ್ಮಾರಕ ನೆಲಸಮ, ವ್ಯಾಪಕ ಬಂದೋಬಸ್ತ್
-
ಕ್ರಿಕೆಟ್19 hours ago
WTC Final 2023: ರದ್ದಾಗುವ ಭೀತಿಯಲ್ಲಿದೆ ವಿಶ್ವ ಟೆಸ್ಟ್ ಫೈನಲ್ ಪಂದ್ಯ!
-
ಕರ್ನಾಟಕ17 hours ago
BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ
-
South Cinema19 hours ago
Adipurush Movie: ಮುಟ್ಟಾದವರು ಆದಿಪುರುಷ್ ಸಿನ್ಮಾ ನೋಡೋದು ಬೇಡ! ರಾಹುಕಾಲದಲ್ಲಿ ಶೋ ಬೇಡ್ವೇ ಬೇಡ