Site icon Vistara News

Kateel Durgaparameshwari | ಕಾಲಮಿತಿ ಯಕ್ಷಗಾನ ಪ್ರದರ್ಶನಕ್ಕೆ ವಿರೋಧ; ಕಟೀಲಮ್ಮನೆಡೆ ಭಕ್ತರ ನಡೆ

katilu durgaparmeshwari

ಮಂಗಳೂರು: ಯಕ್ಷಗಾನ ಕಾಲಮಿತಿಯನ್ನು ವಿರೋಧಿಸಿ ಮಂಗಳೂರಿನ ಬಜ್ಪೆಯಿಂದ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari) ದೇವಸ್ಥಾನದವರೆಗೆ ಸಾವಿರಾರು ಭಕ್ತರು ಪಾದಯಾತ್ರೆ ನಡೆಸಿದರು. ಕಟೀಲು ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತರ ಆಕ್ರೋಶ ಭುಗಿಲೆದ್ದಿದೆ.

ಸಂಜೆ 4:30 ರಿಂದ ರಾತ್ರಿ 10 ಗಂಟೆವರೆಗೆ ಯಕ್ಷಗಾನ ಪ್ರದರ್ಶನ ನಡೆಸಲು‌ ಆಡಳಿತ ಮಂಡಳಿ ನಿರ್ಧರಿಸಿದೆ. ಆಡಳಿತ ಮಂಡಳಿಯ ಈ ನಿರ್ಧಾರವನ್ನು ಖಂಡಿಸಿ ಕಟೀಲಮ್ಮನೆಡೆ ಭಕ್ತರ ನಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಹಿಂದಿನಂತೆ ರಾತ್ರಿಯಿಂದ ಬೆಳಗ್ಗಿನವರೆಗೆ ಹರಕೆಯ ಯಕ್ಷಗಾನ ನಡೆಸುವಂತೆ ಒತ್ತಾಯ ಕೇಳಿ ಬಂದಿದೆ. ಕಾಲಮಿತಿ ಯಕ್ಷಗಾನ ಪ್ರದರ್ಶನದಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬುದು ಭಕ್ತರ ವಾದ. ಆದರೆ, ಧ್ವನಿವರ್ಧಕ ಬಳಕೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿತ್ತು.

ಆಜಾನ್ ವಿವಾದದ ಬಳಿಕ ಧ್ವನಿವರ್ಧಕ ಬಳಕೆಯ ನಿರ್ಬಂಧದ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿರುವುದರಿಂದ ಧಾರ್ಮಿಕ ಧತ್ತಿ‌ ಇಲಾಖೆಯ ಅಧೀನಕ್ಕೆ ಒಳಪಡುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ಆ ಆದೇಶವನ್ನು ಪಾಲಿಸಲು ಮುಂದಾಗಿದೆ.

ಆದರೆ, ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಭಕ್ತರು ವಿರೋಧ ವ್ಯಕ್ತಪಡಿಸಿದ್ದು, ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ನಡೆಸಿದರು. ಸುಮಾರು ಹತ್ತು ಕಿ.ಮೀ‌. ದೂರದವರೆಗೆ ನಡೆಯಲಾಗಿದೆ. ಈ ವೇಳೆ ಪಾದರಕ್ಷೆಯನ್ನೂ ಕಳಚಿ ಜನ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ | ಮಂಗಳೂರು | ನೂರರ ಸಂಭ್ರಮದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದೆ

Exit mobile version