ಕಾರವಾರ: ರಾಜ್ಯಾದ್ಯಂತ ಮಹಾಶಿವನ (Maha Shivaratri 2023) ನಾಮಸ್ಮರಣೆಯಲ್ಲಿ ಜನರು ತೊಡಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರ ದಂಡು ಹರಿದು ಬಂದಿತ್ತು. ಸರತಿ ಸಾಲಿನಲ್ಲಿ ನಿಂತು ಜನರು ದೇವರ ದರ್ಶನ ಮಾಡಿದರು.
ಈ ಬಾರಿ ಶಿವರಾತ್ರಿ ಹಬ್ಬ ಶನಿವಾರದಂದು ಬಂದಿದ್ದು ಹಬ್ಬದ ರಜೆಯೊಂದಿಗೆ ವೀಕೆಂಡ್ ಅನ್ನು ಕುಟುಂಬಸ್ಥರೊಂದಿಗೆ ಕಳೆಯಲು ಪ್ರವಾಸಿಗರ ದಂಡು ಶ್ರೀಕ್ಷೇತ್ರ ಗೋಕರ್ಣದತ್ತ ಮುಗಿಬಿದ್ದಿತ್ತು. ಮಹಾಬಲೇಶ್ವರ ದೇವಸ್ಥಾನದಲ್ಲಿನ ಆತ್ಮಲಿಂಗ ದರ್ಶನದ ಜತೆಗೆ ಕುಟುಂಬಸ್ಥರೊಂದಿಗೆ ಕಡಲತೀರಗಳಲ್ಲಿ ಎಂಜಾಯ್ ಮಾಡಲು ಅವಕಾಶ ಸಿಗುವುದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಶುಕ್ರವಾರ ಸಂಜೆಯಿಂದಲೇ ಆಗಮಿಸಿದ್ದರು.
ಇದನ್ನೂ ಓದಿ: Maha Shivaratri 2023: ಧಾರವಾಡ ಸೋಮೇಶ್ವರನ ಗರ್ಭಗುಡಿ ಪ್ರವೇಶಕ್ಕೆ ಅವಕಾಶ; ಐತಿಹಾಸಿಕ ತ್ರಿಕುಟೇಶ್ವರನಿಗೆ ವಿಶೇಷ ಪೂಜೆ
ಗೋಕರ್ಣದ ಮುಖ್ಯ ಕಡಲತೀರದ ಜತೆಗೆ ಇಲ್ಲಿನ ಕುಡ್ಲೇ ಬೀಚ್, ಓಂ ಬೀಚ್‌ಗಳಲ್ಲೂ ವೀಕೆಂಡ್ ರಜೆ ಹಿನ್ನಲೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಕೆಲವರು ದೇವರ ದರ್ಶನಕ್ಕೆಂದು ಬಂದು ಇಲ್ಲಿನ ಕಡಲತೀರದಲ್ಲಿ ಸುತ್ತಾಡಿ ಕಾಲ ಕಳೆದು ತೆರಳಿದರು. ಕಡಲತೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೀಚ್ ಲೈಫ್‌ಗಾರ್ಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.
ಕಡಲ ತೀರದಲ್ಲಿ ಪ್ರವಾಸಿಗರ ಮೋಜು ಮಸ್ತಿ ಹೀಗಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ