ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿಂದು ಶಿವರಾತ್ರಿ (Maha Shivaratri 2023) ಹಬ್ಬದ ಸಂಭ್ರಮ ಮನೆ ಮಾಡಿತ್ತು. ರಾಮನಗರ, ಬೆಂಗಳೂರು ಚಾಮರಾಜನಗರ ಜತೆಗೆ ಪಕ್ಕದ ತಮಿಳುನಾಡು ಸೇರಿದಂತೆ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನ ಪಡೆದರು.
ದೇವಸ್ಥಾನವನ್ನು ವಿವಿಧ ಹೂ, ಹಣ್ಣು, ತರಕಾರಿ ಸೇರಿದಂತೆ ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಸತಿ ಸಚಿವ ವಿ ಸೋಮಣ್ಣ ಕೂಡ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು.
ಮಾದಪ್ಪನ ಭಕ್ತರ ಸಂಖ್ಯೆ ಈ ವರ್ಷ ಹೆಚ್ಚಾಗಿದ್ದು, ಕಾಲ್ನಡಿಗೆಯಲ್ಲಿಯೂ ಭಕ್ತರು ಆಗಮಿಸಿದ್ದರು. ಬರುವ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮತ್ತಷ್ಟು ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಕ್ರಮ ವಹಿಸುತ್ತೇನೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.
ಇದನ್ನೂ ಓದಿ: Maha Shivaratri 2023: ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಕಣ್ಣು ಹಾಯಿಸಿದಷ್ಟು ಜನವೋ ಜನ; ಮಹಾಬಲೇಶ್ವರನ ಕಣ್ತುಂಬಿಕೊಂಡ ಭಕ್ತರು
ಹರಕೆ ಕಟ್ಟಿ ಬಂದಿದ್ದ ಭಕ್ತರು ಉರುಳು ಸೇವೆ ಸಲ್ಲಿಸಿದರು. ಅಲ್ಲದೆ, ಹುಲಿ ವಾಹನ, ನಂದಿ ವಾಹನವನ್ನು ಎಳೆಯುದರ ಮೂಲಕ ಅವರ ಭಕ್ತಿ ಹೊರಹಾಕಿದರು. ಇನ್ನು ಮಾದಪ್ಪ ನಂಬಿದರೆ ಕೈ ಬಿಡಲ್ಲ, ಕರುಣಾಮಯಿ ಎಂಬ ಹಿನ್ನೆಲೆಯಲ್ಲಿ ಮಾದಪ್ಪನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನಾವು ಸಹ ಇಲ್ಲೇ ಉಳಿದು ಶಿವರಾತ್ರಿ ಆಚರಣೆ ಮಾಡುತ್ತೇವೆ ಎಂದು ಶಿವಭಕ್ತೆ ಜಯಮ್ಮ ತಿಳಿಸಿದರು.
ಚಾಮರಾಜನಗರದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ