Site icon Vistara News

Makar Sankranti 2023 | ಗವಿಗಂಗಾಧರನಿಗೆ ಸೂರ್ಯರಶ್ಮಿಯ ಅಭಿಷೇಕದ ನಮನ; ವಿಸ್ಮಯ ದರ್ಶನಕ್ಕೆ ಕಾದುನಿಂತ ಭಕ್ತಗಣ

ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿ

ಬೆಂಗಳೂರು: ಮಕರ ಸಂಕ್ರಾಂತಿ (Makar Sankranti 2023) ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಮುಂಜಾನೆನಿಂದ ಭಕ್ತರು ಆಗಮಿಸುತ್ತಿದ್ದಾರೆ. ನಗರದ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಇತ್ತ ಸಂಕ್ರಾಂತಿಯಲ್ಲಿ ವಿಶೇಷವಾಗಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವ ಲಿಂಗದ ಮೇಲೆ ಸೂರ್ಯ ರಶ್ಮಿಯ ಸ್ಪರ್ಶವಾಗಲಿದ್ದು, ಕ್ಷಣಗಣನೆ ಶುರುವಾಗಿದೆ.

ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಸಂಕ್ರಾಂತಿಯ ವಿಶೇಷ ಪೂಜೆ ನೆರವೇರಿಸಲಾಯಿತು. ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಾಯಿಸುವ ಪುಣ್ಯಕಾಲದಲ್ಲಿ ಗವಿಗಂಗಾಧರೇಶ್ವರನ ದೇಗುಲದಲ್ಲಿ ಸಂಕ್ರಾಂತಿಯಂದು ನಡೆಯುವ ಕೌತುಕವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಪಥ ಬದಲಾವಣೆಗೂ ಮುನ್ನ ಶಿವಲಿಂಗವನ್ನು ಸ್ಪರ್ಶಿಸಿ ನಂತರ ಸೂರ್ಯ ತನ್ನ ಪಥವನ್ನು ಬದಲಿಸಲಿದ್ದಾನೆ.

8 ನಿಮಿಷಗಳ ಕೌತುಕ
ಈ ಬಾರಿ ಸಂಜೆ 5.20 ರಿಂದ 5.28ರ ಸಮಯದಲ್ಲಿ ಒಟ್ಟು 8 ನಿಮಿಷದ ಒಳಗೆ ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದೆ. ಶಿವನನ್ನು ಸ್ಪರ್ಶಿಸುವ ವೇಳೆ ದೇವಸ್ಥಾನದ ಒಳ ಭಾಗಕ್ಕೆ ಯಾರಿಗೂ ಪ್ರವೇಶವಿಲ್ಲ. ಬದಲಿಗೆ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗುವುದೆಂದು ದೇಗುಲದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ಮಾಹಿತಿ ನೀಡಿದ್ದಾರೆ.

ಭಕ್ತಾಧಿಗಳು ಹೊರಭಾಗದಲ್ಲಿಯೇ ನಿಂತು ಸೂರ್ಯರಶ್ಮಿ ಬೀಳುವುದನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯ ಶಿವನನ್ನು ಸ್ಪರ್ಶಿಸಿದ ನಂತರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗುವುದು. ಸಂಜೆ 6 ಗಂಟೆ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಇದನ್ನೂ ಓದಿ | Bejjavalli Fair | ಅಯ್ಯಪ್ಪ ಸ್ವಾಮಿ ಸನ್ನಿಧಾನ ಬೆಜ್ಜವಳ್ಳಿ ಜಾತ್ರೆ ಜೋರು; ಮಕರ ಸಂಕ್ರಾಂತಿ ದಿನ ದರ್ಶನ ನೀಡುವ ಗರುಡ

Exit mobile version