Site icon Vistara News

Missing Case : ಇದ್ದಕ್ಕಿದ್ದಂತೆ ಬಸದಿಯಿಂದ ಜೈನ ಮುನಿ ನಾಪತ್ತೆ! ಭಕ್ತರಲ್ಲಿ ಆತಂಕ

Nandiparvata Jain Basadi missing

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಬಸದಿಯಿಂದ ಜೈನ ಮುನಿ ನಾಪತ್ತೆಯಾಗಿರುವ (Missing Case) ಘಟನೆ ನಡೆದಿದೆ. ಗ್ರಾಮದ ನಂದಿಪರ್ವತ ಜೈನ ಬಸದಿಯಿಂದ (Nandiparvata Jain Basadi) ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆ ಆದವರು.

ಜೈನ ಮುನಿ ಜು. 6ರಂದು ಬೆಳಗ್ಗೆ 8 ಗಂಟೆಯಿಂದ ನಾಪತ್ತೆಯಾಗಿದ್ದು, ಭಕ್ತರು ಬಸದಿಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜು.5ರ ರಾತ್ರಿ 10 ಗಂಟೆಯವರೆಗೆ ತಮ್ಮ ಕೋಣೆಯಲ್ಲಿಯೇ ಇದ್ದ ಸ್ವಾಮೀಜಿಯನ್ನು ಕಂಡಿದ್ದಾರೆ. ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿಪರ್ವತದಲ್ಲಿ ವಾಸವಿದ್ದರು.

ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲು ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲು ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇದೆ. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿದೆ.

ಇದನ್ನೂ ಓದಿ: Self Harming : ಅಂಗಡಿ ಮುಂದೆ ನೇತಾಡುತ್ತಿತ್ತು ವ್ಯಕ್ತಿ ಶವ; ನೇಣಿಗೆ ಕೊರಳೊಡ್ಡಿದ ಬೆಸ್ಕಾಂ ಎಂಜಿನಿಯರ್‌

ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾದ ಮಾಹಿತಿ ಇದೆ. ಜೈನಮುನಿಗಾಗಿ ಗುರುವಾರ ಇಡೀ ದಿನ ಜೈನ ಬಸದಿಯ ಸುತ್ತಮುತ್ತ ಭಕ್ತರು ಹುಡುಕಾಟ ನಡೆಸಿದ್ದಾರೆ. ಸದ್ಯ ಶುಕ್ರವಾರ (ಜು.7ರಂದು) ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version