ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ (MM Hills) ನ.11ರಿಂದ ದೀಪಾವಳಿ ಜಾತ್ರೆ ಶುರುವಾಗಲಿದೆ. ಹೀಗಾಗಿ ಮಂಡ್ಯದಿಂದ ನೂರಾರು ಜನರು ಪಾದಯಾತ್ರೆ ಕೈಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೊಡ್ಡಮುಲಗೂಡು ಗ್ರಾಮಸ್ಥರಿಂದ ಕಾಲ್ನಡಿಗೆ ಯಾತ್ರೆ ಶುರು ಮಾಡಿದ್ದಾರೆ.
ಮತ್ತೊಂದೆಡೆ ಮದುವೆ ಭಾಗ್ಯಕ್ಕಾಗಿ ಗ್ರಾಮದ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಮದುವೆ ವಯಸ್ಸಿಗೆ ಬಂದಿರುವ ಯುವ ರೈತರಿಗೆ ಹೆಣ್ಣು ಕೊಡ್ತಿಲ್ಲ. ಹಳ್ಳಿಯಲ್ಲಿದ್ದಾರೆ ಎಂದರೇ ಬೆಲೆಯು ಕೊಡ್ತಿಲ್ಲ ಎಂದು ತಂದೆ ತಾಯಿ ಜತೆ ಮದುವೆ ಭಾಗ್ಯಕ್ಕೆ ಮಲೆ ಮಾದಪ್ಪನ ಮೊರೆ ಹೋಗುತ್ತಿದ್ದಾರೆ.
ಊರಿಗೆ ಊರೇ ಕಾಲ್ನಡಿಗೆಯಲ್ಲಿ 130 ಕಿ.ಮೀ ದೂರದ ಮಾದಪ್ಪನ ಸನ್ನಿಧಿಗೆ ತೆರಳಲಿದ್ದಾರೆ. ಸದ್ಯ ಕೊಳ್ಳೆಗಾಲದ ಸಿಂಗಾನಲ್ಲೂರು ಗ್ರಾಮದ ಬಳಿ ಪಾದಯಾತ್ರೆ ಮುಂದುವರಿದಿದೆ.
ಇದನ್ನೂ ಓದಿ: Deepavali 2023: ದೀಪಾವಳಿಯಂದು ಯಾವಾಗ ದೀಪ ಬೆಳಗಬೇಕು? ಇಲ್ಲಿದೆ ಮಾಹಿತಿ
ಮಲೆ ಮಹದೇಶ್ವರ ಬೆಟ್ಟಕ್ಕೆ ನಾಳೆಯಿಂದ ವಾಹನ ನಿರ್ಬಂಧ
ಮಲೆ ಮಹದೇಶ್ವರ ಬೆಟ್ಟದಲ್ಲಿ ನ.11 ರಿಂದ 14ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ದ್ವಿಚಕ್ರ ವಾಹನ ಹಾಗೂ ಆಟೋಗಳಿಗೆ ನಿರ್ಬಂಧ ಹೇರಲಾಗಿದೆ. ನ.11ರ ಸಂಜೆ 6 ಗಂಟೆಯಿಂದ ನ.14ರ ಸಂಜೆ 7 ವರೆಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆಗೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸುವುದರಿಂದ ಬೆಟ್ಟದಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ. ಕಡಿದಾದ ರಸ್ತೆ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ