Site icon Vistara News

Modi Poster: ಕಟೀಲ್‌ ಸಿಎಂ ಆಗಲೆಂದು ಪೋಸ್ಟರ್‌ ಹಿಡಿದಿದ್ದ ಅಯ್ಯಪ್ಪ ಮಾಲಾಧಾರಿ ಕೇರಳ ಪೊಲೀಸ್‌ ವಶಕ್ಕೆ!

ಬೆಂಗಳೂರು/ಕೇರಳ: ಇತ್ತೀಚೆಗೆ ಶಬರಿಮಲೆಗೆ ತೆರಳುವ ಭಕ್ತರು ತಮ್ಮ ನೆಚ್ಚಿನ ರಾಜಕೀಯ ನಾಯಕರ ಪೋಸ್ಟರ್‌ (Modi Poster) ಹಿಡಿದುಕೊಂಡು ಹೋಗುವ ಟ್ರೆಂಡ್‌ ಶುರು ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ನಾಯಕರು ಅಧಿಕಾರದ ಗುದ್ದುಗೆಗೆ ಏರಲೆಂದು ಅಯ್ಯಪ್ಪನಲ್ಲಿ ಪ್ರಾರ್ಥಿಸುವುದು, ಜತೆಗೆ ಯಾತ್ರೆ ಉದ್ದಕ್ಕೂ ನಾಯಕರ ಭಾವಚಿತ್ರ ಇರುವ ಪೋಸ್ಟರ್‌ ಹಿಡಿದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್‌ ಹಿಡಿದು ಹೋಗಿದ್ದಕ್ಕೆ ಅಯ್ಯಪ್ಪ ಮಾಲಾಧಾರಿಯೊಬ್ಬರು ಕೇರಳ ಪೊಲೀಸ್‌ ಅತಿಥಿಯಾಗಿದ್ದಾರೆ.

ಬೆಂಗಳೂರಿನಿಂದ ಮೋದಿ ಪೋಸ್ಟರ್‌ ಹಿಡಿದು ಹೊರಟಿದ್ದವರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2024ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ರಾಜ್ಯದಲ್ಲಿ 2023ಕ್ಕೆ ನಳಿನ್‌ ಕುಮಾರ್‌ ಕಟೀಲ್‌ ಮುಖ್ಯಮಂತ್ರಿ ಆಗಬೇಕೆಂದು ಬಿಜೆಪಿ ಕಾರ್ಯಕರ್ತರು ಯಾತ್ರೆಯಲ್ಲಿ ಪೋಸ್ಟರ್‌ ಹಿಡಿದು ಹೋಗಿದ್ದಾರೆ.

ಪೋಸ್ಟರ್ ಹಿಡಿದ ಕಾರಣಕ್ಕೆ ಕೇರಳದಲ್ಲಿ ಶಬರಿಮಲೆ ಭಕ್ತರನ್ನು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ. ನಂತರ ವಾರ್ನಿಂಗ್ ನೀಡಿ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ | Road Accident | ಬೈಕ್‌-ಲಾರಿ ನಡುವೆ ಭೀಕರ ಅಪಘಾತ; ವ್ಯಕ್ತಿಯ ದೇಹ ಛಿದ್ರ ಛಿದ್ರ

Exit mobile version