Site icon Vistara News

Mudradharana 2022 | ನಾಡಿನ ವಿವಿಧ ಮಠಗಳಲ್ಲಿ ನಡೆಯಿತು ತಪ್ತಮುದ್ರಾಧಾರಣೆ

mudra dharana 2022 bangalore

ಬೆಂಗಳೂರು: ಆಷಾಡ ಶುದ್ಧ ಏಕಾದಶಿ (ಶಯನಿ ಏಕಾದಶಿ)ಯ ದಿನವಾದ ಇಂದು (ಜು.೧೦) ನಾಡಿನ ವಿವಿಧ ಮಠಗಳಲ್ಲಿ ಮುದ್ರಾಧಾರಣೆ (Mudradharana 2022) ಕಾರ್ಯಕ್ರಮ ನಡೆಯಿತು.

ದಕ್ಷಿಣಾಯನದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ದೇಹದಲ್ಲಿ ಅಚ್ಚೊತ್ತಿಸಿಕೊಂಡು ಸದಾ ಆತನ ಸ್ಮರಣೆಯಲ್ಲಿರಬೇಕೆಂಬ ಎಂಬ ಭಾವನೆಯಿಂದ ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳಲಾಗುತ್ತದೆ.

ತಪ್ತಮುದ್ರಾಧಾರಣೆ ಕತೆ ಏನು?

ಹಿಂದೊಮ್ಮೆ ಇಂದ್ರಾದಿ ದೆವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ “ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ” ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು. ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು.

ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕೆಂಬ ನಿಯಮವಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣವನ್ನು ಪಡೆದುಕೊಳ್ಳಬೇಕು ಎಂದು ಶಾಸ್ತ್ರ ಹೇಳಿದೆ.

ರಾಜ್ಯದ ವಿವಿಧ ಮಠಗಳಲ್ಲಿ ನಡೆದ ತಪ್ತಮುದ್ರಾಧಾರಣೆಯ ಫೋಟೊಗಳು ಇಲ್ಲಿವೆ;

ಶ್ರೀ ಪೇಜಾವರ ಮಠ, ವಿದ್ಯಾಪೀಠ, ಬೆಂಗಳೂರು
ಬೆಂಗಳೂರು ಉತ್ತರಾದಿ ಮಠದಲ್ಲಿ ಸೇರಿದ್ದ ಭಕ್ತರು
ಶ್ರೀ ಸೋಂದ ವಾದಿರಾಜ ಮಠ
ಶ್ರೀ ಅದಮಾರು ಮಠ, ಉಡುಪಿ
ಶ್ರೀ ಪಾಲಿಮಾರು ಮಠ, ಮೈಸೂರು

ಇದನ್ನೂ ಓದಿ|ಮಂತ್ರಾಲಯ: ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಶ್ರೀಮಠ

Exit mobile version