ಹರಪನಹಳ್ಳಿ: ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವೂ ಶ್ರೀ ಮೈಲಾರ ಲಿಂಗೇಶ್ವರ ಗೊರವಯ್ಯ ವರ್ಷದ ಕಾರಣಿಕ ನುಡಿದಿದ್ದಾರೆ. ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ.
ಸಹಸ್ರಾರು ಭಕ್ತರ ಮಧ್ಯೆ ಬಿಲ್ಲನ್ನೇರಿ ಮೈಲಾರ ಲಿಂಗನ ಕೋಟೆಪ್ಪ, ಸದಲೇ.. ಎನ್ನುತ್ತಿದ್ದಂತೆ ಎಲ್ಲವೂ ಕ್ಷಣಕಾಲ ನಿಶ್ಯಬ್ದವಾಯಿತು. ಬಳಿಕ ಕಾರಣಿಕ ಉಕ್ತಿಯನ್ನು ನುಡಿದ ಗೊರವಪ್ಪ ಮೇಲಿನಿಂದ ಕೆಳಗೆ ಬಿದ್ದರು. ಅವರನ್ನು ಕೆಳಗಿದ್ದ ಭಕ್ತರು ಹಿಡಿದುಕೊಂಡರು. ಇದು ಪ್ರತಿ ವರ್ಷದ ವಾಡಿಕೆಯಾಗಿದೆ.
ಒಕ್ಕಲುತನ ಸಂಸ್ಕೃತಿಯ ವಿಶಿಷ್ಟ ಆಚರಣೆಯ ಹರಪನಹಳ್ಳಿ ತಾಲೂಕಿನ ದೊಡ್ಡಮೈಲಾರ ಎಂದೇ ಪ್ರಸಿದ್ಧಿ ಪಡೆದು ಪ್ರಚಲಿತದಲ್ಲಿರುವ ಮೈಲಾರಲಿಂಗೇಶ್ವರ ಹಲವು ದಂತ ಕಥೆಗಳು ಈ ನೆಲದ ಜನಪದದಲ್ಲಿ ಹಾಸುಹೊಕ್ಕಾಗಿವೆ.
ಪ್ರತಿ ವರ್ಷ ಭರತ ಹುಣ್ಣಿಮೆಯಂದು ಸಂಜೆ ಕಾರಣಿಕೋತ್ಸವ ಜರುಗುತ್ತದೆ. ವರ್ಷದಲ್ಲಿ ಎರಡು ಬಾರಿ ಕಾರಣಿಕೋತ್ಸವ ಜರುಗುತ್ತದೆ. ದಸರಾ ಹಬ್ಬದಲ್ಲಿ ನಡೆಯುವ ಕಾರಣಿಕ ರಾಜಕಾರಣಕ್ಕೆ ಸಂಬಂಧಿಸಿದಂತೆ ಇರುತ್ತದೆ. ಭರತ ಹುಣ್ಣಿಮೆ ಕಾರಣಿಕಗಳು ಬೆಳೆಗಳ ಮೇಲೆ ಇರುತ್ತವೆ ಎಂಬ ಪ್ರತೀತಿ ಇದೆ.
ಇದನ್ನೂ ಓದಿ: RSS chief Mohan Bhagwat: ಜಾತಿ ಪದ್ಧತಿಗೆ ಪುರೋಹಿತರು ಕಾರಣ, ಭಾಗವತ್ ಹೇಳಿಕೆಯ ತಪ್ಪು ಅನುವಾದ ಎಂದ ಸುದ್ದಿ ಸಂಸ್ಥೆ
ಅದರಂತೆ ಈ ಭಾರಿ ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್ ಎಂದು ಹೇಳಿರುವುದು ಶುಭ ಸೂಚಕವಾಗಿದೆ. ಈ ಕಾರಣಿಕದಂತೆ ಈ ಬಾರಿಯೂ ಉತ್ತಮ ಮಳೆ, ಬೆಳೆ ಜತೆಗೆ ಅನ್ನದಾತರ ಬಾಳು ಹಸನಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.