ಬೆಂಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರ ಭವ್ಯಮಂದಿರ ಲೋಕಾರ್ಪಣೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಮನಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಪಂಚದೆಲ್ಲಡೆ ಪಸರಿಸಲು ಸ್ವಗ್ರಾಮ ಫೌಂಡೇಶನ್ ವತಿಯಿಂದ ʼನಮ್ಮೂರ ರಾಮʼ (Nammoora Rama) ಎಂಬ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರು ತಮ್ಮ ಊರಿನಲ್ಲಿ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಪಟ್ಟ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಕಲೆ, ಸಂಪ್ರದಾಯಗಳು, ಆಚಾರಗಳು ಸೇರಿ ಯಾವುದೇ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲು ಸ್ವಗ್ರಾಮ ಫೌಂಡೇಶನ್ ಡಿಜಿಟಲ್ ವೇದಿಕೆ ಕಲ್ಪಿಸಿದೆ.
ಸ್ವಗ್ರಾಮ ಫೌಂಡೇಶನ್ ಪ್ರಸ್ತುತ ಪಡಿಸಿರುವ “ನಮ್ಮೂರ ರಾಮ” ಎಂಬ ಅಭಿಯಾನದಲ್ಲಿ ಭಾಗಿಯಾಗಿ ನಿಮ್ಮ ಊರಿನ ರಾಮನ ಹಿರಿಮೆ-ಗರಿಮೆಯನ್ನು ಪ್ರಪಂಚದೆಲ್ಲಡೆ ಪಸರಿಸುತ್ತಾ ಸಂಭ್ರಮಿಸಬಹುದು. ಅದಕ್ಕಾಗಿ ಸ್ವಗ್ರಾಮ ಆ್ಯಪ್ (Swagraam) ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು.
ಅಪ್ಲೋಡ್ ಮಾಡುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್ನಿಂದ ‘ಸ್ವಗ್ರಾಮ’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ ಬಳಿಕ ಲಾಗಿನ್ ಆಗಿ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ರಾಜ್ಯದಲ್ಲಿನ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಮಾಹಿತಿ ಅಪ್‌ಲೋಡ್ ಮಾಡಬಹುದಾಗಿದೆ. ಬರಹ, ಫೋಟೊ ಹಾಗೂ ವಿಡಿಯೋ ರೂಪದಲ್ಲಿ ಮಾಹಿತಿ ಚಿತ್ರಣವನ್ನು ನೀಡಬಹುದಾಗಿದೆ. ಒಂದು ವೇಳೆ ದಾಖಲಾಗಿರುವ ಮಾಹಿತಿಯಲ್ಲಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದಾದರೆ, ಅದನ್ನು ಸರಿಪಡಿಸಲು ಕೂಡ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸ್ವಗ್ರಾಮ ಫೌಂಡೇಶನ್ ಮೊ. 83106 52068, www.swagraam.org ಸಂಪರ್ಕಿಸಿ.
ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನ
ತಮ್ಮ ಊರಿನ ವಿಶೇಷ ಸಂಗತಿಗಳನ್ನು ಎಲ್ಲರಿಗೂ ತಿಳಿಸಲು ಆಸೆ ಇರುವವರಿಗಾಗಿ ಸ್ವಗ್ರಾಮ ಫೌಂಡೇಶನ್‌ನಿಂದ ʼನಮ್ಮ ಊರು ನಮ್ಮ ಹೆಮ್ಮೆʼ ಅಭಿಯಾನ ಆರಂಭಿಸಲಾಗಿದೆ. ಈ ವೇದಿಕೆಯ ಮುಖಾಂತರ ಜನರು ತಮ್ಮ ಊರು, ಅದರ ಪರಂಪರೆ ಹಾಗೂ ಗತವನ್ನು ಗುರುತಿಸಿ, ದಾಖಲಿಸಿ ಹೆಮ್ಮೆಯಿಂದ ಜಗತ್ತಿನೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಸ್ವಗ್ರಾಮ ಯೋಜನೆಯ ಉದ್ದೇಶಗಳು
1) ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟ ಪ್ರತಿಯೊಂದು ಊರಿನ ಪರಂಪರೆಯನ್ನು (ಪಾರಂಪರಿಕ ಕಟ್ಟಡಗಳು, ಪ್ರಾಕೃತಿಕ ಸಂಪತ್ತು, ಕಲೆ ಮತ್ತು ಕರಕುಶಲತೆ, ಸಂಪ್ರದಾಯಗಳು ಮತ್ತು ಆಚಾರಗಳು, ಪಾರಂಪರಿಕ ಕುಲವೃತ್ತಿಗಳು, ಪ್ರೇರಣಾದಾಯೀ ವ್ಯಕ್ತಿಗಳು) ದಾಖಲಿಸುವುದು.
2) ಒಂದು ನಿರ್ದಿಷ್ಟ ಸ್ಥಳದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಜನರನ್ನು ಒಟ್ಟುಗೂಡಿಸಿ ಅಲ್ಲಿನ ಪರಂಪರೆಯನ್ನು ರಕ್ಷಿಸಿ. ಆ ಊರಿನ ಜೀವನದ ಸುಧಾರಣೆಗೆ ಧನಾತ್ಮಕವಾಗಿ ಕೊಡುಗೆಯನ್ನು ನೀಡುವುದು.
ಕರ್ನಾಟಕದ ಯಾವುದೇ ಊರಿನ ಬಗ್ಗೆ ನೀವು ದಾಖಲಿಸಬೇಕೆಂದು ಅಂದುಕೊಂಡಿರುವ ವಿಷಯಗಳು, ಶಾಸನಗಳಿಂದ, ಹಳೆಯ ಕಾಲದ ಕಡತಗಳಿಂದ ದೃಢೀಕೃತವಾಗಿರಬಹುದು ಅಥವಾ ತಲೆಮಾರಿನಿಂದ ತಲೆಮಾರಿಗೆ ವಿಷಯಗಳು, ಆಚಾರಗಳು, ಆಚರಣೆಗಳೂ ಆಗಿರಬಹುದು. ನಿಮ್ಮ ಊರಿನ, ನಿಮ್ಮ ಮನೆತನದ ಮೂಲ ಊರಿನ ಬಗ್ಗೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗಿರುವ ವಿಷಯ ಈ ಕೆಳಗಿನ ಯಾವುದಾದರೂ ಒಂದು ವರ್ಗದಲ್ಲಿ ಸೇರುವಂತಹದಾಗಿರಬೇಕು.
- ಪ್ರೇರಣಾದಾಯೀ ವ್ಯಕ್ತಿಗಳು
- ಪಾರಂಪರಿಕ ಕಟ್ಟಡಗಳು
- ಪ್ರಾಕೃತಿಕ ಸಂಪತ್ತು ಕಲೆ ಮತ್ತು ಕರಕುಶಲತೆ
- ಸಂಪ್ರದಾಯಗಳು ಮತ್ತು ಆಚಾರಗಳು
- ಪಾರಂಪರಿಕ ಕುಲವೃತ್ತಿಗಳು
ಈ ನಿಮ್ಮ ಲೇಖನಗಳ ಜತೆ ಕೆಲವು ಫೋಟೊಗಳು ಮತ್ತು ವಿಡಿಯೋಗಳನ್ನೂ ಕೂಡ ಅಪ್ ಲೋಡ್ ಮಾಡಬಹುದು (ಫೈಲ್ ಸೈಜಿನ ಮಿತಿ ಗಮನಿಸಿಕೊಳ್ಳಿ). ನಿಮ್ಮ ಊರು ನಿಮ್ಮ ಹೆಮ್ಮೆ” ಎಂದೆನಿಸಿದಲ್ಲಿ ಈ ಮೇಲಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಸ್ವಗ್ರಾಮ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಕರ್ನಾಟಕದ ನಿಮ್ಮ ಊರಿನ ಹಿರಿಮೆ-ಗರಿಮೆ ಪ್ರಪಂಚದೆಲ್ಲಡೆ ಪಸರಿಸಲಿ.