Nammura Rama: ʼನಮ್ಮೂರ ರಾಮʼ ಅಭಿಯಾನ; ಶ್ರೀರಾಮನ ಕುರಿತ ವಿಚಾರ ಹಂಚಿಕೊಳ್ಳಲು ವೇದಿಕೆ - Vistara News

ಧಾರ್ಮಿಕ

Nammura Rama: ʼನಮ್ಮೂರ ರಾಮʼ ಅಭಿಯಾನ; ಶ್ರೀರಾಮನ ಕುರಿತ ವಿಚಾರ ಹಂಚಿಕೊಳ್ಳಲು ವೇದಿಕೆ

Nammura Rama: ʼನಮ್ಮೂರ ರಾಮʼ ಅಭಿಯಾನದ ಮೂಲಕ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಪಟ್ಟ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಕಲೆ, ಸಂಪ್ರದಾಯಗಳು, ಆಚಾರಗಳು ಸೇರಿ ಯಾವುದೇ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲು ಸ್ವಗ್ರಾಮ ಫೌಂಡೇಶನ್‌ ಡಿಜಿಟಲ್‌ ವೇದಿಕೆ ಕಲ್ಪಿಸಿದೆ.

VISTARANEWS.COM


on

Nammoora Rama
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರ ಭವ್ಯಮಂದಿರ ಲೋಕಾರ್ಪಣೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಮನಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಪಂಚದೆಲ್ಲಡೆ ಪಸರಿಸಲು ಸ್ವಗ್ರಾಮ ಫೌಂಡೇಶನ್‌ ವತಿಯಿಂದ ʼನಮ್ಮೂರ ರಾಮʼ (Nammoora Rama) ಎಂಬ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರು ತಮ್ಮ ಊರಿನಲ್ಲಿ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಪಟ್ಟ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಕಲೆ, ಸಂಪ್ರದಾಯಗಳು, ಆಚಾರಗಳು ಸೇರಿ ಯಾವುದೇ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲು ಸ್ವಗ್ರಾಮ ಫೌಂಡೇಶನ್‌ ಡಿಜಿಟಲ್‌ ವೇದಿಕೆ ಕಲ್ಪಿಸಿದೆ.

ಸ್ವಗ್ರಾಮ ಫೌಂಡೇಶನ್ ಪ್ರಸ್ತುತ ಪಡಿಸಿರುವ “ನಮ್ಮೂರ ರಾಮ” ಎಂಬ ಅಭಿಯಾನದಲ್ಲಿ ಭಾಗಿಯಾಗಿ ನಿಮ್ಮ ಊರಿನ ರಾಮನ ಹಿರಿಮೆ-ಗರಿಮೆಯನ್ನು ಪ್ರಪಂಚದೆಲ್ಲಡೆ ಪಸರಿಸುತ್ತಾ ಸಂಭ್ರಮಿಸಬಹುದು. ಅದಕ್ಕಾಗಿ ಸ್ವಗ್ರಾಮ ಆ್ಯಪ್‌ (Swagraam) ಅನ್ನು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು.

ಅಪ್ಲೋಡ್​ ಮಾಡುವುದು ಹೇಗೆ?

ಗೂಗಲ್​ ಪ್ಲೇ ಸ್ಟೋರ್​ನಿಂದ ‘ಸ್ವಗ್ರಾಮ’ ಆ್ಯಪ್ ಅ​ನ್ನು ಡೌನ್‌ಲೋಡ್‌ ಮಾಡಿದ ಬಳಿಕ ಲಾಗಿನ್​ ಆಗಿ, ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ರಾಜ್ಯದಲ್ಲಿನ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಮಾಹಿತಿ ಅಪ್‌ಲೋಡ್‌​ ಮಾಡಬಹುದಾಗಿದೆ. ಬರಹ, ಫೋಟೊ ಹಾಗೂ ವಿಡಿಯೋ ರೂಪದಲ್ಲಿ ಮಾಹಿತಿ ಚಿತ್ರಣವನ್ನು ನೀಡಬಹುದಾಗಿದೆ. ಒಂದು ವೇಳೆ ದಾಖಲಾಗಿರುವ ಮಾಹಿತಿಯಲ್ಲಿ ತಪ್ಪು ಸಂದೇಶ ರವಾನೆ ಆಗುತ್ತಿದೆ ಎಂದಾದರೆ, ಅದನ್ನು ಸರಿಪಡಿಸಲು ಕೂಡ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಸ್ವಗ್ರಾಮ ಫೌಂಡೇಶನ್ ಮೊ. 83106 52068, www.swagraam.org ಸಂಪರ್ಕಿಸಿ.

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನ

ತಮ್ಮ ಊರಿನ ವಿಶೇಷ ಸಂಗತಿಗಳನ್ನು ಎಲ್ಲರಿಗೂ ತಿಳಿಸಲು ಆಸೆ ಇರುವವರಿಗಾಗಿ ಸ್ವಗ್ರಾಮ ಫೌಂಡೇಶನ್‌ನಿಂದ ʼನಮ್ಮ ಊರು ನಮ್ಮ ಹೆಮ್ಮೆʼ ಅಭಿಯಾನ ಆರಂಭಿಸಲಾಗಿದೆ. ಈ ವೇದಿಕೆಯ ಮುಖಾಂತರ ಜನರು ತಮ್ಮ ಊರು, ಅದರ ಪರಂಪರೆ ಹಾಗೂ ಗತವನ್ನು ಗುರುತಿಸಿ, ದಾಖಲಿಸಿ ಹೆಮ್ಮೆಯಿಂದ ಜಗತ್ತಿನೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಸ್ವಗ್ರಾಮ ಯೋಜನೆಯ ಉದ್ದೇಶಗಳು

1) ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲ್ಪಟ್ಟ ಪ್ರತಿಯೊಂದು ಊರಿನ ಪರಂಪರೆಯನ್ನು (ಪಾರಂಪರಿಕ ಕಟ್ಟಡಗಳು, ಪ್ರಾಕೃತಿಕ ಸಂಪತ್ತು, ಕಲೆ ಮತ್ತು ಕರಕುಶಲತೆ, ಸಂಪ್ರದಾಯಗಳು ಮತ್ತು ಆಚಾರಗಳು, ಪಾರಂಪರಿಕ ಕುಲವೃತ್ತಿಗಳು, ಪ್ರೇರಣಾದಾಯೀ ವ್ಯಕ್ತಿಗಳು) ದಾಖಲಿಸುವುದು.

2) ಒಂದು ನಿರ್ದಿಷ್ಟ ಸ್ಥಳದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವ ಜನರನ್ನು ಒಟ್ಟುಗೂಡಿಸಿ ಅಲ್ಲಿನ ಪರಂಪರೆಯನ್ನು ರಕ್ಷಿಸಿ. ಆ ಊರಿನ ಜೀವನದ ಸುಧಾರಣೆಗೆ ಧನಾತ್ಮಕವಾಗಿ ಕೊಡುಗೆಯನ್ನು ನೀಡುವುದು.

ಕರ್ನಾಟಕದ ಯಾವುದೇ ಊರಿನ ಬಗ್ಗೆ ನೀವು ದಾಖಲಿಸಬೇಕೆಂದು ಅಂದುಕೊಂಡಿರುವ ವಿಷಯಗಳು, ಶಾಸನಗಳಿಂದ, ಹಳೆಯ ಕಾಲದ ಕಡತಗಳಿಂದ ದೃಢೀಕೃತವಾಗಿರಬಹುದು ಅಥವಾ ತಲೆಮಾರಿನಿಂದ ತಲೆಮಾರಿಗೆ ವಿಷಯಗಳು, ಆಚಾರಗಳು, ಆಚರಣೆಗಳೂ ಆಗಿರಬಹುದು. ನಿಮ್ಮ ಊರಿನ, ನಿಮ್ಮ ಮನೆತನದ ಮೂಲ ಊರಿನ ಬಗ್ಗೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗಿರುವ ವಿಷಯ ಈ ಕೆಳಗಿನ ಯಾವುದಾದರೂ ಒಂದು ವರ್ಗದಲ್ಲಿ ಸೇರುವಂತಹದಾಗಿರಬೇಕು.

  • ಪ್ರೇರಣಾದಾಯೀ ವ್ಯಕ್ತಿಗಳು
  • ಪಾರಂಪರಿಕ ಕಟ್ಟಡಗಳು
  • ಪ್ರಾಕೃತಿಕ ಸಂಪತ್ತು ಕಲೆ ಮತ್ತು ಕರಕುಶಲತೆ
  • ಸಂಪ್ರದಾಯಗಳು ಮತ್ತು ಆಚಾರಗಳು
  • ಪಾರಂಪರಿಕ ಕುಲವೃತ್ತಿಗಳು

ಈ ನಿಮ್ಮ ಲೇಖನಗಳ ಜತೆ ಕೆಲವು ಫೋಟೊಗಳು ಮತ್ತು ವಿಡಿಯೋಗಳನ್ನೂ ಕೂಡ ಅಪ್ ಲೋಡ್ ಮಾಡಬಹುದು (ಫೈಲ್ ಸೈಜಿನ ಮಿತಿ ಗಮನಿಸಿಕೊಳ್ಳಿ). ನಿಮ್ಮ ಊರು ನಿಮ್ಮ ಹೆಮ್ಮೆ” ಎಂದೆನಿಸಿದಲ್ಲಿ ಈ ಮೇಲಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಸ್ವಗ್ರಾಮ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಕರ್ನಾಟಕದ ನಿಮ್ಮ ಊರಿನ ಹಿರಿಮೆ-ಗರಿಮೆ ಪ್ರಪಂಚದೆಲ್ಲಡೆ ಪಸರಿಸಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ಗೋಕರ್ಣದ ʼಅಶೋಕೆʼಯಲ್ಲಿ ಜು. 21ರಿಂದ ರಾಘವೇಶ್ವರಶ್ರೀ ಚಾತುರ್ಮಾಸ್ಯ

Uttara Kannada News: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ʼಅನಾವರಣ ಚಾತುರ್ಮಾಸ್ಯʼ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಬಾಧ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದಾರೆ. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

VISTARANEWS.COM


on

Raghaveshwarashree Chaturmasya at Ashoke from 21st July
Koo

ಗೋಕರ್ಣ: ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ. ಅನಾವರಣ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಶ್ರೀಗಳು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆವರೆಗೆ 60 ದಿನಗಳ ಕಾಲ ವ್ರತ ಕೈಗೊಳ್ಳಲಿದ್ದು, ವರ್ಷಾಕಾಲದಲ್ಲಿ ಲೋಕಹಿತಕ್ಕಾಗಿ ಪರಮ ಪುರುಷನ ಆರಾಧನೆ, ಅನುಷ್ಠಾನಗಳಲ್ಲಿ ನಿರತರಾಗುವರು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ ಪ್ರಕಟಣೆಯಲ್ಲಿ (Uttara Kannada News) ತಿಳಿಸಿದ್ದಾರೆ.

ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ. 60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ-ವಿಷಯ- ವಸ್ತುಗಳ ʼಅನಾವರಣʼಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.

ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ಮುನ್ನಾ ದಿನ (ಜುಲೈ 20) ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ರಾಜ್ಯದ ಮೂಲೆಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ನೆರವೇರಿಸುವರು. ಬಳಿಕ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.

ಇದನ್ನೂ ಓದಿ: Paris Olympics: ಅತಿ ಹೆಚ್ಚು ಒಲಿಂಪಿಕ್ಸ್ ಆತಿಥ್ಯ ವಹಿಸಿದ ದೇಶ ಯಾವುದು?

ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜುಲೈ 24ರಂದು ಶ್ರೀವರ್ಧಂತಿ, ಆಗಸ್ಟ್ 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆಪ್ಟೆಂಬರ್ 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.

ಚಾತುರ್ಮಾಸ್ಯದಲ್ಲಿ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಶ್ರೀಗಳು, ಸಹಸ್ರ ಗಂಗಾಜಲ ಅಭಿಷೇಕಕ್ಕೆ ಸಂಕಲ್ಪಿಸಿದ್ದಾರೆ. ಪವಿತ್ರ ಗಂಗಾಜಲದಿಂದ ತುಂಬಿದ ಸುವರ್ಣ, ರಜತ ಮತ್ತು ತಾಮ್ರ ಕಲಶಗಳ ಸೇವೆಗೆ ಭಕ್ತರಿಗೆ ಅವಕಾಶವಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಕರಾರ್ಚಿತ ದೇವರಿಗೆ ಸರ್ವಸೇವೆ ಸಮರ್ಪಣೆಗೆ ಅವಕಾಶ ಇದೆ. ಅಂತೆಯೇ ಮಹಾಸೇವೆ, ತುಲಾಭಾರ ಸೇವೆ, ಸ್ವರ್ಣಪಾದುಕೆ ಭಿಕ್ಷಾಸೇವೆ, ಸ್ವರ್ಣಪಾದುಕಾ ಪೂಜೆ, ಪಾದುಕಾಪೂಜೆ, ಅನ್ನದಾನ, ಸುವಸ್ತು ಸಮರ್ಪಣೆ ಮತ್ತಿತರ ಸೇವೆಗಳನ್ನೂ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: Media Connect: ಮೀಡಿಯಾ ಕನೆಕ್ಟ್‌ಗೆ ಭರವಸೆಯ ಪಿಆರ್‌ ಸೇವಾ ಪ್ರಶಸ್ತಿ

ಎರಡು ತಿಂಗಳ ಅವಧಿಯ ಚಾತುರ್ಮಾಸ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಗಣ್ಯರು, ಶಿಷ್ಯಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.

Continue Reading

ಧಾರ್ಮಿಕ

Vastu Tips: ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ ನೋಡಿ!

ಸರಿಯಾಗಿ ನಿದ್ರೆ ಬಾರದೇ ಇದ್ದರೆ ಅದು ಮನೆ, ಕಚೇರಿ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ (Vastu Tips) ಸಲಹೆಯನ್ನು ಪಾಲಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಉತ್ತಮ ನಿದ್ದೆಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಸಲಹೆಗಳು ಇಲ್ಲಿವೆ.

VISTARANEWS.COM


on

By

Vastu Tips
Koo

ಉತ್ತಮ ಆರೋಗ್ಯಕ್ಕಾಗಿ (good health) ಚೆನ್ನಾಗಿ ನಿದ್ರೆ (Sleeping) ಮಾಡುವುದು ಕೂಡ ಬಹು ಮುಖ್ಯವಾಗಿರುತ್ತದೆ. ಎಷ್ಟೋ ಬಾರಿ ದಿನವಿಡೀ ಕೆಲಸ ಮಾಡಿ ದಣಿದು ಬಂದರೂ ರಾತ್ರಿ ಸರಿಯಾಗಿ ನಿದ್ದೆ ಬಾರದೆ ಒದ್ದಾಡುವವರು ಇರುತ್ತಾರೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು (health problem) ಮುಂದೆ ಎದುರಿಸಬೇಕಾಗುತ್ತದೆ. ಚೆನ್ನಾಗಿ ನಿದ್ರೆ ಬರಲು ಮನೆಯ ವಾಸ್ತು ಅಂಶವೂ (Vastu Tips) ಕಾರಣವಾಗಿರುತ್ತದೆ.

ನಿದ್ದೆ ಮಾಡುವಾಗ ತೊಂದರೆಗಳು ಎದುರಾಗುತ್ತಿದ್ದರೆ ಅಥವಾ ಉತ್ತಮ ಮತ್ತು ಆರಾಮದಾಯಕ ನಿದ್ರೆಗಾಗಿ ಮನೆಯಲ್ಲಿ ವಾಸ್ತು ದೋಷಗಳನ್ನು ಸರಿಪಡಿಸುವುದು ಬಹು ಮುಖ್ಯ.


ಸರಿಯಾಗಿ ನಿದ್ರೆ ಬಾರದೇ ಇದ್ದರೆ ಅದು ಮನೆ, ಕಚೇರಿ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಸಲಹೆಯನ್ನು ಪಾಲಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಇದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಉತ್ತಮ ನಿದ್ರೆಯಾದರೆ ಅದು ಅತ್ಯುತ್ತಮ ಆರೋಗ್ಯವನ್ನು ಪಡೆಯಲು, ಆರ್ಥಿಕ ತೊಂದರೆಗಳು ದೂರವಾಗಿಸಬಹುದು. ಇದಕ್ಕ ವಾಸ್ತು ನಿಯಮ ಏನು ಹೇಳಿದೆ ನೋಡೋಣ.

ದುಃಸ್ವಪ್ನ ಬಾರದೇ ಇರಲು ಹೀಗೆ ಮಾಡಿ

ಮನೆಯಲ್ಲಿ ಮಲಗಿರುವಾಗ ಕೆಲವರು ಆಗಾಗ್ಗೆ ಥಟ್ಟನೆ ಎಚ್ಚರಗೊಳ್ಳುತ್ತಾರೆ. ಜನರನ್ನು ಎಚ್ಚರವಾಗಿಡುವ ಭಯದ ದುಃಸ್ವಪ್ನಗಳು ಹಲವರಿಗೆ ಬಾಧಿಸುತ್ತವೆ. ನೀವು ಈ ಸಮಸ್ಯೆಯನ್ನು ಹೊಂದಿದ್ದರೆ ನಿಮ್ಮ ದಿಂಬಿನ ಕೆಳಗೆ ಚಾಕು, ಕತ್ತರಿ ಅಥವಾ ಇತರ ಕಬ್ಬಿಣದ ವಸ್ತುವನ್ನು ಇರಿಸಿ. ಅಥವಾ ಮಂಚದ ಕೆಳಗೆ ಒಂದು ಬಟ್ಟಲು ಕಲ್ಲು ಉಪ್ಪು ಮತ್ತು ದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಲಗಬಹುದು. ಇದರಿಂದ ಭಯಾನಕ ದುಃಸ್ವಪ್ನಗಳ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: Kedarnath Temple: ಕೇದಾರನಾಥ ದೇಗುಲದಿಂದ 228 ಕೆ.ಜಿ ಚಿನ್ನ ಮಾಯ; ದೇವರ ಕಣ್ಣೆದುರೇ ಹಗರಣ!

ಸಂಬಂಧ ಬಲಪಡಿಸಿಕೊಳ್ಳಿ

ಸಂಗಾತಿಯೊಂದಿಗೆ ಸಂಬಂಧವನ್ನು ಬಲಪಡಿಸಲು ಬಯಸಿದರೆ ದಿಂಬಿನ ಕೆಳಗೆ ಪರಿಮಳಯುಕ್ತ ಹೂವುಗಳನ್ನು ಇರಿಸಿ. ಇದು ಶುಕ್ರನ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ಒಳ್ಳೆಯ ಕನಸುಗಳನ್ನು ಕಾಣಬಹುದು. ವೈವಾಹಿಕ ಜೀವನದಲ್ಲಿ ಪ್ರೀತಿ ಕೂಡ ಬೆಳೆಯುತ್ತದೆ.

ಉತ್ತಮ ಆರೋಗ್ಯಕ್ಕಾಗಿ ಸಲಹೆ

ದಿನದ ಬಹುಪಾಲು ಅಸ್ವಸ್ಥರಾಗಿದ್ದರೆ ಮತ್ತು ಆರೋಗ್ಯವು ನಿರಂತರವಾಗಿ ಹದಗೆಡುತ್ತಿದ್ದರೆ ಮಲಗುವ ಸಮಯದಲ್ಲಿ ಹಾಸಿಗೆಯ ಕೆಳಗೆ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಇರಿಸಿ. ಬೆಳಗ್ಗೆ ಎದ್ದ ಅನಂತರ ಮರ ಅಥವಾ ಗಿಡದ ಮೇಲೆ ಈ ನೀರನ್ನು ಸುರಿಯಲು ಮರೆಯದಿರಿ. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲವಾಗುತ್ತದೆ.

Continue Reading

Latest

Vastu Tips: ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅಪಾಯ ಗ್ಯಾರಂಟಿ!

ವಾಸ್ತು ಶಾಸ್ತ್ರದಲ್ಲಿ ಶಕ್ತಿಗೆ ವಿಶೇಷ ಮಹತ್ವವಿದೆ. ವಾಸ್ತುವಿನಲ್ಲಿ (Vastu Tips) ಪ್ರತಿಯೊಂದಕ್ಕೂ ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ. ಮಲಗಲು ಸಹ ನಿಯಮಗಳನ್ನು ಮಾಡಲಾಗಿದೆ. ತಪ್ಪು ದಿಕ್ಕಿನಲ್ಲಿ ಮಲಗುವುದು ಮಾನಸಿಕ ಅಸ್ವಸ್ಥತೆ, ಒತ್ತಡ ಮತ್ತು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಸರಿಯಾದ ಮಲಗುವ ದಿಕ್ಕು ಯಾವುದಾಗಿರಬೇಕು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Vastu Tips
Koo

ಪ್ರತಿಯೊಬ್ಬರ ಮನೆಯಲ್ಲೂ ಉತ್ತರ (north) ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಇದರ ಹಿಂದೆ ಗಜಮುಖನಾದ ವಿನಾಯಕನ ಕಥೆಯೂ ಇದೆ. ಮಲಗುವ ದಿಕ್ಕು (direction of sleeping ) ಸರಿಯಾಗಿ ಇಲ್ಲದೇ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲೂ (Vastu Tips) ಮಲಗುವ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಇದನ್ನು ಪಾಲಿಸದೇ ಇದ್ದರೆ ಏನಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಕಾರಣಗಳು ಇವೆ.

ವಾಸ್ತು ಶಾಸ್ತ್ರದಲ್ಲಿ ಶಕ್ತಿಗೆ ವಿಶೇಷ ಮಹತ್ವವಿದೆ. ವಾಸ್ತುವಿನಲ್ಲಿ ಪ್ರತಿಯೊಂದಕ್ಕೂ ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ. ಮಲಗಲು ಸಹ ನಿಯಮಗಳನ್ನು ಮಾಡಲಾಗಿದೆ. ವಾಸ್ತು ಪ್ರಕಾರ ತಪ್ಪು ದಿಕ್ಕಿನಲ್ಲಿ ಮಲಗುವುದು ಮಾನಸಿಕ ಅಸ್ವಸ್ಥತೆ, ಒತ್ತಡ ಮತ್ತು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಸರಿಯಾದ ಮಲಗುವ ದಿಕ್ಕು ಯಾವುದಾಗಿರಬೇಕು? ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ಉತ್ತಮ ನಿದ್ರೆ ಪಡೆಯುವುದು ಬಹಳ ಮುಖ್ಯ. ಸಂಪೂರ್ಣ ನಿದ್ದೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಮಲಗುವುದು ವಯಸ್ಸನ್ನು ಹೆಚ್ಚಿಸುತ್ತದೆ ಮತ್ತು ರೋಗವನ್ನು ಉಂಟುಮಾಡುವುದಿಲ್ಲ. ಆದರೆ ತಪ್ಪು ದಿಕ್ಕಿನಲ್ಲಿ ಮಲಗುವುದು ಮಾನಸಿಕ ಅಸ್ವಸ್ಥತೆ, ಒತ್ತಡ, ಸೋಮಾರಿತನ ಮತ್ತು ನಕಾರಾತ್ಮಕ ಶಕ್ತಿ ನಮ್ಮ ಸುತ್ತ ಸುತ್ತುವರಿಯುವಂತೆ ಮಾಡುತ್ತದೆ.

Vastu Tips


ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಮಲಗಬೇಡಿ

ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು. ವಾಸ್ತುವಿನಲ್ಲಿ ಉತ್ತರ ದಿಕ್ಕನ್ನು ಮಲಗಲು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ನಕಾರಾತ್ಮಕ ಶಕ್ತಿಯ ಮೂಲ ಎನ್ನಲಾಗಿದೆ.

ಉತ್ತರ ದಿಕ್ಕಿಗೆ ಮಲಗುವುದರಿಂದ ವ್ಯಕ್ತಿಯು ಅನೇಕ ಪ್ರಮುಖ ಕಾಯಿಲೆಗಳನ್ನು ಎದುರಿಸುತ್ತಾನೆ ಮತ್ತು ನಿದ್ರೆಯಿಂದ ವಂಚಿತನಾಗಿರುತ್ತಾನೆ. ಉತ್ತರದ ಕಡೆಗೆ ತನ್ನ ತಲೆಯನ್ನು ಇಟ್ಟುಕೊಳ್ಳುವ ವ್ಯಕ್ತಿಯು ಖಂಡಿತವಾಗಿಯೂ ಸಾವಿನ ದೇವರನ್ನು ಆಹ್ವಾನಿಸುತ್ತಾನೆ. ಮೃತದೇಹದ ತಲೆಯನ್ನು ಮಾತ್ರ ಉತ್ತರ ದಿಕ್ಕಿಗೆ ಇಡಲಾಗುತ್ತದೆ.

ಮಲಗಲು ಸರಿಯಾದ ದಿಕ್ಕು

ವಾಸ್ತು ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉತ್ತಮ ನಿದ್ರೆಗೆ ಈ ದಿಕ್ಕನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಸಂತೋಷ ಮತ್ತು ಸಮೃದ್ಧಿ, ಉತ್ತಮ ಆರೋಗ್ಯ, ಅದೃಷ್ಟ, ಯಶಸ್ಸು ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ.

ವ್ಯಾಪಾರ, ರಾಜಕೀಯ ಅಥವಾ ವೃತ್ತಿಪರ ಕ್ಷೇತ್ರದಲ್ಲಿರುವ ವ್ಯಕ್ತಿಯು ದಕ್ಷಿಣಕ್ಕೆ ತಲೆಯಿಟ್ಟು ಮಲಗಬೇಕು. ಇದು ಅವರ ದಕ್ಷತೆ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಮನಸ್ಸಿನ ಶಾಂತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ದಿಕ್ಕನ್ನು ಧನಾತ್ಮಕ ಶಕ್ತಿಯ ಮೂಲ ಎಂದು ಕರೆಯಲಾಗುತ್ತದೆ.

Vastu Tips


ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಮಕ್ಕಳ ಅಧ್ಯಯನ ಕೊಠಡಿ ಹೀಗಿರಬೇಕು

ಇನ್ನು ಪೂರ್ವಕ್ಕೆ ತಲೆಯಿಟ್ಟು ಮಲಗುವುದರಿಂದ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚಾಗುತ್ತದೆ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಶಿಕ್ಷಣ ಮತ್ತು ವೃತ್ತಿಗೆ ಹೊಸ ಅವಕಾಶಗಳು ಲಭಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರ ನಿದ್ರೆ ಪಡೆಯಲು ಪೂರ್ವ ದಿಕ್ಕಿಗೆ ಉತ್ತಮ ದಿಕ್ಕು ಎನ್ನುತ್ತಾರೆ ವಾಸ್ತು ತಜ್ಞರು.

ಈ ದಿಕ್ಕು ದೇಹಕ್ಕೆ ಎಲ್ಲಾ ರೀತಿಯ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಒತ್ತಡ ಅಥವಾ ಆತಂಕದಿಂದ ಬಳಲುತ್ತಿರುವ ವ್ಯಕ್ತಿಯು ಪಶ್ಚಿಮಕ್ಕೆ ತಲೆಯಿಟ್ಟು ಮಲಗಬೇಕು. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

Continue Reading

ರಾಯಚೂರು

Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

Muharram 2024 : ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮವಾಗಿದ್ದಾರೆ. ಬೆಂಕಿಯಲ್ಲಿ ಬೇಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

VISTARANEWS.COM


on

By

Muharram 2024 Man dies in fire during
Koo

ರಾಯಚೂರು: ರಾಯಚೂರಿನಲ್ಲಿ ಮೊಹರಂ ಆಚರಣೆ ವೇಳೆ ಕೊಂಡ ಹಾಯುವಾಗ (Muharram 2024) ವ್ಯಕ್ತಿಯೊಬ್ಬ ಆಯತಪ್ಪಿ ಬಿದ್ದು ಸುಟ್ಟು ಭಸ್ಮವಾಗಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಯಮನಪ್ಪ ನಾಯಕ್ (45)ಮೃತ ದುರ್ದೈವಿ.

ನಿಗಿ ನಿಗಿ ಕೆಂಡದಲ್ಲಿ ಬೇಯುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮೊಹರಂ ಹಬ್ಬ ಆಚರಣೆ ವೇಳೆ ಕೊಂಡ ಹಾಯುವುದು ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ಅದರಂತೆ ಬೆಂಕಿ ಹಾಯಲು ಯಮನಪ್ಪ ಮುಂದಾಗಿದ್ದರು. ಕೊಂಡ ಹಾಯುವಾಗ ಆಯತಪ್ಪಿ ಬೆಂಕಿಯೊಳಗೆ ಬಿದ್ದ ಪರಿಣಾಮ ಸುಟ್ಟುಕರಕಲಾಗಿದ್ದಾರೆ.

ಕೂಡಲೇ ಅಲ್ಲಿದ್ದವರು ಬೆಂಕಿ ಹಾರಿಸಲು ನೀರು ಎರಚಿ ರಕ್ಷಣೆ ಮುಂದಾದರೂ, ಆದರೆ ತೀವ್ರ ಬೆಂಕಿ ಆವರಿಸಿ ಯಮನಪ್ಪ ಸುಟ್ಟುಭಸ್ಮವಾದರು. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್‌ರಿಂದ ಲಾಠಿ ಚಾರ್ಜ್

ಮೊಹರಂ ಹಬ್ಬದ ಆಚರಣೆ ವೇಳೆ ಪೊಲೀಸ್‌ರಿಂದ ಲಾಠಿ ಚಾರ್ಜ್ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ಪಾಶ್ಚಾಪುರ ಗ್ರಾಮದ ನಡುವಿನ ಪೇಟೆ ಬಳಿ ಬಂದಾಗ ಏಕಾಏಕಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಎರಡು ದೇವರ ಭೇಟಿ ಸಂದರ್ಭದಲ್ಲಿ ಟೊನ್ನೆಬಾವು, ಕರಬಾಲ ಎಂಬ ಸಂಪ್ರದಾಯದ ಆಚರಣೆ ವೇಳೆ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಯಮಕನಮರಡಿ ಪೊಲೀಸ್ ಠಾಣೆಯ ಎಎಸ್‌ಐ ಮುರಗೋಡ ಹಾಗೂ ಓರ್ವ ಪೋಲಿಸ್ ಪೇದೆ ಮೇಲೆ ಹಲ್ಲೆ ನಡೆಸಲಾಗಿದೆ. ಉದ್ದೇಶಪೂರ್ವಕವಾಗಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
CT Ravi
ಪ್ರಮುಖ ಸುದ್ದಿ5 mins ago

Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

World's Largest Tribe
ವಿದೇಶ6 mins ago

Mashco Piro Tribe: ಮೊದಲ ಬಾರಿ ಹೊರ ಜಗತ್ತಿಗೆ ಕಾಣಿಸಿಕೊಂಡ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ!

Sensex Jump
ವಾಣಿಜ್ಯ9 mins ago

Sensex Jump: ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಸೆನ್ಸೆಕ್ಸ್, 24,000 ಮೀರಿದ ನಿಫ್ಟಿ

Student death
ಹುಬ್ಬಳ್ಳಿ11 mins ago

Student Death : ಎಕ್ಸಾಂನಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿನಿ ಸೂಸೈಡ್‌

Bajaj Freedom 125 CNG Bike
Latest21 mins ago

Bajaj Freedom 125 CNG Bike: ಬಜಾಜ್ ಸಿಎನ್‌ಜಿ ಬೈಕ್ ಬುಕ್‌ ಮಾಡಿದರೆ 3 ತಿಂಗಳು ಕಾಯಬೇಕು!

Karnataka Rain
ಮಳೆ31 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Virat Kohli
ಕ್ರೀಡೆ33 mins ago

Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Golden Designer Fashion Wears Trendy Golden Designer Wedding Fashion
ಫ್ಯಾಷನ್37 mins ago

Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

NEET-UG 2024
ದೇಶ41 mins ago

NEET UG 2024: “ವಿದ್ಯಾರ್ಥಿಗಳ ಗುರುತು ಬಹಿರಂಗ ಪಡಿಸದೇ ನೀಟ್‌ ಫಲಿತಾಂಶ ಪ್ರಕಟಿಸಿ”-NTAಗೆ ಸುಪ್ರೀಂ ಸೂಚನೆ; ವಿಚಾರಣೆ ಮುಂದೂಡಿಕೆ

Money Guide
ಮನಿ-ಗೈಡ್48 mins ago

Money Guide: ಇಎಂಐ ಮೂಲಕ ಮೊಬೈಲ್‌ ಖರೀದಿಸುವ ಯೋಚನೆಯಲ್ಲಿದ್ದೀರಾ? ಈ ಅಂಶ ನಿಮಗೆ ತಿಳಿದಿರಲೇ ಬೇಕು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ31 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ2 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ3 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ3 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ3 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ4 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ4 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ4 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

ಟ್ರೆಂಡಿಂಗ್‌