ಮೈಸೂರು: ನಂಜನಗೂಡು ನಗರದ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ (Nanjangud Temple) 1.26 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚು ಆದಾಯ ಬಂದಿದೆ. ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು.
ದೇವಾಲಯದ 33 ಹುಂಡಿಗಳ ಎಣಿಕೆ ಕಾರ್ಯ ಮಾಡಲಾಗಿದ್ದು, 92 ಗ್ರಾಂ 500 ಮಿಲಿ ಗ್ರಾಂ ಚಿನ್ನ, 3 ಕೆಜಿ 750 ಗ್ರಾಂ ಬೆಳ್ಳಿ, 9 ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು 1.26.65,782 ರೂ. ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ. ಪ್ರತಿ ತಿಂಗಳು ನಿಷೇಧಿತ ನೋಟುಗಳು ಪತ್ತೆ ಆಗುತ್ತಿತ್ತು. ಆದರೆ ಈ ಬಾರಿ ಯಾವುದೇ ನಿಷೇಧಿತ ನೋಟುಗಳು ಪತ್ತೆಯಾಗಿಲ್ಲ.
ಇದನ್ನೂ ಓದಿ: Bengaluru Murder Case: ಬೆಂಗಳೂರಿನಲ್ಲಿ ಅತ್ತೆಗೆ ಚಾಕು ಹಾಕಿ ಪಾಪಿ ಅಳಿಯ ಪರಾರಿ
ಎಣಿಕೆ ಕಾರ್ಯದಲ್ಲಿ ಎಸಿ ರಕ್ಷಿತ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್, ಗುರು ಮಲ್ಲಯ್ಯ, ಮುಜರಾಯಿ ತಹಸೀಲ್ದಾರ್ ಕೃಷ್ಣ, ಬ್ಯಾಂಕ್ ಮ್ಯಾನೇಜರ್ ಟಿಕೆ ನಾಯಕ್ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಸಿನಿಮಾ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ