Site icon Vistara News

Navaratri: ಉದ್ಯಾನನಗರಿಯಲ್ಲಿ ಎಲ್ಲೆಡೆ ದಾಂಡಿಯಾ ಮೇನಿಯಾ!

dhadia

dhadia

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ನವರಾತ್ರಿಯ(Navaratri) ರಂಗೇರಿಸುವ ದಾಂಡಿಯಾ ಇದೀಗ ಉದ್ಯಾನನಗರಿಯಲ್ಲಿ ಹೆಚ್ಚಾಗಿದೆ. ಬೆಂಗಳೂರು ಹಾಗೂ ರಾಜ್ಯದ ಇತರೆಡೆ ನೆಲೆಸಿರುವ ಉತ್ತರ ಭಾರತೀಯರು ಸಂಪ್ರದಾಯಿಕ ದಾಂಡಿಯಾಕ್ಕೆ ಸ್ವಾಗತ ಕೋರುತ್ತಾರೆ. ಅವರವರ ಸಮುದಾಯದ ರೀತಿ-ರಿವಾಜಿಗೆ ಅನುಗುಣವಾಗಿ ದಾಂಡಿಯಾ ಕಾರ್ಯಕ್ರಮ ರೂಪುಗೊಳ್ಳುತ್ತಿದ್ದು, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಹೀಗೆ ದಾಂಡಿಯಾ ಎಲ್ಲರನ್ನು ಸೆಳೆಯುತ್ತಿದೆ.

ನಾನಾ ಹೆಸರಲ್ಲಿ ದಾಂಡಿಯಾ

“ದಸರಾ ಸೀಸನ್‌ ಬಂತೆಂದರೆ ಸಾಕು, ಕನ್ನಡಿಗರಿಗೆ ಗೊಂಬೆ ಹಬ್ಬದ ಸಡಗರ, ಮೈಸೂರಿನಲ್ಲಿ ಅಂಬಾರಿ ಉತ್ಸವ, ನವರಾತ್ರಿಯಲ್ಲಿ ದುರ್ಗೋತ್ಸವ ಹೀಗೆ ನಾನಾ ಬಗೆಯ ಕಾರ್ಯಕ್ರಮಗಳು ಎಲ್ಲೆಡೆ ಹಂಗಾಮ ಎಬ್ಬಿಸುತ್ತವೆ. ಇಂದು ದಾಂಡಿಯಾ ಕಾರ್ಯಕ್ರಮಗಳು ನಾನಾ ಶೈಲಿಯಲ್ಲಿ ಜನಪ್ರಿಯಗೊಳ್ಳುತ್ತಿವೆ. ಬಂಗಾಳ, ಗುಜಾರಾತ್‌, ರಾಜನಸ್ತಾನ, ದೆಹಲಿ ಹೀಗೆ ಅಲ್ಲಿಯವರ ಸಂಪ್ರದಾಯಕ್ಕೆ ಹೊಂದುವಂತೆ ವೈವಿಧ್ಯಮಯವಾಗಿ ಅಚರಣೆಗೊಳ್ಳುತ್ತಿದೆ. ಇನ್ನು ಯುವಜನತೆ ಕೂಡ ಇವುಗಳಿಗೆ ಆಕರ್ಷಿತಗೊಳ್ಳುವಂತೆ ನಾನಾ ಹೆಸರಲ್ಲಿ ಇವು ನಡೆಯುತ್ತಿವೆʼʼ ಎನ್ನುತ್ತಾರೆ ದಾಂಡಿಯಾ ಪ್ರೇಮಿ ಸುನೈನಾ ಹಾಗೂ ಸೋನಿ.

ಕುಟುಂಬ ವರ್ಗದವರಿಗಾಗಿ ನಡೆಯುವ ದಾಂಡಿಯಾ

ಕುಟುಂಬ, ಸ್ನೇಹಿತರು ಎಲ್ಲರೂ ಒಂದಾಗಿ ಸೇರಿ ಡಾನ್ಸ್‌ ಮಾಡಬಹುದಾದ ಈ ದಾಂಡಿಯಾ ಉತ್ಸವಗಳು ಬೆಂಗಳೂರಿನಲ್ಲೆ ಸಾಕಷ್ಟು ಕಡೆಗಳಲ್ಲಿ ನಡೆಯುತ್ತಿವೆ. ಪ್ಯಾಲೇಸ್‌ ಗ್ರೌಂಡ್ಸ್‌ ಮಾತ್ರವಲ್ಲ, ರೆಸಾರ್ಟ್‌, ಹೋಟೆಲ್‌ಗಳಲ್ಲಿ, ಪ್ರತಿ ಅಪಾರ್ಟ್‌ಮೆಂಟ್‌ ಕ್ಲಬ್‌ಗಳಲ್ಲಿ ಹಾಗೂ ಸಮುದಾಯಗಳ ಕ್ಲಬ್‌ಗಳಲ್ಲಿ ಆಯೋಜನೆಗೊಳ್ಳುತ್ತವೆ. ನವರಾತ್ರಿಯ ಯಾವುದಾದರೊಂದು ದಿನ ನಡೆಯುತ್ತದೆ.

ಡಿಸ್ಕೊ ದಾಂಡಿಯಾ/ ದಾಂಡಿಯಾ ನೈಟ್ಸ್‌

ಇದು ಸಾಮಾನ್ಯವಾಗಿ ಯುವಕ-ಯುವತಿಯರಿಗೆಂದೇ ಆಚರಿಸುವ ದಾಂಡಿಯಾ ಉತ್ಸವ. ಡಿಜೆಗಳು ಇಂದಿನ ಜನರೇಷನ್‌ ಹುಡುಗ-ಹುಡುಗಿಯರಿಗೆ ಪ್ರಿಯವಾಗುವಂತಹ ಡಿಸ್ಕೊ ಮಿಕ್ಸ್‌ ಬಾಲಿವುಡ್‌ ಬೀಟ್‌ಗಳನ್ನು ದಾಂಡಿಯಾ ಜತೆ ಆಡುವಂತೆ ಸೊಗಸಾಗಿ ಕೊರಿಯಾಗ್ರಾಫಿ ಮಾಡಿರುತ್ತಾರೆ. ಪಬ್‌ ಹಾಗೂ ಡಿಸ್ಕೊ ಥೆಕ್‌ಗಳಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ. ಹೊರಗಡೆಯಿಂದ ಓದಲು ನಗರಕ್ಕಾಗಮಿಸಿರುವ ವಿದ್ಯಾರ್ಥಿಗಳು ಇಂತಹ ಡಿಸ್ಕೊ ಡಾನ್ಸ್‌ ದಾಂಡಿಯಾದ ಪ್ರೇಮಿಗಳು.

ಆನ್‌ಲೈನ್‌ ಬುಕ್ಕಿಂಗ್‌

ಆನ್‌ಲೈನ್‌ನಲ್ಲಿ ಹುಡುಕಿದರೇ ಸಾಕು, ಲೆಕ್ಕವಿಲ್ಲದಷ್ಟು ದಾಂಡಿಯಾ ಕಾರ್ಯಕ್ರಮಗಳು ನಡೆಯುವ ಸ್ಥಳ, ಶುಲ್ಕ ಎಲ್ಲವನ್ನೂ ತಿಳಿದುಕೊಳ್ಳಬಹುದು.

ದಾಂಡಿಯಾ ಪ್ರಿಯರಿಗಾಗಿ ಸಲಹೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Navaratri Green Colour Fashion Tips: 6ನೇ ದಿನ ಹಸಿರು ವರ್ಣದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಇಲ್ಲಿದೆ ಸ್ಟೈಲಿಂಗ್‌ ಟಿಪ್ಸ್

Exit mobile version