ಬೆಂಗಳೂರು: ನವರಾತ್ರಿಯ (Navaratri) ಸಂಭ್ರಮ ಆರಂಭವಾಗಿದೆ. ನಿಮ್ಮ ಈ ಸಡಗರವನ್ನು ಹೆಚ್ಚಿಸಲು “ವಿಸ್ತಾರ ನ್ಯೂಸ್ʼʼ ಆರಂಭಿಸಿರುವ ನವರಾತ್ರಿ ನವವರ್ಣ ವಿಡಿಯೊ ಸಂಭ್ರಮ ಡಿಜಿಟಲ್ ವೇದಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ನೂರಾರು ಜನ ಫೋಟೊ, ವಿಡಿಯೊ ಕಳುಹಿಸಿಕೊಟ್ಟಿದ್ದಾರೆ.
ನವರಾತ್ರಿಯ 9 ದಿನ 9 ಬಣ್ಣದ ಬಟ್ಟೆ ಧರಿಸಿ ನಮ್ಮೊಂದಿಗೆ ಸಂಭ್ರಮವನ್ನು ಹಂಚಿಕೊಳ್ಳಲು “ವಿಸ್ತಾರ ನ್ಯೂಸ್ʼʼ ಕೋರಿತ್ತು. ಇದಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಮಹಿಳೆಯರು ಭಾವಚಿತ್ರ, ವಿಡಿಯೊ ಕಳುಹಿಸಿ ಕೊಟ್ಟಿದ್ದಾರೆ.
ನವರಾತ್ರಿಯಂದು ದೇವಿಯ ವಿವಿದ ರೂಪಗಳನ್ನು ಆರಾಧಿಸಲಾಗುತ್ತದೆ. ಪ್ರತಿಯೊಂದು ಅವತಾರವನ್ನು ಒಂದೊಂದು ಬಣ್ಣ ಸಂಕೇತಿಸುತ್ತದೆ. ಅದಕ್ಕೆ ತಕ್ಕಂತೆ ಮಹಿಳೆಯರು ಆಯಾ ಬಣ್ಣದ ಉಡುಗೆ ತೊಟ್ಟು ಹಬ್ಬದ ಕಳೆಯನ್ನು ಹೆಚ್ಚಿಸಲು ಕೋರಲಾಗಿತ್ತು.
ಮೊದಲ ದಿನ ಕೇಸರಿ ಬಣ್ಣದ ದಿರಸನ್ನು ಧರಿಸಲು ಕೋರಲಾಗಿತ್ತು. ಮಹಿಳೆಯರು, ವಿದ್ಯಾರ್ಥಿನಿಯರು ಸೇರಿ ಎಲ್ಲ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ನೀವೂ ಭಾಗವಹಿಸಬಹುದು
ಈ ಡಿಜಿಟಲ್ ಸಂಭ್ರಮದಲ್ಲಿ ನೀವೂ ಕೂಡ ಭಾಗವಹಿಸಬಹುದು. ನಿಮ್ಮ ಕುಟುಂಬದ ಮಹಿಳಾ ಸದಸ್ಯರು, ಬಂಧುಗಳು, ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು, ಕಾಲೇಜು ಸಹಪಾಠಿಗಳು, ಸಹೋದ್ಯೋಗಿಗಳು, ಸಂಘ ಸಂಸ್ಥೆಯ ಸದಸ್ಯರು ಹೀಗೆ ನಿಮ್ಮ ಆಪ್ತರೊಂದಿಗೆ ನೀವು ಆ ದಿನದ ಬಣ್ಣದ ಉಡುಗೆ ತೊಟ್ಟು (ನೆನಪಿರಲಿ ಎಲ್ಲರೂ ನಿಗದಿತ ಒಂದೇ ವರ್ಣದ ದಿರಸು ಧರಿಸಿರಬೇಕು) ವಿಶೇಷ ರೀತಿಯಲ್ಲಿ ನಿಮ್ಮ ಮೊಬೈಲ್‌ನಲ್ಲಿಯೇ ವಿಡಿಯೊ ಮಾಡಿಕೊಳ್ಳಿ. ಅದನ್ನು ನಮಗೆ ಕಳುಹಿಸಿ. ನಿಮ್ಮ ವಿಡಿಯೊವನ್ನು ಇನ್ನಷ್ಟು ಆಕರ್ಷಣೀಯವಾಗಿಸಿ ವಿಸ್ತಾರ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಹೀಗೆ ಕಳುಹಿಸಿ
ಈ ಕೆಳಗಿನ ವಾಟ್ಸ್ ಆ್ಯಪ್ ನಂಬರ್‌ಗೆ ವಿಡಿಯೊವನ್ನು ಕಳುಹಿಸಿ. ವಿಡಿಯೊ ಕಳುಹಿಸುವಾಗ ನಿಮ್ಮ ತಂಡದ ಒಬ್ಬರ ಹೆಸರು ಮತ್ತು ಊರನ್ನು ತಿಳಿಸಲು ಮರೆಯಬೇಡಿ.
ವಾಟ್ಸ್ ಆ್ಯಪ್ ನಂಬರ್: 9481024181
ಇದನ್ನು ಗಮನಿಸಿ
- ಮಹಿಳೆಯರು, ಯುವತಿಯರು ಮತ್ತು ಬಾಲಕಿಯರಿಗೆ ಮಾತ್ರ ಅವಕಾಶ.
- ಗುಣಮಟ್ಟದ ಕ್ಯಾಮೆರಾ ಇರುವ ಮೊಬೈಲ್ನಿಂದ ವಿಡಿಯೊ ಮಾಡಿ, ವಿಡಿಯೊ ಗುಣಮಟ್ಟ ಉತ್ತಮವಾಗಿರಲಿ, ಹಾಗೂ ನೀವು ಚಿತ್ರಿಸಿದ ವಿಡಿಯೊದ ಅವಧಿ ಒಂದು ನಿಮಿಷದೊಳಗಿರಲಿ.
- ನವರಾತ್ರಿಯ ಪ್ರತಿದಿನ ಕೂಡ ನೀವು ವಿಡಿಯೊ ಮಾಡಿಕಳುಹಿಸಬಹುದು. ಆದರೆ ನಿಮ್ಮ ವಿಡಿಯೊ ಮಧ್ಯಾಹ್ನ 2 ಗಂಟೆಯ ಒಳಗೆ ನಮಗೆ ತಲುಪಿರಬೇಕು.
- ನೀವು ಒಬ್ಬರೋ, ಇಬ್ಬರೋ ವಿಡಿಯೊ ಮಾಡಿ ಕಳುಹಿಸಿದರೆ ಸಾಲದು. ನಿಮ್ಮ ವಿಡಿಯೊದಲ್ಲಿ ಕನಿಷ್ಠ ಐದು ಮಂದಿಯಾದರೂ ಇರಬೇಕು.
ಇದನ್ನೂ ಓದಿ: Navaratri: ನವರಾತ್ರಿ ನವವರ್ಣ; 9 ಬಣ್ಣಗಳ ಮಹತ್ವ ಏನು?