Site icon Vistara News

Trade ban at Temple | ಕೊಡಗಿನ ದೇವಾಲಯದ ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ?

Harihara temple

ಮಡಿಕೇರಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಚಂಪಾ ಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಆಗ್ರಹ ಕೇಳಿಬಂದಿರುವ ನಡುವೆಯೇ ಕೊಡಗಿನ ಒಂದು ದೇವಸ್ಥಾನದಲ್ಲಿ ಜಾತ್ರೆಯ ವೇಳೆ ವ್ಯಾಪಾರ ನಿರ್ಬಂಧ ವಿಧಿಸಿ ಬ್ಯಾನರ್‌ಗಳನ್ನೇ ಹಾಕಲಾಗಿದೆ.

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ನ. 29, 30ರಂದು ಜಾತ್ರೋತ್ಸವ ನಡೆಯಲಿದ್ದು, ಈ ವೇಳೆ ಅನ್ಯ ಧರ್ಮೀಯರು ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಬ್ಯಾನರ್‌ ಹಾಕಲಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ಅವಕಾಶವಿಲ್ಲ, ಕೇವಲ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂದು ವಿಶ್ವಹಿಂದೂ ಪರಿಷತ್, ಬಜರಂಗ ದಳದ ಟಿ.ಶೆಟ್ಟಿಗೇರಿ ಘಟಕದ ವತಿಯಿಂದ ಪ್ರಕಟಣೆ ನೀಡಲಾಗಿದೆ. ನಿರ್ಭಂದ ಮೀರಿ ವ್ಯಾಪಾರ ಮಾಡಿದ್ದೇ ಆದಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ.

ಹಿಂದು ಸಂಘಟನೆಯ ಪ್ರಮುಖರು ಅನ್ಯಕೋಮಿನ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವ ವಿಡಿಯೊ ಕೂಡಾ ಈಗ ವೈರಲ್ ಆಗಿದೆ. ಆದರೆ, ಇದು ದೇವಸ್ಥಾನದ ವತಿಯಿಂದ ಹೊರಬಂದ ನಿರ್ಧಾರವಲ್ಲ ಎನ್ನುವುದು ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ.

ಇದನ್ನೂ ಓದಿ | Kukke subrahmanya | ಕುಕ್ಕೆ ಕ್ಷೇತ್ರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ: ಜಾಗರಣ ವೇದಿಕೆ ಮನವಿ

Exit mobile version