Site icon Vistara News

Prerane : ಧ್ಯಾನದಿಂದ ಮಾತ್ರ ಮೃತ್ಯು ಭಯ ದಾಟಲು ಸಾಧ್ಯ!

Dhyanam prerane

Dhyanam

ಶ್ರೀ ಕೈವಲ್ಯಾನಂದ ಸರಸ್ವತೀ
NO MIND IS MEDITATION ಮನೋರಾಹಿತ್ಯವೇ ಧ್ಯಾನ.
ಯಾವ ವಿಷಯವು ಇಲ್ಲದ ಎಚ್ಚರಿಕೆಯೇ ಧ್ಯಾನ.
ಆಲೋಚನಾ ರಹಿತ ಸ್ಥಿತಿಯೇ ಧ್ಯಾನ
ಜ್ಞಾನವೇ ಧ್ಯಾನ.

ಜ್ಞಾನ ಸ್ವರೂಪವು ಮಾತ್ರವಿದೆ, ಯಾವ ವಿಷಯದ ಬಗ್ಗೆ ಜ್ಞಾನವಿಲ್ಲ. ಈ ಸ್ಥಿತಿಯೇ ಧ್ಯಾನ (ONLY CONSCIOUSNESS IS THERE, BUT NOT CONSCIOUS
ABOUT ANYTHING). ಧ್ಯಾನವೆಂಬುದು ಸಾಗರದಂತೆ ಮಲಿನ ನದಿಗಳನ್ನು ಸೇರಿಸಿಕೊಂಡಾಗ್ಯು ಶುದ್ಧವಾಗಿರುತ್ತದೆ. ಧ್ಯಾನಕ್ಕೆ ಮುನ್ನ ನೀನು ಶುದ್ಧವಾಗಿರಬೇಕೆಂಬ ನಿಯಮವಿಲ್ಲ. ಆದರೆ ನೀನು ಅದರಲ್ಲಿ ಶುದ್ಧನಾಗಿ ಹೊರಬರುತ್ತೀಯೆ. ಪವಿತ್ರತೆಯೆಂಬುದು ಧ್ಯಾನದ ಮೊದಲನೇ ಅನಿವಾರ್ಯತೆಯಲ್ಲ, ಮತ್ತೇನೆಂದರೆ ಅದರ ಪರಿಣಾಮ.

ಧ್ಯಾನವೆಂದರೆ ನಿನ್ನ ಪ್ರೇಮದಲ್ಲಿ ನೀನಿರುವುದು. ಧ್ಯಾನದ ಅರ್ಥವೆಂದರೆ ತನ್ನಲ್ಲಿ ತಾನು ಎಂತಹ ಸಂಬಂಧವನ್ನು ಮಾಡಿಕೊಳ್ಳಬೇಕೆಂದರೆ, ಇತರರ ಸಂಬಂಧದ ಅವಶ್ಯಕತೆಯೇ ಉಳಿಯುವುದಿಲ್ಲ. ಧ್ಯಾನವೆಂದರೆ ತನ್ನಲ್ಲಿ ತಾನು ಪೂರ್ಣನಾಗುವುದು. ಧ್ಯಾನವೆಂದರೆ ಒಳಗೂ ಹೊರಗೂ ಸಾಮರಸ್ಯದಿಂದಿರುವಿಕೆ. ಅನೇಕತನವಿಲ್ಲದೆ ಏಕತ್ವವಿಲ್ಲದೆ ಅದ್ವೈತ ಸ್ಥಿತಿಯಲ್ಲಿರುವುದು ಧ್ಯಾನ.

ಏನನ್ನೂ ಮಾಡದೆ ಯೋಚಿಸುವುದಾಗಲಿ, ಭಾವಿಸುವುದಾಗಲಿ, ಅಥವಾ ಲೈಂಗಿಕತೆಯಲ್ಲಿರುವುದಾಗಲಿ, ಶರೀರದಲ್ಲಿಯಾಗಲಿ, ಹೃದಯದಲ್ಲಿಯಾಗಲಿ, ತಲೆಯಲ್ಲಿಯಾಗಲಿ, ಎಲ್ಲೂ ಅಂಟಿಕೊಳ್ಳದೆ ತನ್ನಲ್ಲಿ ತಾನು ನಿಂತಿರುವುದೇ ಧ್ಯಾನ. ಧ್ಯಾನ ಒಂದನ್ನು ಬಿಟ್ಟು ಉಳಿದ ಎಲ್ಲ ಸಂತೋಷಗಳು ಸ್ವ ಪ್ರಯೋಜನಕ್ಕಾಗಿ ಮತ್ತೊಬ್ಬರನ್ನು ಅನುಚಿತವಾಗಿ ಉಪಯೋಗಿಸಿಕೊಳ್ಳುವುದೇ ಆಗಿದೆ. ಧ್ಯಾನ ಒಂದೇ ಸ್ಪರ್ಧೆ ರಹಿತ ಸಂತೋಷ. ಧ್ಯಾನದಲ್ಲಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಕಾದದ್ದು ಇಲ್ಲ.

ಸರಳವಾಗಿ ನಿಮ್ಮಲ್ಲಿ ನೀವು ಬೆಳೆಯುತ್ತೀರ. ನೀವಾಗಿ ನಿಲ್ಲುತ್ತೀರ. ಆತ್ಮಜ್ಞಾನವೆಂಬುದು ಹೊರಗಿನಿಂದ ಘಟಿಸುವ ಘಟನೆಯಲ್ಲ, ನಿಮ್ಮಲ್ಲೇ ಮೊಳಕೆಯಾಗುವುದು, ನಿಮ್ಮಲ್ಲೇ ಅರಳುವುದು. ಇದೊಂದು ಅಪ್ರಾಪ್ತ ಪ್ರಾಪ್ತಿಯಲ್ಲ. ಆದುದರಿಂದಲೇ ಆತ್ಮಜ್ಞಾನವು ಅಹಂಕಾರದ ಯಾತ್ರೆಯಲ್ಲ. ಧ್ಯಾನವೆಂಬುದು ಅಹಂ ರಹಿತ ಯಾತ್ರೆ. ಧ್ಯಾನವೆಂಬುದು ಒಳಗೂ ಹೊರಗೂ ಸಾಮರಸ್ಯದಲ್ಲಿರುವುದು.

ಧ್ಯಾನವೆಂಬುದು ತನ್ನ ಪ್ರಚಂಡ ಏಕಾಂತತೆಯಲ್ಲಿ ಚಲನೆ, ಪ್ರವೇಶ. ಒಬ್ಬ ವ್ಯಕ್ತಿ ಧ್ಯಾನವನ್ನು ಪ್ರವೇಶಿಸಿದಾಗ ಸಮುದಾಯದ ಒಂದು ಅಂಗವಾಗುವುದಿಲ್ಲ, ಸಮಷ್ಠಿಯಲ್ಲಿ ಕರಗಿ ಹೋಗುತ್ತಾನೆ. ಅದು ವ್ಯಕ್ತಿಗತ ಆತ್ಮಕ್ಕಿಂತಲೂ
ಉನ್ನತ. ಮನುಷ್ಯ ಸಂಪಾದನೆ ಮಾಡಿಕೊಳ್ಳುವ ಸರ್ವ ಸಂಪತ್ತನ್ನೂ ಮೃತ್ಯು ಅಪಹರಿಸುತ್ತದೆ. ಮೃತ್ಯು ನಾಶಮಾಡಲಾಗದ್ದನ್ನು ಧ್ಯಾನದಿಂದಲೇ, ಧ್ಯಾನ ಒಂದರಿಂದಲೇ ಪಡೆಯುವುದು ಸಾಧ್ಯ. ಧ್ಯಾನಕ್ಕಿಂತಲೂ ಪ್ರಯೋಜನಕರವಾದದ್ದು ಮತ್ತಾವುದೂ ಇಲ್ಲ. ಯಾವುದನ್ನಾದರೂ ಫಲಾಕಾಂಕ್ಷೆ ಇಲ್ಲದೆ ಮಾಡಿದರೆ ಅದೇ ಧ್ಯಾನ.

ಹೇಗೆ ಮನಸ್ಸಾಗದಿರುವುದು? ಎಂಬುದೇ ಧ್ಯಾನದ ಅರ್ಥ. ಧ್ಯಾನವೆಂದರೆ ಮನೋರಹಿತ ಸ್ಥಿತಿಯನ್ನು ಸೃಜಿಸುವಿಕೆ (ಮನೋರಹಿತ ಸ್ಥಿತಿಯಲ್ಲಿ ಉಳಿಯುವಿಕೆ).
ಧ್ಯಾನವೆಂದರೆ, ಅಷ್ಟಾವಕ್ರರ ಪ್ರಕಾರ: “ಜಪವಲ್ಲ. ಏನಾದರೂ ಮಾಡು, ಅದು ಧ್ಯಾನವಾಗದು. ಕರ್ತ ಇರುವ ಸ್ಥಳದಲ್ಲಿ ಧ್ಯಾನವು ಹೇಗಾಗುವುದು? ಎಲ್ಲಿಯವರೆಗೂ ಮಾಡುವುದೆಂಬುದಿದೆಯೊ ಅಲ್ಲಿಯವರೆಗೂ ಭ್ರಾಂತಿಯೇ ಇರುತ್ತದೆ. ಎಲ್ಲಿಯವರೆಗೂ ಮಾಡುವವನು ಇದ್ದಾನೋ ಅಲ್ಲಿನವರೆಗೂ ಅಹಂಕಾರವಿರುತ್ತದೆ.’’

ಅಷ್ಟಾವಕ್ರರು “ಧ್ಯಾನವೆಂದರೆ ಸಾಕ್ಷಿಯಾಗುವುದು, ಎಲ್ಲಿ ಕರ್ತ ಉಳಿಯುವುದಿಲ್ಲವೋ, ಕೇವಲ ನೋಡುವವನು – ಸಾಕ್ಷಿ ಉಳಿಯುತ್ತದೆಯೊ, ದ್ರಷ್ಟಾಮಾತ್ರವೇ, ದ್ರಷ್ಟ ಮಾತ್ರನಾಗುವುದೇ, – ದ್ರಷ್ಟಾ ಮಾತ್ರನಾಗುವುದು ಧ್ಯಾನ, ದ್ರಷ್ಟಾ ಮಾತ್ರನಾಗುವುದೇ ಜ್ಞಾನ. ಧ್ಯಾನದ ಆತ್ಯಂತಿಕವಾದ ಅರ್ಥ ವಿಶ್ರಾಂತಿ. ಮನಸ್ಸು ಧ್ಯಾನದಿಂದಾಗುವ ಪ್ರಯೋಜನವನ್ನು ಕಾಣಲಾರದು. ಏಕೆಂದರೆ ಧ್ಯಾನ ಮತ್ತು ಮನಸ್ಸು ಜತೆಯಲ್ಲಿರಲಾರವು. ಮನಸ್ಸಿದ್ದರೆ ಧ್ಯಾನವಾಗಲಾರದು. ಧ್ಯಾನವಿದ್ದಲ್ಲಿ ಮನಸ್ಸಿರಲಾರದು. ಮನಸ್ಸು ಎಂದೂ ಧ್ಯಾನವನ್ನು ನೋಡಿಲ್ಲ. ಮನಸ್ಸು ಮತ್ತು ಧ್ಯಾನ ಕತ್ತಲು ಬೆಳಕಿನಂತೆ. ಧ್ಯಾನವೆಂಬ ಪ್ರಕಾಶದಲ್ಲಿ ಮನಸ್ಸೆಂಬ ಅಂಧಕಾರವಿಲಾರದು.

ಆದಕಾರಣ ಧ್ಯಾನವನ್ನು ಮನಸ್ಸು ಗ್ರಹಿಸಲಾರದು. ಯಾವ ಬಾಹ್ಯ ಪ್ರಯೋಜನವೂ ಆಗಲಾರದು. ಇದನ್ನು ಒಪ್ಪಿಕೊಳ್ಳಬೇಕು. ಆದರೆ ಆಂತರಿಕ, ಉನ್ನತ, ಶ್ರೇಷ್ಠವಾದ ಉದ್ದೇಶ್ಯಗಳಿವೆ. ಹೆಚ್ಚು ಸಹಜವಾದ, ಹೆಚ್ಚು ಮೌಲ್ಯಪೂರಿತವಾದ ಉದ್ದೇಶ್ಯಗಳು-ಯಾವು ಜೀವನವನ್ನು ಪ್ರಾಮುಖ್ಯವಾಗಿ, ವಿಶೇಷವಾಗಿ ಮಾಡಬಲ್ಲವೊ, ಅರ್ಥಪೂರ್ಣವಾಗಿ ಮಾಡಬಲ್ಲವೋ, ಯಾವು ಶಾಶ್ವತವಾದದ್ದನ್ನು ಕೊಡಬಲ್ಲವೋ, ಯಾವು ನಿನ್ನನ್ನು ಪರಮಾತ್ಮನಿಗೂ, ಪರಮಾತ್ಮನನ್ನು ನಿನಗೂ ಲಭ್ಯವಾಗುವಂತೆ ಮಾಡಬಲ್ಲವೊ ಅಂತಹ ಆಂತರಿಕ ಉದ್ದೇಶ್ಯಗಳು ಧ್ಯಾನದಿಂದ ಲಭ್ಯ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಧ್ಯಾನ ಒಂದರಿಂದಲೇ ಮೃತ್ಯು ಭಯವನ್ನು ದಾಟಲು ಸಾಧ್ಯ. ಧ್ಯಾನ ನಿಮ್ಮ ಜ್ಞಾನಸ್ವರೂಪವನ್ನು ತೆರೆದು ತೋರಿಸುವುದು. ಅಮೃತ ಸ್ವರೂಪವನ್ನು ತೆರೆದಿಡುವುದು. ತನ್ನ ಸ್ವರೂಪವನ್ನು ತಿಳಿದವನೇ ನಿಜವಾಗಿ ಜೀವನ ಸಾರ್ಥಕತೆಯನ್ನು ತಿಳಿದವನು. ಧ್ಯಾನದಿಂದ ನೀವೊಬ್ಬ ಅಲೆಗ್ಜಾಂಡರಾಗದಿರಬಹುದು, ಆದರೆ ಒಬ್ಬ ಬುದ್ಧ, ಆತ್ಮಜ್ಞಾನಿಯಾಗುವುದು ದಿಟ. ನಿಮ್ಮ ಕೈಗಳು ತುಂಬಿ ಹೋಗುತ್ತವೆ. ಕೇವಲ ಭೌತಿಕವಾದ ಹಸ್ತಗಳೇ ಅಲ್ಲ. ಆಂತರಿಕ ಆತ್ಮ ತುಂಬಿ ತುಳುಕುತ್ತದೆ. ಅತ್ಯುತ್ತಮವಾದ ತೃಪ್ತಿ, ಆನಂದ, ಆರ್ಶೀರ್ವಾದ ಸಿಗುತ್ತದೆ. ಇದೇ ಧ್ಯಾನದ ಉದ್ದೇಶ್ಯ. ಅದನ್ನು ಗಣಿತದ ಭಾಷೆಯಲ್ಲಿ ಲೆಕ್ಕವಿಡಲು ಸಾಧ್ಯವಿಲ್ಲ. ತೂಕ ಮಾಡಲು ಸಾಧ್ಯವಿಲ್ಲ. ಅಳತೆ ಮಾಡಲು
ಸಾಧ್ಯವಿಲ್ಲ, ಅಳತೆ ಮಾಡಲಾಗದ್ದು, ಊಹಿಸಲಾಗದ್ದು, ಅನುಭವಿಸಲೇಬೇಕಾದದ್ದು. ಅನುಭವಿಸೇ ತಿಳಿಯಬೇಕಾದದ್ದು. ಲೌಕಿಕ ದೃಷ್ಟಿಯ ಪ್ರಯೋಜನವಿಲ್ಲದ್ದು. ಆದರೆ ಸಂಪೂರ್ಣ ಮತ್ತೋಂದು ಆಯಾಮದ ಉದ್ದೇಶವುಳ್ಳದ್ದು, ಮತ್ತೋಂದು ಆಯಮದಲ್ಲಿ ಅರ್ಥವುಳ್ಳದ್ದು ಹಾಗೂ ವಿಶೇಷವಾದದ್ದು. ಪರಿಪೂರ್ಣತೆ, ತೃಪ್ತಿ, ಆನಂದ, ಆಶೀರ್ವಾದವುಳ್ಳದ್ದು.

ಧ್ಯಾನಕ್ಕೆ ತಾನೇ ತಾನಾಗಿರುವಂತೆ ಒಂದು ಶಕ್ತಿ ಇರಬೇಕು. ಸಂಪೂರ್ಣವಾಗಿ ತಾನೇ ತಾನಾಗಿರುವುದು. “ನಾನು ಮಾತ್ರವೇ ಇದ್ದೇನೆ, ಮತ್ತೊಬ್ಬರಾರು ಇಲ್ಲ (ಮತ್ತೊಂದು ಯಾವುದು ಇಲ್ಲ), ನನ್ನಲ್ಲಿ ನಾನು ತೃಪ್ತ, ನೋವಿಲ್ಲ, (ನಲಿವಿಲ್ಲ) ವಿಕ್ಷೇಪವಿಲ್ಲ, ಏನನ್ನೂ ಗಳಿಸಬೇಕೆಂಬ ಆಸೆಯಿಲ್ಲ, ಕೇವಲ ಸಂಪತ್ತನ್ನು ಗಳಿಸಬೇಕೆಂಬ ಆಸೆಯಷ್ಟೇ ಅಲ್ಲ ದೇವರನ್ನು ಪಡೆಯಬೇಕೆಂಬ ಆಸೆಯೂ ಇಲ್ಲ. ಆಗಲೇ ಧ್ಯಾನವಾಗುವುದು’’. ಎಲ್ಲದರಿಂದಲೂ (ದೂರವಾಗುವ) ಬಿಡಿಸಿಕೊಳ್ಳುವ ಪ್ರಯತ್ನವೇ ಧ್ಯಾನ. ಸಂಪೂರ್ಣವಾಗಿ ನೀನು ಏಕಾಂತವಾಗಿ ಉಳಿದಂದು ಪ್ರಪಂಚವು ಪೂರ್ಣವಾಗಿ ಮಾಯವಾಗುವುದು.

ಧ್ಯಾನವೆಂಬುದು ಮನೋರಹಿತ ಸ್ಥಿತಿಗೆ ಸೇರಿದ್ದು. ಮನಸ್ಸಿನ ಸ್ಥಿತಿಯಲ್ಲ. ಇಡೀ ಮಾನವ ಜನಾಂಗವನ್ನು ಒಂದಾಗಿಸುವುದು ಧ್ಯಾನ ಮಾತ್ರವೇ. ಇಡೀ ಪೃಥ್ವಿಯನ್ನು ಒಂದು ಕುಟುಂಬದAತೆ ಮಾಡಬಲ್ಲದು ಯಾವುದೆಂದರೆ ಧ್ಯಾನ ಮಾತ್ರವೇ. ನಿಮಗೆ ಹಣ, ಅಧಿಕಾರ, ಗೌರವ, ಪ್ರತಿಷ್ಟೆ, ಯಶಸ್ಸು-ಇವುಗಳಲ್ಲಿ ಆಸಕ್ತಿಯಿದ್ದರೆ ಧ್ಯಾನದಿಂದ (ಅಧ್ಯಾತ್ಮ ವಿದ್ಯೆಯಿಂದ) ಯಾವ ಸಹಾಯವೂ ಆಗಲಾರದು. ವಾಸ್ತವಿಕವಾಗಿ ಇವೆಲ್ಲದರ ಆಸೆಗಳನ್ನು ಧ್ಯಾನ, ಈ ವಿದ್ಯೆ ನಾಶ ಮಾಡುತ್ತದೆ. ನಿಮ್ಮ ದುರಾಸೆಯನ್ನು ನಾಶಮಾಡುತ್ತದೆ. ನಿಮ್ಮ ಅತ್ಯಾಶಾ ಸ್ಥಿತಿಯನ್ನು ತೆಗೆದುಹಾಕುತ್ತದೆ.

ಅಧಿಕಾರಶಾಹಿಯ ಎಲ್ಲ ತೆರವಾದ ಯಾತ್ರೆಗಳು ವ್ಯರ್ಥವೆಂದು ತೋರಿಸಿ ಕೊಡುತ್ತದೆ. ಅತ್ಯಾಶೆಯ ಮೂಲವನ್ನೇ ಅಹಂಕಾರವನ್ನೇ ಸಾಯಿಸುತ್ತದೆ. ಧ್ಯಾನವೆಂದರೆ ಮನೆಗೆ ಹಿಂತಿರುಗಿ ಬರುವುದಲ್ಲದೇ ಮತ್ತೇನೂ ಅಲ್ಲ. ಕೇವಲ
ಅಂತರಂಗದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುವುದು. ಕೇವಲ ಮನೆಗೆ ಹಿಂತಿರುಗಿ ಬರುವುದು, ವಿಶ್ರಾಂತಿ ಪಡೆಯುವುದು, ಎಲ್ಲಿಗೂ ಹೋಗದಿರುವುದು ಧ್ಯಾನ, ಕೇವಲ ನೀವು ಎಲ್ಲಿರುವಿರೊ, ಅಲ್ಲೀಯೇ ಇರುವುದು (ಸ್ವ ಸ್ವರೂಪದಲ್ಲಿ ಉಳಿಯುವುದು).
When you simply close your eyes move into yourself in your own
womb – this is what meditation is.
ಕದಲಿಕೆ ಇಲ್ಲದ ಮನಸ್ಸಿನ ಕ್ಷಣವೇ ಧ್ಯಾನವೆಂಬುದು. ಸಾಮಾನ್ಯವಾಗಿ ಮನುಷ್ಯನು ಧ್ಯಾನವೆಂದರೆ, ಏಕಾಗ್ರತೆಯೆಂದು ಅರ್ಥಮಾಡಿಕೊಳ್ಳುತ್ತಾನೆ. ಇದು ಸರಿಯಲ್ಲ ಧ್ಯಾನವೆಂದರೆ ವಿಶ್ರಾಂತಿ. ಏಕಾಗ್ರತೆ, ವಿಶ್ರಾಂತಿ ಇವೆರಡೂ ಪರಸ್ಪರ ವಿರುದ್ಧ. ಧ್ಯಾನವೆಂಬುದು ಒಂದು ಇಂದ್ರ ಜಾಲದಂತೆ. ಸಾಮಾನ್ಯನನ್ನು ಒಬ್ಬ ವಿಶೇಷನನ್ನಾಗಿ ಪರಿವರ್ತಿಸುವುದು. ಅದನ್ನು ವರ್ಣಿಸಲು ಒಬ್ಬನಿಗೆ ಶಬ್ಧಗಳು ಸಿಗಲಾರದು. ಅದರ ಮುಂದೆ ಕಾವ್ಯವು ಬಿದ್ದು ಹೋಗುತ್ತದೆ. ಕಾವ್ಯವು ವರ್ಣಿಸಲಾರದು. ಸಂಗೀತವು ಅದನ್ನು ವರ್ಣಿಸಲಾರದು, ಎಲ್ಲವೂ ಅದನ್ನು ವರ್ಣಿಸುವಲ್ಲಿ ಸೋತು ಹೋಗುತ್ತವೆ.

ಧ್ಯಾನವೆಂಬುಂದು ಚಿಕಿತ್ಸೆ, ಅದು ಒಂದು (Theory) ಸಿದ್ದಾಂತವಲ್ಲ. ಧ್ಯಾನವೆಂಬುದು ಕಣ್ಣು ರೆಪ್ಪೆಗಳನ್ನು ತೆರೆಸುವ ಒಂದು ಕ್ರಮ, ಒಂದು ಉಪಾಯ ಹಾಗೂ ಒಂದು ರೀತಿಯ ತಾಂತ್ರಿಕತೆ. ಧ್ಯಾನವೆಂದರೆ ಖಾಲಿಯಾಗುವುದಲ್ಲದೆ ಬೇರೆನೂ ಅಲ್ಲ. ಏನೂ ಅಲ್ಲವಾಗುವುದೇ ಧ್ಯಾನ.

ಮನಸ್ಸು ಅತಿರೇಕಗಳಿಗೆ ಚಲಿಸದೆ ಮಧ್ಯ ಬಿಂದುವಿನಲ್ಲಿ ನೆಲಸುವುದೇ ಧ್ಯಾನ. ಧ್ಯಾನದಲ್ಲಿರುವುದೆಂದರೆ ಈ ಮನಸ್ಸು ಏನನ್ನು ಅಡಗಿಸುತ್ತದೆ ಎಂಬುದನ್ನು ಜಾಗೃತಿಯಿಂದ ಗಮನಿಸುವುದು. ಆ ಮನಸ್ಸಿನ ಸ್ಥಿತಿ ಧ್ಯಾನ. ಧ್ಯಾನವೆಂಬುದು ಹೇಗೆ ಕೊಡವಿಕೊಳ್ಳಬೇಕೆಂಬ ಮಾರ್ಗ, ಕಿಟಕಿಗಳನ್ನು ಕಳಚಿಕೊಂಡು ಕೇವಲ ಸತ್ಯತೆಯಲ್ಲಿ ನಿಲ್ಲುವುದು, ಮಧ್ಯದಲ್ಲಿ ಮತ್ಯಾರು ಇಲ್ಲದಿರುವುದು. ಧ್ಯಾನ ಅರ್ಥಚಿತ್ತ ಪ್ರವಾಹವು ನಿಲ್ಲುವಿಕೆ, ಚಿಂತನೆಯ ನಿಲ್ಲುವಿಕೆ. ಏಕಾಗ್ರತೆಯ ಅರ್ಥ ಒಂದೇ ಇರುವಿಕೆ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನು ಓದಿ: Prerane : ನಾಯಕತ್ವಕ್ಕಾಗಿ ಅಧ್ಯಾತ್ಮಿಕ ಪ್ರಜ್ಞೆ

Exit mobile version