ಶ್ರೀ ಕೈವಲ್ಯಾನಂದ ಸರಸ್ವತೀ
ಹುಚ್ಚನಾರು? ಯಾರು ಎಂದೂ ಸತ್ಯತ್ವಕ್ಕೆ ಬರುವುದಿಲ್ಲವೋ, ಯಾರು ತನ್ನದೇ ಆದಂತಹ ಶಬ್ದ ಜಾಲದ ಪ್ರಪಂಚದಲ್ಲಿ ಓಡಾಡುತ್ತಿರುವರೋ-ಹಾಗೂ ಎಷ್ಟು ದೂರ ಸಂಚರಿಸಿದ್ದಾನೆಂದರೆ, ಅವನನ್ನು ಹಿಂದಕ್ಕೆ ಕರೆತರಲಾಗದು. ಅವನು ಸತ್ಯದೊಂದಿಗೆ ಇಲ್ಲ, ಆದರೆ ನೀವು ಸತ್ಯದೊಂದಿಗೆ ಇರುವಿರಾ?-ಇಬ್ಬರೂ ಇಲ್ಲ.
ವ್ಯತ್ಯಾಸ ಕೇವಲ ತುಸುಮಾತ್ರ. ಹುಚ್ಚ ಬಹಳಷ್ಟು ದೂರ ಸಂಚರಿಸಿದ್ದಾನೆ, ಅಷ್ಟು ದೂರ ನೀವು ಸಂಚರಿಸದೆ ಇರಬಹುದು-ಅವನ ಅಕ್ಕಪಕ್ಕದಲ್ಲೇ ಇರುವಿರಿ. ಹಾಗೂ ನೀವು ಸತ್ಯತೆಯನ್ನು ಮತ್ತೆ, ಮತ್ತೆ ಸ್ಪರ್ಶಮಾಡಿ ಮತ್ತೂ ಅಲೆದಾಡುವಿರಿ.
ನಿಮಗೆ ಸ್ವಲ್ಪ ಸ್ಪರ್ಶವಾದರೆ, ಎಲ್ಲೋ ಸ್ವಲ್ಪ ಸಂಬಂದವಿದೆ, ಮೂಲೋತ್ಪಾಟವಾಗಿದೆ, ಆದರೆ ಇನ್ನೂ ಒಂದು ಬೇರು ಸತ್ಯತೆಯಲ್ಲಿದೆ. ಆದರೆ ಆ ಬೇರು ಬಹಳ ಬೇಗ ಕಿತ್ತು ಹೋಗುವುದಾಗಿದೆ, ಯಾವ ಕ್ಷಣದಲ್ಲಾದರೂ ಕಿತ್ತು ಬರಬಹುದು. ಯಾವುದಾದರೂ ಆಕಸ್ಮಿಕ – ಹೆಂಡತಿಯ ಮೃತ್ಯು, ಗಂಡ ಬಿಟ್ಟು ಹೋಗುವುದು, ಬಜಾರಿನಲ್ಲಿ ದಿವಾಳಿಯಾಗಬಹುದು -ಆಗ ಬಲವಿಲ್ಲದ ಬೇರು ಕಿತ್ತುಹೋಗುತ್ತದೆ. ಆಗ ನೀವು ಮತ್ತೆ, ಮತ್ತೆ ಸಂಚರಿಸುತ್ತೀರ. ಮತ್ತೆ ಹಿಂತಿರುಗುವುದಿಲ್ಲ, ಸತ್ಯವನ್ನು ಸ್ಪರ್ಶ ಮಾಡುವುದಿಲ್ಲ. ಇದು ಹುಚ್ಚು ಮನುಷ್ಯನ ಸ್ಥಿತಿ ಹಾಗೂ ಸಾಮಾನ್ಯ ಮನುಷ್ಯ ಸ್ವಲ್ಪ ಭಿನ್ನವಷ್ಟೆ.
ಜ್ಞಾನಿಯ ಸ್ಥಿತಿಯೇನು? ಬುದ್ದಿ ಸ್ವರೂಪದಲ್ಲಿರು (ಮನುಷ್ಯ) ವವನ, ತಿಳಿದವನ, ಜಾಗೃತನಾಗಿರುವವನ ಸ್ಥಿತಿಯೇನು? – ಹುಚ್ಚನಿಗಿಂತ ಜ್ಞಾನಿ ವಿರೋಧ. ನೀವುಗಳು ಮಧ್ಯದಲ್ಲಿರುತ್ತೀರ. ಈಗ ಹುಚ್ಚನಾಗುವುದಕ್ಕೆ ಸರಿಯಬಹುದು, ಅಥವಾ ಬುದ್ಧನಾಗುಳಿಯಲು – ಜ್ಞಾನಿಯಾಗುಳಿಯಲು ಸರಿಯಬಹುದು.
ಇದು ನಿಮಗೆ ಸೇರಿದ್ದು. ಆಲೋಚಿಸಲು ಹೋಗಬೇಡಿ-ಒಳಗೆ (Thought) ಆಲೋಚನೆಗಳನ್ನು ಬೆಳೆಸಿಕೊಳ್ಳಬೇಡಿ. 100ಕ್ಕೆ 99 ಭಾಗ ಅದೆಲ್ಲವೂ ವ್ಯರ್ಥ. ಆ ಆಲೋಚನೆಗಳನ್ನು ಬಿಟ್ಟು ನಿಮ್ಮನ್ನು ನೀವು ಸತ್ಯದ ಕಡೆಗೆ ಹಿಂತಿರುಗಿಸಿ. ಎಲ್ಲಿರುವಿರೋ ಅಲ್ಲೆ ಇರಿ – ಇದರ ಅರ್ಥ ಈಗ, ಇಲ್ಲಿ ಇರಿ. ಈಗ, ಇಲ್ಲಿ-ಇವುಗಳಿಂದ ಆಚೆಗೆ ಹೋಗದಿರಿ, ಏನುಮಾಡುತ್ತಿದ್ದರೂ ಪೂರ್ಣವಾಗಿ ಅಲ್ಲಿಯೇ ಇರಿ. ಮಾಡುವವನು ಇಲ್ಲವಾಗುವಂತೆ ಇರಿ. ಆಲೋಚನೆಗಳಲ್ಲಿ ಅಲೆಯಬೇಡಿ. ಏನನ್ನು ಮಾಡುತ್ತಿರುವಿರೋ ಅದನ್ನು ಆಸ್ವಾದಿಸಿ, ಸ್ವಸ್ಪರ್ಶ ಮಾಡಿ (Feel it). ಇಡೀ ಜೀವನದಲ್ಲಿ ಸಂವೇದನಾ ಶಕ್ತಿ ಇರಲಿ. 24 ಗಂಟೆಗಳಲ್ಲಿಯೂ ಸತ್ಯವು ನಿಮ್ಮ ಎದುರಿನಲ್ಲಿದೆ, ನಿಮ್ಮ ಸುತ್ತಲೂ ಇದೆ, ನೀವು ಅದರಲ್ಲೇ ಉಸಿರಾಡುತ್ತಿರುತ್ತೀರ. ಅದರಲ್ಲಿ ಆಹಾರ ಸೇವಿಸುತ್ತಿರುತ್ತೀರ ಅದನ್ನೇ ಉಸಿರಾಡುತ್ತಿರುತ್ತೀರ. ಅದನ್ನೇ ತಿನ್ನುತ್ತಿರುತ್ತಿರುವಿರಿ, ನೀವೇನು ಮಾಡಿದರೂ ಸತ್ಯದೊಂದಿಗೆ ಮಾಡಬೇಕು.
ಆದರೆ ಮನಸ್ಸು ಬಹಳ ದೂರಕ್ಕೆ ಪ್ರಯಾಣ ಮಾಡುತ್ತದೆ. ನಿಮ್ಮ ಇರುವಿಕೆಗೂ ನಿಮ್ಮ ಮನಸ್ಸಿಗೂ ಕಂಟಕವಿದೆ. ಎರಡು ಒಟ್ಟಿಗೆ ಇಲ್ಲ. ನೀವಿಲ್ಲಿರುತ್ತೀರ, ಮನಸ್ಸು ಎಲ್ಲಿಯೋ ಇರುತ್ತದೆ. (Thought-ಆಲೋಚನೆ ಎಂಬುದೆ ಕಂಟಕ. ಆಲೋಚನೆ ಬಂದಲ್ಲಿ ನೀವು ನಿಮ್ಮಿಂದ ದೂರವಾದಂತೆ).
ನೀವೇನೆಲ್ಲ ಮಾಡುತ್ತಿದ್ದರೂ ಯಾವ ರೀತಿ ಮಾಡಬೇಕೆಂದರೆ, ಆಹಾರ ಸೇವಿಸುವಾಗ ರುಚಿಯನ್ನು ಆಸ್ವಾದಿಸುತ್ತಾ ತಿನ್ನಿ. ಎಷ್ಟು ಆಳವಾಗಿ ತಿನ್ನಬೇಕೆಂದರೆ ತಿನ್ನುವನನ್ನು ಮರೆತುಬಿಡಬೇಕು-ಕೇವಲ ತಿನ್ನುವ ಕಾರ್ಯ ವಿಧಾನವೇ ನೀವಾಗಬೇಕು. ಸತ್ಯತೆಯು ಸ್ಪಷ್ಟವಾದ ದೃಷ್ಠಿಯನ್ನು ಬಯಸುತ್ತದೆ. ಹಿಂದೂ ಮತದ ದೃಷ್ಠಿಯಿಂದ ನೋಡಿದಲ್ಲಿ ಅಥವಾ ಹಿಂದುವಾಗಿ, ಮುಸಲ್ಮಾನನಾಗಿ, ಕ್ರಿಶ್ಚಿಯನ್ನನ್ನಾಗಿ ನೋಡಿದಲ್ಲಿ ಸತ್ಯತೆಯನ್ನು ಕಾಣಲಾಗುವುದು ತಪ್ಪಿಹೋಗುತ್ತದೆ. ಯಾವುದಾದರೂ ಒಂದು ವ್ಯವಸ್ಥೆಯ ಅಭಿಮಾನದಿಂದ ಸತ್ಯವನ್ನು ನೋಡಲಾಗದು. ವ್ಯವಸ್ಥೆಗೊಳಿಸುವ, ಕ್ರಮಗೊಳಿಸುವ ಮನಸ್ಸಿನಿಂದ-ವ್ಯವಸ್ಥೆಗೊಳಗಾಗಿ, ಕ್ರಮಕ್ಕೊಳಗಾಗಿ, ಅವ್ಯವಸ್ಥೆ ಕ್ರಮಗಳ ಬಂಧನದಲ್ಲಿರುವ ಮನಸ್ಸಿನಿಂದ ಹೊರಬಂದು ನೋಡಬೇಕು. ಸತ್ಯದ ಕಡೆಗೆ ಯಾವುದೇ ಪೂರ್ವಭಾವಿ ಅಭಿಪ್ರಾಯಗಳಿಲ್ಲದೆ ನೋಡುವುದಾರೆ, ಆಗ ಸತ್ಯ ಪ್ರಾಪ್ತಿಯಾಗುವುದು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಸತ್ಯವು ಸರಳವಾದದ್ದು, ಇದು ಸಾಮಾನ್ಯವಾದದ್ದು, ಅದರ ಬಗ್ಗೆ ಯಾವ ವಿಶೇಷತೆಯೂ ಇಲ್ಲ. ಸತ್ಯವು ವಿಶೇಷತೆ, ಅಸಮಾನ್ಯತೆಯನ್ನು ಹೊಂದಿಲ್ಲ. ಅದು ಅಲ್ಲಿದೆ-ಎಲ್ಲೆಲ್ಲೂ ಇದೆ. ನಿಮ್ಮ ಮನಸ್ಸು ಮಾತ್ರ ಅಸತ್ಯವಾದದ್ದು. ಮನಸ್ಸು ಮೋಸ, ಮಾಯ-ಮನಸ್ಸು ಮೋಸ, ಮಾಯಗಳನ್ನು ಸೃಷ್ಠಿ ಮಾಡುತ್ತದೆ. ಹಗಲುಗನಸ್ಸನ್ನು ಸೃಷ್ಠಿಮಾಡುತ್ತದೆ. ಇವೆಲ್ಲವೂ ಮೋಡದಂತೆ ನಿಮ್ಮನ್ನು ಮುಚಿಬಿಡುತ್ತವೆ. ಮಾಡಲು ಸಾಧ್ಯವಾಗದ ಅಸಾಧ್ಯವನ್ನು ಮಾಡಲು ಪ್ರಯತ್ನ ಮಾಡುತ್ತಿರುತ್ತೀರ. ಮನಸ್ಸಿನ ಮುಖಾಂತರ ಸತ್ಯವನ್ನು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿರುತ್ತೀರ. ಮನಸ್ಸಿನಿಂದ ಪ್ರಯತ್ನ ಮಾಡಿದಾಗ ಸತ್ಯವನ್ನು ಕಳೆದುಕೊಳ್ಳುತ್ತೀರ. ಮನಸ್ಸಿನಿಂದ ಪಡೆಯಲಾಗದು.
ಮನಸ್ಸನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು. ಸತ್ಯಕ್ಕೆ ಮಾರ್ಗ ನಿಮ್ಮ ಎದುರಿನಲ್ಲೇ ಇದೆ. ಆದರೆ ನೀವೇ ಅಲ್ಲಿಲ್ಲ.
ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.
ಇದನ್ನೂ ಓದಿ : Prerane : ನಾವು ಕೀರ್ತಿವಂತರಾಗಬೇಕೇ? ಬೇಡವೇ?