ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ರಾಮನ ನಗರದಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಧಾರ್ಮಿಕ ವಿಧಿವಿಧಾನಗಳು ಕೂಡ ಆರಂಭವಾಗಿವೆ. ಇದರ ಭಾಗವಾಗಿಯೇ ಬುಧವಾರ (ಜನವರಿ) ರಾಮಲಲ್ಲಾ ಮೂರ್ತಿಯು ರಾಮಮಂದಿರ ಪ್ರವೇಶಿಸಲಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಕುರಿತು ಕುರಿತು ಮಾಹಿತಿ ಹಂಚಿಕೊಂಡಿದೆ. “ಜನವರಿ 17ರಂದು ಮಧ್ಯಾಹ್ನ 1.20ಕ್ಕೆ ರಾಮಲಲ್ಲಾನ ಮೂರ್ತಿಯನ್ನು ರಾಮಮಂದಿರದೊಳಗೆ ತೆಗೆದುಕೊಂಡು ಹೋಗಲಾಗುತ್ತದೆ. ಜಲಯಾತ್ರೆ, ತೀರ್ಥ ಪೂಜೆ, ಕುಮಾರಿ ಸುವಾಸಿನಿ ಪೂಜೆ, ವರ್ಧಿನಿ ಪೂಜೆ ಮಾಡಲಾಗುತ್ತದೆ. ಕಳಶಯಾತ್ರೆಯೊಂದಿಗೆ ರಾಮಮಂದಿರಕ್ಕೆ ರಾಮಲಲ್ಲಾನ ಮೂರ್ತಿಯನ್ನು ಕೊಂಡೊಯ್ಯಲಾಗುತ್ತದೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
प्राण प्रतिष्ठा पूजन के प्रथम दिन के समापन पर वैदिक विद्वान आचार्य श्री गणेश्वर शास्त्री द्रविड़ का वक्तव्य:
— Shri Ram Janmbhoomi Teerth Kshetra (@ShriRamTeerth) January 16, 2024
अयोध्या में श्री रामजन्मभूमि स्थान पर निर्मित हुए श्री राम मन्दिर में 22 जनवरी के प्रतिष्ठा महोत्सव के अन्तर्गत् 16 जनवरी को श्री अनिल मिश्रा ने सांगोपांग सर्व… pic.twitter.com/qQzk9qH1hD
ದಿವ್ಯ ಅಯೋಧ್ಯಾ ಆ್ಯಪ್ ಅಭಿವೃದ್ಧಿ
ಇಡೀ ಅಯೋಧ್ಯೆ ನಗರವನ್ನು ವೀಕ್ಷಿಸಲು ಬೇಕಾದ ಎಲ್ಲ ಮಾಹಿತಿಯನ್ನು ದಿವ್ಯ ಅಯೋಧ್ಯಾ ಆ್ಯಪ್ ಒಳಗೊಂಡಿದೆ. ರಾಮಮಂದಿರ ಸೇರಿ ಅಯೋಧ್ಯೆ ನಗರದಲ್ಲಿರುವ ದೇವಾಲಯಗಳು, ಸರಯೂ ನದಿ, ಅಯೋಧ್ಯೆಯ ಐತಿಹಾಸಿಕ ಹಿನ್ನೆಲೆ, ರಾಮಮಂದಿರದ ಇತಿಹಾಸ, ದೇವಾಲಯಗಳಿಗೆ ತೆರಳಲು ಮಾರ್ಗ, ಸ್ಮಾರಕಗಳು, ಅವುಗಳ ಕಾಲಘಟ್ಟ ಸೇರಿ ನೂರಾರು ಮಾಹಿತಿಯು ಆ್ಯಪ್‌ನಲ್ಲಿದೆ. ಅಯೋಧ್ಯೆಗೆ ಆಗಮಿಸುವ ಯಾತ್ರಿಕರು ಈ ಒಂದು ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ ಸಾಕು, ಎಲ್ಲ ಮಾಹಿತಿ ಸಿಗುವ ಹಾಗೆ ಅಭಿವೃದ್ಧಿಪಡಿಸಲಾಗಿದೆ.
ಬಿಗಿ ಬಂದೋಬಸ್ತ್
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ