Site icon Vistara News

Rare Ritual: ಹುತ್ತ ಬೆಳೆದ ಕಾರಣ ಗರ್ಭಗುಡಿಯ ದೇವರ ಮೂರ್ತಿ ವಿಸರ್ಜನೆ!

kempamma idol

ಚಿಕ್ಕಮಗಳೂರು: ಅಚ್ಚರಿಯೊಂದಕ್ಕೆ ಕಾಫಿ ನಾಡು ಚಿಕ್ಕಮಗಳೂರು (chikkamagaluru news) ಸಾಕ್ಷಿಯಾಗಿದೆ. ದೇವರ ಮೂರ್ತಿಯ (God Idol) ಮೇಲೆ ಹುತ್ತ ಆವರಿಸಿದೆ ಎಂಬ ಕಾರಣಕ್ಕೆ ಗರ್ಭಗುಡಿಯಲ್ಲಿದ್ದ ದೇವರನ್ನೇ ವಿಸರ್ಜಿಸುತ್ತಿರುವ ಅಪರೂಪದ ಆಚರಣೆ (Rare Ritual) ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಇಲ್ಲಿನ ಕೆಂಪಮ್ಮ ದೇವಿಯ ದೇವಸ್ಥಾನದ ಗರ್ಭಗುಡಿಯಲ್ಲಿ ದೇವಿಯ ಮೂರ್ತಿಯ ಮೇಲೇ ಹುತ್ತ ಬೆಳೆದ ಕಾರಣ ದೇವರ ವಿಸರ್ಜನಾ ಕಾರ್ಯ ನಡೆಯುತ್ತಿದೆ.

ಹತ್ತು ವರ್ಷಗಳ ಬಳಿಕ ಗರ್ಭಗುಡಿಯ ಕೆಂಪಮ್ಮ ದೇವಿಯ ಮೂರ್ತಿ ವಿಸರ್ಜನಾ ಕಾರ್ಯ ನಡೆಯುತ್ತಿದೆ. ಹತ್ತು ವರ್ಷದ ಹಿಂದೆ ಈಗಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದೀಗ ಗರ್ಭಗುಡಿಯ ದೇವರನ್ನೇ ಆವರಿಸಿ ಬೆಳೆದಿರುವ ಹುತ್ತ ಕೆಂಪಮ್ಮ ದೇವಿಯ ಹಣೆ, ಮುಖದವರೆಗೂ ಬೆಳೆದಿದೆ.

kempamma temple kundur

ಹುತ್ತದ ಪವಾಡ ಕಂಡು ಇಲ್ಲಿನ ಭಕ್ತರು ಮೂಕ ವಿಸ್ಮಿತರಾಗಿದ್ದಾರೆ. 10 ಅಥವಾ ಕೆಲವೊಮ್ಮೆ 20 ವರ್ಷಗಳಿಗೊಮ್ಮೆ ಇಲ್ಲಿನ ದೇವರನ್ನೇ ಹುತ್ತ ಆವರಿಸಿ ಬೆಳೆಯುತ್ತದೆ. ಈ ಸಂದರ್ಭದಲ್ಲಿ ದೇವರ ಮೂರ್ತಿಯನ್ನು ವಿಸರ್ಜಿಸಿ ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದೀಗ ಹುತ್ತದ ಕೆಂಪಮ್ಮನ ಮಹಿಮೆ ಕಂಡು ಭಕ್ತರು ಅಚ್ಚರಿಗೊಳಗಾಗಿದ್ದು, ದೇವರನ್ನೇ ಆವರಿಸಿರುವ ಹುತ್ತದ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: Chandrayaan 3: ದೇಗುಲ ಭೇಟಿ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್‌ ಮೊದಲ ಪ್ರತಿಕ್ರಿಯೆ; ಕುಹಕಿಗಳಿಗೆ ಕುಟುಕಿದ್ದು ಹೀಗೆ…

Exit mobile version