Site icon Vistara News

Shakuna Shastra : ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೇ, ಅಶುಭವೇ?!

Shakuna Shastra money found on road is good or bad know here in kannada

#image_title

ಶಕುನ ಶಾಸ್ತ್ರದಲ್ಲಿ ನಿತ್ಯದಲ್ಲಿ ಎದುರಾಗುವ ಗೊಂದಲಗಳಿಗೆ ಪರಿಹಾರವಿರುತ್ತದೆ. ಸಾಮಾನ್ಯವಾಗಿ ಹಲವರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕಿರುತ್ತದೆ. ಅದನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲ ಉಂಟಾಗಿರುತ್ತದೆ. ಆದರೆ ಶಕುನ ಶಾಸ್ತ್ರದಲ್ಲಿ (Shakuna Shastra) ಇದಕ್ಕೆ ಸರಿಯಾದ ಉತ್ತರ ದೊರಕುತ್ತದೆ.

ಕೆಲವರು ರಸ್ತೆಯಲ್ಲಿ ಹೋಗುತ್ತಿರುವಾಗ ಹಣ ಸಿಕ್ಕರೆ ಅದನ್ನು ತೆಗೆದುಕೊಂಡು ದೇವಸ್ಥಾನದ ಹುಂಡಿಗೋ ಅಥವಾ ಇನ್ಯಾರಿಗೋ… ನಿರ್ಗತಿಕರಿಗೋ ಕೊಟ್ಟು ಬಿಡುತ್ತಾರೆ. ಅದೇ ಇನ್ನು ಕೆಲವರು ಅದನ್ನು ತೆಗೆದುಕೊಂಡು ಖರ್ಚು ಮಾಡದೆ ಹಾಗೆಯೇ ಇಟ್ಟುಕೊಂಡಿರುತ್ತಾರೆ. ಮತ್ತೆ ಕೆಲವರು ತಿಳಿದವರಲ್ಲಿ ಕೇಳಿ ಬಳಕೆ ಮಾಡಿದರಾಯಿತು ಎಂದು ಒಂದು ಕಡೆ ಇಟ್ಟು ಬಿಡುತ್ತಾರೆ. ಈ ರೀತಿ ಮಾಡುವುದಕ್ಕೆ ಮನಸ್ಸಿನಲ್ಲಿರುವ ಗೊಂದಲವೇ ಕಾರಣ. ರಸ್ತೆಯಲ್ಲಿ ಬಿದ್ದಿರುವ ಹಣವನ್ನು ತೆಗೆದುಕೊಂಡರೆ ಕೆಡುಕು ಉಂಟಾದರೆ ಎಂಬ ಭಯವೂ ಇರುತ್ತದೆ. ಶಕುನ ಶಸ್ತ್ರದ ಪ್ರಕಾರ ದಾರಿಯಲ್ಲಿ ಆಕಸ್ಮಿಕವಾಗಿ ಸಿಗುವ ಹಣವು ಶುಭದ ಸಂಕೇತವಾಗಿರುತ್ತದೆ!

ಹೊಸ ಕೆಲಸದ ಆರಂಭ

ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಅದು ಶುಭವೆಂದು ಹೇಳಲಾಗುತ್ತದೆ. ಇದು ಯಾರಿಗೆ ಸಿಕ್ಕಿರುತ್ತದೆಯೋ ಅವರು ಹೊಸ ಕೆಲಸವನ್ನು ಆರಂಭಿಸಬಹುದಾಗಿದೆ ಎಂಬ ಶುಭ ಸೂಚನೆಯನ್ನು ಇದು ನೀಡುತ್ತದೆ ಎಂದು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೇ ಆ ಕೆಲಸದಲ್ಲಿ ಯಶಸ್ಸು ಲಭಿಸುವುದಲ್ಲದೇ, ಧನ ಲಾಭವೂ ಆಗುತ್ತದೆ ಎಂಬ ಶುಭ ಸಂದೇಶವನ್ನು ಲಕ್ಷ್ಮೀ ದೇವಿ ಈ ಮೂಲಕ ನೀಡುತ್ತಾಳಂತೆ.

ಜೀವನದಲ್ಲಿ ಯಶಸ್ಸು

ರಸ್ತೆಯಲ್ಲಿ ಬಿದ್ದಿರುವ ನಾಣ್ಯ ಕಣ್ಣಿಗೆ ಬಿದ್ದು ಅದನ್ನು ತೆಗೆದುಕೊಂಡರೆ ಅದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ. ಇದು ಅನೇಕ ಜನರ ಕೈಯಿಂದ ಕೈಗೆ ಸಾಗಿರುತ್ತದೆ. ಇದರಿಂದ ಹಲವರ ಸಕಾರಾತ್ಮಕ ಶಕ್ತಿ ಅದರಲ್ಲಿ ಪ್ರವಹಿಸಿರುತ್ತದೆ. ಹಾಗಾಗಿ ಆ ನಾಣ್ಯದಿಂದ ಜೀವನದಲ್ಲಿ ಖುಷಿ ಮತ್ತು ನೆಮ್ಮದಿ ಸಿಗುತ್ತದೆಯಂತೆ.

ಪಿತ್ರಾರ್ಜಿತ ಸಂಪತ್ತು ಸಿಗುವ ಸಂಕೇತ

ದಾರಿಯಲ್ಲಿ ಹೋಗುವಾಗ ಸಾಮಾನ್ಯವಾಗಿ ನಾಣ್ಯ ಅಥವಾ ನೋಟು ಸಿಗುತ್ತದೆ. ಆದರೆ ಕೆಲವು ಬಾರಿ ಹಣದಿಂದ ತುಂಬಿರುವ ಪರ್ಸ್ ಸಿಕ್ಕಿ ಬಿಡುತ್ತದೆ. ಅದು ಯಾರದ್ದಾಗಿರಬಹುದು ಎಂಬ ಚಿಂತೆ ಒಂದು ಕಡೆಯಾದರೆ, ಸಿಕ್ಕಿರುವ ಪರ್ಸ್ ಅಥವಾ ದುಡ್ಡನ್ನು ಏನು ಮಾಡುವುದೆಂಬ ಗೊಂದಲ ಉಂಟಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಹಣವಿರುವ ಪರ್ಸ್ ಸಿಗುವುದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಈ ರೀತಿ ಹಣ ಸಿಗುವುದು ಪಿತ್ರಾರ್ಜಿತ ಸ್ವತ್ತು ಸಿಗುವ ಸೂಚನೆಯನ್ನು ನೀಡುತ್ತದೆ. ಜೊತೆಗೆ ಧನಲಾಭವಾಗುವ ಸಂಭವವೂ ಇದೆ ಎಂಬ ಸಂಕೇತವು ಸಹ ಇದಾಗಿರುತ್ತದೆ. ಹಾಗಾಗಿ ದಾರಿಯಲ್ಲಿ ಹಣವಿರುವ ಪರ್ಸ್ ಸಿಕ್ಕಿದರೆ ಅದು ಯಾರದ್ದೆಂದು ತಿಳಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿ, ಅದನ್ನು ಅವರಿಗೆ ಒಪ್ಪಿಸುವುದು ಧರ್ಮ. ಒಂದೊಮ್ಮೆ ಅದು ಯಾರಿಗೆ ಸೇರಿದ್ದು ಎಂಬ ಯಾವುದೇ ವಿಚಾರ ತಿಳಿಯದೇ ಇದ್ದಾಗ, ಆಗ ಅದನ್ನು ಶುಭ ಸಂಕೇತ ಎಂದುಕೊಳ್ಳುವುದು ಉತ್ತಮ.

ಇದು ದೇವರ ಆಶೀರ್ವಾದ!

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಣ್ಯ ಸಿಕ್ಕಿದರೆ ಅದು ದೇವರ ಆಶೀರ್ವಾದವೇ ಆಗಿರುತ್ತದೆ ಎಂದು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ನಾವು ಮಾಡುವ ಕೆಲಸದಲ್ಲಿ ಅಥವಾ ನಮ್ಮ ಜೊತೆಯಲ್ಲಿ ದೇವರಿದ್ದಾನೆ ಎಂಬ ಸಂಕೇತವನ್ನು ಇದು ನೀಡುತ್ತದೆ. ದಾರಿಯಲ್ಲಿ ದುಡ್ಡು ಸಿಕ್ಕರೆ ಅಂಥವರ ಜೊತೆಗೆ ದೇವರ ಆಶೀರ್ವಾದ ಸಿಕ್ಕಿದೆ ಎಂಬ ನಂಬಿಕೆಯೂ ಇದೆ. ಈ ಸಮಯದಲ್ಲಿ ನೀವು ಯಾವುದಾದರೂ ಜಮೀನು, ಪ್ರಾಪರ್ಟಿ ಅಥವಾ ಮನೆಯನ್ನು ಮಾಡಿದರೆ ಲಾಭ ಉಂಟಾಗುತ್ತದೆ.

ರಸ್ತೆಯಲ್ಲಿ ನಡೆಯುವಾಗ ಹಣ ಸಿಕ್ಕರೆ ಅದು ಯಾರಿಗೆ ಸೇರಿದ್ದು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು. ಅದು ಯಾರಿದ್ದೆಂದು ತಿಳಿಯದೇ ಇದ್ದಾಗ ಅದನ್ನು ಇಟ್ಟುಕೊಳ್ಳುವುದು ಉತ್ತಮ. ಇದು ಶುಭವನ್ನು ಸೂಚಿಸುತ್ತದೆ ಎಂದು ಶಾಸ್ತ್ರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿಗೆ ಕಿಟಕಿ ಇದ್ದರೆ ಆರ್ಥಿಕ ಲಾಭ, ಸಮೃದ್ಧಿ!

Exit mobile version