Site icon Vistara News

Solar Eclipse 2022 | ಗ್ರಹಣದಿಂದ ಯಾವ ರಾಶಿಗೆ ಶುಭ? ಯಾವೆಲ್ಲಾ ರಾಶಿಗೆ ಅಶುಭ? ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು?

Solar Eclipse 2022

ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಅಂದರೆ ಅಕ್ಟೋಬರ್‌ 25 ರಂದು ಕೇತುಗ್ರಸ್ತ ಸೂರ್ಯಗ್ರಹಣ (Solar Eclipse 2022) ಸಂಭವಿಸಲಿದೆ.

ಈ ಗ್ರಹಣವು ಸ್ವಾತೀ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ನಕ್ಷತ್ರ ಮತ್ತು ರಾಶಿಯವರಿಗೆ ವಿಶೇಷ ದೋಷವಿರಲಿದೆ. ಈ ಗ್ರಹಣವು ಚಿತ್ತಾ, ಸ್ವಾತೀ, ವಿಶಾಖ, ಆರಿದ್ರಾ, ಶತಭಿಷ ನಕ್ಷತ್ರದವರಿಗೂ, ತುಲಾ, ವೃಶ್ಚಿಕ, ಮೀನ, ಕಟಕ ರಾಶಿಯವರಿಗೂ ಅಶುಭವನ್ನುಂಟು ಮಾಡುತ್ತದೆ.

ಧನು, ಮಕರ, ವೃಷಭ, ಸಿಂಹ ರಾಶಿಯವರಿಗೆ ಶುಭ ಫಲಗಳಿದ್ದರೆ, ಕನ್ಯಾ, ಕುಂಭ, ಮೇಷ, ಮಿಥುನ ರಾಶಿಯವರಿಗೆ ಮಿಶ್ರ ಫಲಗಳಿರಲಿವೆ ಎಂದು ಪಂಚಾಂಗದಲ್ಲಿ ಹೇಳಲಾಗಿದೆ.

ಗ್ರಹಣದ ದೋಷವಿರುವ ನಕ್ಷತ್ರ ಅಥವಾ ರಾಶಿಯವರು ಈ ಕೆಳಗಿನ ಶ್ಲೋಕವನ್ನು ಪಠಿಸಬೇಕು;

ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||

ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||

ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||  ‌

ಇದನ್ನೂ ಓದಿ | Solar Eclipse 2022 | ಸೂರ್ಯ ಗ್ರಹಣ ಏಕೆ ಸಂಭವಿಸುತ್ತಿದೆ? ಇದನ್ನು ನೋಡುವುದು ಹೇಗೆ?

Exit mobile version