Site icon Vistara News

Spandana Vijay Raghavendra : ರಾಜ್‌ ಕುಟುಂಬದಲ್ಲೇಕೆ ಪದೇಪದೆ ದುರಂತ; ಅಷ್ಟಮಂಗಳ ಪ್ರಶ್ನೆ ಇಡಲು ಚಿಂತನೆ

Pranavananda swameeji

ಬೆಂಗಳೂರು: ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಅಕಾಲಿಕ ನಿಧನ ಕೇವಲ ಅವರೊಬ್ಬರ ಸಾವು ಮತ್ತು ಬದುಕಿನ ಪ್ರಶ್ನೆಯಾಗಿಲ್ಲ. ಹೃದಯಾಘಾತ (Heart attack) ಯಾಕೆ ಯುವಜನರನ್ನು ಈ ಪರಿ ಕಾಡುತ್ತಿದೆ ಎಂಬ ದೊಡ್ಡ ಪ್ರಶ್ನೆಯನ್ನು ಮತ್ತೊಮ್ಮೆ ಬಡಿದೆಬ್ಬಿಸಿದೆ. ಅದರ ಜತೆಗೆ ಎದ್ದಿರುವ ಇನ್ನೊಂದು ಪ್ರಶ್ನೆ ಎಂದರೆ ಡಾ. ರಾಜ್‌ ಕುಮಾರ್‌ (Dr. Rajkumar family) ಅವರ ಕುಟುಂಬದಲ್ಲಿ ಯಾಕೆ ಈ ರೀತಿ ಬೆನ್ನು ಬೆನ್ನಿಗೆ ದುರಂತಗಳು (Back to Back tragedies) ಸಂಭವಿಸುತ್ತಿವೆ ಎನ್ನುವುದು.

ಸ್ಪಂದನಾ ಸಾವಿನ ವಿಚಾರ ಬಂದಾಗ ಅಷ್ಟೊಳ್ಳೆ ಸಂಸಾರಕ್ಕೆ ಯಾರ ದೃಷ್ಟಿ ಬಿತ್ತೋ (Bad eyes) ಎನ್ನುವ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಡಾ. ರಾಜ್‌ ಕುಟುಂಬಕ್ಕೂ (Dr. Raj Family) ಹೀಗೇ ಆಗಿದೆಯಾ? ಅವರ ಒಳ್ಳೆಯತನ, ಜನರೊಂದಿಗೆ ಬೆರೆಯುವ ಗುಣಗಳ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.

Spandana Vijay Raghavendra

2006ರಲ್ಲಿ ಡಾ. ರಾಜ್‌ ಕುಮಾರ್‌ ಅವರು ತೀರಿಕೊಂಡಿದ್ದು ಹೃದಯಾಘಾತದಿಂದ. ಮನೆಯ ಹಿರಿಮಗ ರಾಘವೇಂದ್ರ ರಾಜ್‌ ಕುಮಾರ್‌ ತಮ್ಮ 27ನೇ ವಯಸ್ಸಿಗೇ ಆಂಜಿಯೋಪ್ಲಾಸ್ಟಿ ಮಾಡಿಸಿಕೊಳ್ಳಬೇಕಾಯಿತು. ಶಿವರಾಜ್‌ ಕುಮಾರ್‌ ಅವರಿಗೂ ಮೈಲ್ಡ್‌ ಆಗಿ ಹಾರ್ಟ್‌ ಅಟ್ಯಾಕ್‌ ಆಗಿತ್ತು. ಪುನೀತ್‌ರಂಥ ಫಿಟ್‌ ಎಂಡ್‌ ಫೈನ್‌ ಮ್ಯಾನ್‌ ಕೂಡಾ ಹೃದಯಾಘಾತಕ್ಕೆ ಬಲಿಯಾಗಿದ್ದು ನೋಡಿ ಕರ್ನಾಟಕವೇ ಬೆಚ್ಚಿಬಿದ್ದಿದೆ. ಈ ನಡುವೆ, ಪಾರ್ವತಮ್ಮ ಅವರ ತಮ್ಮನ ಮಗ ಸೂರಜ್‌ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾರೆ.

ಇದರ ಬೆನ್ನಿಗೇ ಪಾರ್ವತಮ್ಮ ಅವರ ತಮ್ಮ ಚಿನ್ನೇಗೌಡರ ಮಗ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ರೀತಿಯ ಸಾಲು ಸಾಲು ಸಾವು ನೋವುಗಳ ಹಿಂದೆ ಏನಿದೆ, ರಾಜ್‌ ಕುಟುಂಬಕ್ಕೇ ಯಾಕೆ ಹೀಗಾಗುತ್ತಿದೆ ಎನ್ನುವುದರ ಬಗ್ಗೆ ಅಷ್ಟಮಂಗಳ ಪ್ರಶ್ನೆ ಇಡುವ ಚಿಂತನೆ ನಡೆಯುತ್ತಿದೆ.

ಈಡಿಗ ಸಮುದಾಯದ ಸ್ವಾಮೀಜಿಗಳಾ ಪ್ರಣವಾನಂದ ಶ್ರೀಗಳು ಈ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾರೆ.

ʻʻನಾನು ದುಃಖದಲ್ಲಿ ಭಾಗಿಯಾಗಿರಬಹುದು, ಆದರೆ ಆ ಮಗುವಿನ ಅಗಲಿಕೆಗೆ ಎಷ್ಟೇ ಸಾಂತ್ವನ ಹೇಳುವುದು ಫಾರ್ಮಾಲಿಟಿ ಆಗುತ್ತದೆ. ಕುಟುಂಬದ ದುಃಖ ಭರಿಸುವ ಶಕ್ತಿ ನಾರಾಯಣಗುರುಗಳು ನೀಡಲಿʼʼ ಎಂದು ಹೇಳಿದರು ಪ್ರಣವಾನಂದ ಶ್ರೀ.

ಅಕಾಲಿಕ ಸಾವುಗಳ ಆಗುತ್ತವೆ‌. ಆದರೆ, ರಾಜಕುಮಾರ ಕುಟುಂಬದಲ್ಲಿ ಆಗುತ್ತಿರುವುದು ಅಕಾಲಿಕ ಸಾವು ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಇವೆಲ್ಲವೂ ನನ್ನ ಮನಸ್ಸಿನಲ್ಲಿ ಪ್ರಶ್ನೆಯಾಗಿದೆ.. ಇದೆಲ್ಲವೂ ಮುಗಿದ ಮೇಲೆ ಕುಟುಂಬದ ಜೊತೆ ಮಾತನಾಡಿ ಅಷ್ಟಮಂಗಳ ಪ್ರಶ್ನೆ ಇಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು. ಇಂಥ ಯಾವುದೇ ಚಿಂತನೆ ಇದ್ದರೂ ಅದರು 41 ದಿನಗಳ ಬಳಿಕ ಎಂದಿದ್ದಾರೆ ಪ್ರಣವಾನಂದ ಶ್ರೀ.

ಇದನ್ನೂ ಓದಿ : Spandana Vijay Raghavendra: ಯಾರ ಕೆಟ್ಟ ಕಣ್ಣು ಬಿತ್ತೋ.. : ನಟಿ ಸುಧಾರಾಣಿ

ಸರಳವಾಗಿ ಅಂತ್ಯಕ್ರಿಯೆ ಎಂದ ಪ್ರಣವಾನಂದ ಶ್ರೀ

ಮರಣಾನಂತರ ವಿಧಿ ವಿಧಾನಗಳು ಸರಳವಾಗಿರಬೇಕು ಎಂದು ನಾರಾಯಣಗುರುಗಳು ಹೇಳಿದ್ದಾರೆ. ನಾರಾಯಣಗುರುಗಳು ರಚಿಸಿದ ಧರ್ಮಗ್ರಂಥಗಳ ಪ್ರಕಾರ ಮೃತ್ಯು ಸಂಭವಿಸಿದ ಮೇಲೆ ಕೆಲ ಕೀರ್ತನೆಗಳು ಮಾಡಬೇಕು ಎಂದಿದೆ. ಆ ಮೂರು ಕೀರ್ತನೆಗಳು ಮಾಡಲಾಗಿದೆ ಎಂದು ಪ್ರಣವಾನಂದ ಶ್ರೀ ತಿಳಿಸಿದರು.

ಈಡಿಗ ಸಂಪ್ರದಾಯದಂತೆ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಹನ್ನೊಂದನೇ ದಿನಕ್ಕೆ ದಾಸೋಹ ಮಾಡಲಾಗುತ್ತದೆ. ಆವತ್ತು ಪಕ್ಷಿ, ಪ್ರಾಣಿಗಳಿಗೆ ಅನ್ನಹಾಕಬೇಕು. ವಿಧಿವಿಧಾನಗಳು ನಡೆಯುವ ಕಡೆ ಕೆಲ ಪೂಜೆಗಳನ್ನು ಮಾಡಬೇಕು. ಪುನೀತ್ ರಾಜಕುಮಾರ್ ಸಾವಿನ ಸಂದರ್ಭದಲ್ಲಿ ನಡೆದ ವಿಧಿವಿಧಾನಗಳು ಇವರಿಗೂ ಮಾಡಲಾಗುತ್ತದೆ ಎಂದು ವಿವರಿಸಿದರು.

Exit mobile version