Site icon Vistara News

ಕೋವಿಡ್ ಬಳಿಕ ಹೆಚ್ಚಿದೆ ದೈವ ಭಕ್ತಿ, ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರಿ ಡಿಮ್ಯಾಂಡ್‌

ಧಾರ್ಮಿಕ ಪ್ರವಾಸೋದ್ಯಮ

ನವ ದೆಹಲಿ: ಕೋವಿಡ್‌ ಬಳಿಕ ದೇಶದಲ್ಲಿ ದೇವರ ಮೇಲಿನ ಭಕ್ತಿ ವಿಪರೀತವಾಗಿ ಹೆಚ್ಚಿದಂತಿದೆ. ದೇಶದ ಜನ ಮೊದಲಿನಿಂದಲೂ ಧಾರ್ಮಿಕ ಮನೋಭಾವ ಹೊಂದಿದ್ದಾರೆ. ಆದರೆ, ಕೋವಿಡ್‌ ಸಂದರ್ಭದಲ್ಲಿ ಎದುರಾದ ಆತಂಕ ಭಯಗಳು ಇದನ್ನು ಮತ್ತಷ್ಟು ಹೆಚ್ಚಿಸಿವೆ. ಇದಕ್ಕೆ ಹೆಚ್ಚುತ್ತಿರುವ ಧಾರ್ಮಿಕ ಪ್ರವಾಸೋದ್ಯಮವೇ ಸಾಕ್ಷಿ ಎನ್ನುತ್ತದೆ ಥಾಮಸ್‌ ಕುಕ್‌ ವರದಿ. ಅಧ್ಯಯನದ ಪ್ರಕಾರ, ಧಾರ್ಮಿಕ ಪ್ರವಾಸೋದ್ಯಮದಲ್ಲಿ ಚಾರ್ ಧಾಮ್ ಯಾತ್ರೆ, ದೋ ಧಾಮ್ ಯಾತ್ರೆ, ನೇಪಾಳದ ಮುಕ್ತಿನಾಥ, ಅಮರನಾಥ ಯಾತ್ರೆ, ವೈಷ್ಣೋ ದೇವಿ, ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳು ಸೇರಿವೆ.

ಒಂದು ಕಡೆ ಜನರು ಧಾರ್ಮಿಕ ನೆಮ್ಮದಿಯನ್ನು ಬಯಸಿ ದೇವರ ದರ್ಶನಕ್ಕೆ ಹೋಗುತ್ತಿದ್ದರೆ, ಇನ್ನು ಕೆಲವರು ತಮ್ಮ ವ್ಯಾಪಾರ, ಉದ್ಯೋಗಗಳ ಉತ್ತೇಜನಕ್ಕೆ ದೇವರ ಅನುಗ್ರಹ ಪಡೆಯಲು ಬಯಸಿದ್ದಾರೆ. ಅಲ್ಲದೆ, ಮದುವೆ ಮತ್ತು ಮಗುವಿನ ಜನನದ ಹಿನ್ನೆಲೆಯಲ್ಲಿ ನಂಬಿದ ದೇವರಿಗೆ ಸೇವೆ ಸಲ್ಲಿಸಲು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಪ್ರವಾಸ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಥಾಮಸ್ ಕುಕ್ (ಭಾರತ) ಲಿಮಿಟೆಡ್‌ನ ಅಧ್ಯಕ್ಷರು ಹೇಳುವಂತೆ- ಸಾಂಕ್ರಾಮಿಕ ನಂತರ, ನಾವು ದೇವರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಆಶೀರ್ವಾದವನ್ನು ಕೋರಲು ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಗಣನೀಯ ಏರಿಕೆಯನ್ನು ನೋಡುತ್ತಿದ್ದೇವೆ. ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸರ್ಕಾರದ ಬಲವಾದ ಆದ್ಯತೆಯೊಂದಿಗೆ, ಹಿರಿಯ ನಾಗರಿಕರು ಮಾತ್ರವಲ್ಲ, ಕುಟುಂಬದ ಎಲ್ಲ ಸದಸ್ಯರು, ಸ್ನೇಹಿತರ ಗುಂಪುಗಳು- ಹೀಗೆ ವಿವಿಧ ವರ್ಗದ ಜನರು ಧಾರ್ಮಿಕ ಪ್ರವಾಸದಲ್ಲಿ ಆಸಕ್ತಿ ತೋರುತ್ತಿದ್ದಾರೆ. ನಮ್ಮ ಉತ್ಪನ್ನದ ಪೋರ್ಟ್‌ಫೋಲಿಯೊದಲ್ಲಿ ಅನುಕೂಲಕರವಾದ ತೀರ್ಥಯಾತ್ರೆಗಳು ಮತ್ತು ಯೋಗಕ್ಷೇಮವನ್ನು ಒಳಗೊಂಡಿರುವ ಕಸ್ಟಮೈಸ್ ಮಾಡಿದ ಆಯ್ಕೆಗಳನ್ನು ಒದಗಿಸುತ್ತಿದ್ದೇವೆ. ಸಂಸ್ಕೃತಿ, ಪಾಕಪದ್ಧತಿ ಮತ್ತು ಹೊರಾಂಗಣ ಸಾಹಸದಂತಹ ಅನನ್ಯ ಸ್ಥಳೀಯ ಅನುಭವಗಳನ್ನು ನೀಡಲು ನಮ್ಮ ಪ್ರವಾಸೋದ್ಯಮ ಪೋರ್ಟ್‌ಫೋಲಿಯೋವನ್ನು ಸಿದ್ಧಪಡಿಸಲಾಗಿದೆ’.

ಹಿರಿಯರಷ್ಟೇ ಹೋಗುತ್ತಿಲ್ಲ!

ಜನಸಂಖ್ಯೆಯ ಸುಮಾರು ಶೇ. 50ರಷ್ಟು ಮತ್ತು ಶೇ. 35ರಷ್ಟು ಕುಟುಂಬಗಳು ವೃದ್ಧರನ್ನು ಒಳಗೊಂಡಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಅಧ್ಯಯನದ ಪ್ರಕಾರ, ಈ ಯಾತ್ರೆಗಳಲ್ಲಿ ಪ್ರಮುಖವಾಗಿ ಚಾರ್ ಧಾಮ್ ಯಾತ್ರೆ, ದೋ ಧಾಮ್ ಯಾತ್ರೆ, ನೇಪಾಳದ ಮುಕ್ತಿನಾಥ ಯಾತ್ರೆ, ಅಮರನಾಥ ಯಾತ್ರೆ, ವೈಷ್ಣೋ ದೇವಿ, ವಾರಾಣಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಸೇರಿದಂತೆ ಪ್ರಮುಖ ಯಾತ್ರಾ ಸ್ಥಳಗಳು ಸೇರಿವೆ. ವೃದ್ಧರ ಹೊರತಾಗಿ, 30 ವರ್ಷದಿಂದ 45 ವರ್ಷ ವಯಸ್ಸಿನ ದಂಪತಿಗಳು ಮತ್ತು ಏಕಾಂಗಿ ಪ್ರಯಾಣಿಕರು, ಪ್ರವಾಸ ಕಂಪನಿಗಳ ಆಧ್ಯಾತ್ಮಿಕ ಪ್ಯಾಕೇಜ್‌ಗಳ ಕಡೆಗೆ ಬಲವಾದ ಒಲವನ್ನು ತೋರಿಸಿದ್ದಾರೆ. ಅವರು ಯೋಗ, ಧ್ಯಾನ ಮತ್ತು ಇತರ ಕ್ಷೇಮ ಕಾರ್ಯಕ್ರಮಗಳನ್ನು ಒಳಗೊಂಡಿರುವ ಪ್ಯಾಕೇಜ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಈ ಸಹಸ್ರಮಾನದಲ್ಲಿ ಜನಿಸಿದವರು ಮತ್ತು ಕಿರಿಯರು ಕೂಡ ಆಧ್ಯಾತ್ಮಿಕ ಪ್ರವಾಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ, ಇದು ಹೊರಾಂಗಣ-ಸಾಹಸ ಮತ್ತು ಸ್ಥಳೀಯ ಸಂಸ್ಕೃತಿ ಮತ್ತು ತಿಂಡಿ ತಿನಿಸುಗಳ ಅನುಭವಗಳನ್ನು ಅನ್ವೇಷಿಸಲು ಅವರಿಗೆ ಅವಕಾಶ ಒದಗಿಸುತ್ತದೆ.

ಇದನ್ನೂ ಓದಿ| Tirumala Update: ನಿರೀಕ್ಷೆಗೂ ಮೀರಿ ಭಕ್ತರ ಆಗಮನ; ಇನ್ನೆರಡು ದಿನ ಯಾತ್ರೆ ಕೈಗೊಳ್ಳದಂತೆ ಟಿಟಿಡಿ ಮನವಿ

Exit mobile version