ಚೆನ್ನೈ : ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಂದಿರ (Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಮಂಗಳವಾರ (ಜನವರಿ2ರಂದು) ಆರ್ಎಸ್ಎಸ್ ದಕ್ಷಿಣ ಕ್ಷೇತ್ರ ಪ್ರಚಾರಕ ಸೆಂಥಿಲ್ ಮತ್ತು ಹಿರಿಯ ಕಾರ್ಯಕರ್ತರು ಹಿರಿಯ ನಟನ ನಿವಾಸಕ್ಕೆ ತೆರಳಿ ಪ್ರಾಣ ಪ್ರತಿಷ್ಠಾನ ಸಮಾರಂಭದ ಆಹ್ವಾನವನ್ನು ಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ಲಲ್ಲಾನ ವಿಗ್ರಹದ ಪ್ರತಿಷ್ಠಾಪನೆ ಮಾಡಲಿದ್ದಾರೆ. ಈ ಭವ್ಯ ಕಾರ್ಯಕ್ರಮಕ್ಕೆ ದೇಶಾದ್ಯಂತ ಲಕ್ಷಾಂತರ ಮಂದಿ ನೇರ ಸಾಕ್ಷಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ನಾನಾ ಕ್ಷೇತ್ರಗಳ ಗಣ್ಯರಿಗೆ ಆಮಂತ್ರಣ ಪತ್ರವನ್ನು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ರಾಮಮಂದಿರ ಟ್ರಸ್ಟ್ ನೀಡುತ್ತಿವೆ. ಅಂತೆಯೇ ಆರ್ಎಸ್ಎಸ್ ಮುಖ್ಯಸ್ಥರು ರಜನೀಕಾಂತ್ ಅವರಿಗೆ ಆಮಂತ್ರಣ ಪತ್ರಿಕೆ ಕೊಟ್ಟಿದ್ದಾರೆ.
Rajinikanth invited to attend Ram Temple consecration ceremony in Ayodhya
— ANI Digital (@ani_digital) January 2, 2024
Read @ANI Story | https://t.co/lOH8TwYp72#Rajinikanth #RamMandir #RamMandirPranPratishtha pic.twitter.com/l3dPMBrm2w
ಆಮಂತ್ರಣ ಪತ್ರಿಕೆಯೊಂದಿಗೆ ಪೋಸ್ ನೀಡಿದ ರಜನಿಕಾಂತ್
ಚಿತ್ರಗಳಲ್ಲಿ, ರಜನಿಕಾಂತ್ ಮತ್ತು ಇತರ ನಾಯಕರು ಆಮಂತ್ರಣ ಪತ್ರಿಕೆಯನ್ನು ಹಿಡಿದಿದ್ದರು. ನಟ ಬಿಳಿ ಕುರ್ತಾ ಮತ್ತು ವೆಷ್ಟಿ ಧರಿಸಿದ್ದರು. ಈ ಫೋಟೋಗಳನ್ನು ಹಂಚಿಕೊಂಡಿರುವ ಬಿಜೆಪಿ ಮುಖಂಡ ರಾ.ಅರ್ಜುನಮೂರ್ತಿ ಅವರು “ಇಂದಿನ ಈ ಕ್ಷಣ ನನ್ನ ಜೀವನದ ಅತ್ಯುತ್ತಮ ಅನುಭವ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
“ನಮ್ಮ ಪ್ರೀತಿಯ ನಾಯಕ ಶ್ರೀ ರಜನೀಕಾಂತ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲು ಮತ್ತು ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಅಯೋಧ್ಯೆ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ಆರ್ಎಸ್ಎಸ್ ಕಾರ್ಯಕರ್ತರೊಂಎಇಗೆ ಅವರನ್ನು ಮತ್ತು ಅವರ ಕುಟುಂಬವನ್ನು ಆಹ್ವಾನಿಸಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ತಮಿಳಿನಲ್ಲಿ ಅರ್ಜನಮೂರ್ತಿ ಬರೆದ ಫೊಸ್ಟ್ ಇಲ್ಲಿದೆ
எனது வாழ்நாளில் கிடைத்த அரும்பாக்கியமாக இன்றைய நிகழ்வு அமைந்தது!
— Ra.Arjunamurthy | ரா.அர்ஜூனமூர்த்தி (@RaArjunamurthy) January 2, 2024
நம் அன்பு தலைவர் திரு. @rajinikanth அவர்களை அவரது இல்லத்தில் சென்று அயோத்தி, ராம ஜன்மபூமி தீர்த்த க்ஷேத்ரா சார்பில் அவரது குடும்பத்தினரையும் ஜனவரி 22 ம்தேதி அயோத்தி கும்பாபிஷேக நிகழ்வுக்கு வரவேண்டி ஆர்.எஸ்.எஸ்… pic.twitter.com/UcHakkRdLW
ಜನವರಿಯಲ್ಲಿ ಅಯೋಧ್ಯೆಗೆ ನಿತ್ಯ 3ರಿಂದ 5 ಲಕ್ಷ ಜನರ ಭೇಟಿ ನಿರೀಕ್ಷೆ!
ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿ (Ayodhya) ಈಗ ಪ್ರವಾಸೋದ್ಯಮ (Tourism) ಚಟುವಟಿಕೆಗಳ ಗರಿಗೆದರಿವೆ. ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ ವಿಮಾನ ನಿಲ್ದಾಣ (Ayodhya Airport) ಮತ್ತು ರೈಲು ನಿಲ್ದಾಣಗಳನ್ನು (Ayodhya Rail Station) ಉದ್ಘಾಟಿಸಿದರು. ಇದರೊಂದಿಗೆ ಅಯೋಧ್ಯೆಗೆ ಸಂಪರ್ಕಿಸುವ ಮಾರ್ಗಗಳು ಸುಲಭಗೊಂಡಿವೆ. ಹಾಗಾಗಿ, ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿದ್ದು, ಜನವರಿಯಲ್ಲಿ ಪ್ರತಿ ದಿನ ಅಯೋಧ್ಯೆಗೆ ಸುಮಾರು 3ರಿಂದ 5 ಲಕ್ಷ ಜನರು ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Ram Mandir : ಮೈಸೂರಿನ ಅರುಣ್ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ? ಇಲ್ಲಿದೆ ವಿವರ
ಜನವರಿ 22ರಂದು ರಾಮಮಂದಿರ ಉದ್ಘಾಟನೆಯ ನಂತರ ಅಯೋಧ್ಯೆ ಪ್ರವಾಸಿಗರಿಂದ ತುಂಬು ತುಳಕುವ ನಿರೀಕ್ಷೆ ಇದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಗೆ 7,000 ಜನರು ಮತ್ತು ದೇವಾಲಯವನ್ನು ತೆರೆದ ನಂತರ ಕನಿಷ್ಠ ಒಂದು ತಿಂಗಳವರೆಗೆ ಪ್ರತಿದಿನ 3-5 ಲಕ್ಷ ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2024ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಾಗ, ನಗರಕ್ಕೆ ಪ್ರವಾಸೋದ್ಯಮವು 10 ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು 2022ರಲ್ಲಿ 8,342.7% ವಾರ್ಷಿಕ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ನಂಬಲಾಗದ ರೀತಿಯಲ್ಲಿ ಏರಿಕೆಯನ್ನು ದಾಖಲಿಸಿತ್ತು. ಈ ಪೈಕಿ ಅಯೋಧ್ಯೆ ಜಿಲ್ಲೆಯಲ್ಲಿ 2.36 ಕೋಟಿ ದೇಶೀಯ ಮತ್ತು 1,465 ವಿದೇಶಿ ಪ್ರವಾಸಿಗರನ್ನು ಆಗಮಿಸಿದ್ದಾರೆ. 2021 ರಲ್ಲಿ 1.73 ಲಕ್ಷ ದೇಶಿ ಜನರು ಆಗಮಿಸಿದ್ದರು. ವಿದೇಶಿಗರ ಸಂಖ್ಯೆ ಶೂನ್ಯವಾಗಿತ್ತು. 2022ರ ಹೊಸ ವರ್ಷದಂದು ಸುಮಾರು 30 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದರು. 2023ರ ಮೊದಲ ದಿನದಲ್ಲಿಅಯೋಧ್ಯೆ ಪೊಲೀಸರು ಸಮಾರು 50 ಲಕ್ಷ ಜನರ ನಿರ್ವಹಣೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಮಮಂದಿರ ನಿರ್ಮಾಣದಿಂದ ಅಯೋಧ್ಯೆಯಲ್ಲಿ ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗಿವೆ. ಅಯೋಧ್ಯೆ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ಸ್ಥಳೀಯರು ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ. ದೇವಾಲಯದ ಸುತ್ತಲಿನ ಪ್ರದೇಶದ ಸುತ್ತಲೂ ಹಲವಾರು ಹೊಸ ಮಳಿಗೆಗಳನ್ನು ತೆರೆಯಲಾಗಿದೆ, ಪ್ರವಾಸಿಗರಿಗೆ ವಿವಿಧ ಸ್ಥಳೀಯ ಉತ್ಪನ್ನಗಳನ್ನು ನೀಡುತ್ತಿದೆ. ಸಣ್ಣ ಮತ್ತು ದೊಡ್ಡ ಪ್ರಮಾಣದ ವ್ಯಾಪಾರ ಮಾಲೀಕರಿಗೆ, ವಸತಿ, ಸಾರಿಗೆ, ಆಹಾರ, ಸರಕು ಮತ್ತು ಸೇವೆಗಳಿಗೆ ಹೆಚ್ಚಿದ ಬೇಡಿಕೆಯಿಂದ ಎಲ್ಲರೂ ಆದಾಯದ ಮೂಲಗಳನ್ನು ಪಡೆಯುತ್ತಾರೆ.