Site icon Vistara News

Suttur jatre | ಮೈಸೂರು ಸುತ್ತೂರು ಜಾತ್ರೆಗೆ ದಿನಗಣನೆ; ಕೃಷಿ‌ಮೇಳದೊಂದಿಗೆ ಜನಜಾಗೃತಿ ಯಾತ್ರೆಗೆ ಸಿಎಂ ಚಾಲನೆ

ಸುತ್ತೂರು ಜಾತ್ರಾ ಮಹೋತ್ಸವ

ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾದ ಸುತ್ತೂರಿನ ಜಾತ್ರೆ (Suttur jatre) ಜನವರಿ 18ರಿಂದ 23 ರವರೆಗೆ ಆರು ದಿನಗಳ ಕಾಲ ನೆರವೇರಲಿದೆ. ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಇದಾಗಿದ್ದು, ಕೃಷಿ ಮೇಳದೊಂದಿಗೆ ಜನಜಾಗೃತಿ ಯಾತ್ರೆಯಾಗಿ ಆಚರಿಸಲಾಗುತ್ತಿದೆ. ನಿತ್ಯ ೨ ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, ಮೊದಲ ದಿನ ವಸ್ತು ಪ್ರದರ್ಶನ‌ ಹಾಗೂ ಕೃಷಿ‌ ಮೇಳವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ.

ಜ.19ರಂದು ಸಾಮೂಹಿಕ ವಿವಾಹ ನಡೆಯಲಿದ್ದು, 115 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಸಲಿದ್ದಾರೆ. ಜ.20ಕ್ಕೆ ಅದ್ಧೂರಿ ರಥೋತ್ಸವ ನಡೆಯಲಿದ್ದು, ಜ. 21ರಂದು ಕೃಷಿ ವಿಚಾರ ಸಂಕಿರಣ, 22ಕ್ಕೆ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ, ಜ. 23ರಂದು ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ‌ ಸಮಾರೋಪ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಜಾತ್ರೆಯಲ್ಲಿ ಯಾವುದೇ ಲೋಪವಾಗದಂತೆ ವಿವಿಧ ಸಮಿತಿಗಳ ರಚಿಸಲಾಗಿದೆ. ಜಾತ್ರೆಗೆ ಅನೇಕ ಗಣ್ಯಾತಿಗಣ್ಯರು ಬರಲಿದ್ದಾರೆ. ಇನ್ನೂ ದೂರದ ಊರಿನಿಂದ ಬಂದ ಭಕ್ತರಿಗೆ ಪ್ರಸಾದದ ಜತೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜತೆಗೆ ಈ ಬಾರಿ ದನಗಳ ಪರಿಷೆಯನ್ನು ಆಯೋಜಿಸುವುದನ್ನು ನಿಷೇಧ ಮಾಡಲಾಗಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಚರ್ಮಗಂಟು ರೋಗ ಹರುಡುತ್ತಿರುವುದರಿಂದ ದನಗಳ ಪರಿಷೆ ರದ್ದು ಮಾಡಲಾಗಿದೆ.

ಇದನ್ನೂ ಓದಿ | Murder Case | ಪತ್ನಿ ಶೀಲ ಶಂಕಿಸಿದ ಪತಿ; ಉಸಿರುಗಟ್ಟಿಸಿ ಕೊಂದು ಪರಾರಿಯಾದ ಪಾಪಿ

Exit mobile version